5 ದಿನವಾದ್ರೂ ಬಾರದ ಕೊವಿಡ್ ರಿಪೋರ್ಟ್: ಗಲಾಟೆಗಿಳಿದ ಸಾರ್ವಜನಿಕರು, ಎಲ್ಲಿ?
ಕೊಪ್ಪಳ: ಕೊವಿಡ್ ಪರೀಕ್ಷೆ ನಡೆಸಿ 5 ದಿನವಾದರೂ ಪರೀಕ್ಷಾ ವರದಿ ಬಾರದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಸಾರ್ವಜನಿಕರು ಇಂದು ಜಿಲ್ಲೆಯ ಗಂಗಾವತಿ ಉಪವಿಭಾಗ ಆಸ್ಪತ್ರೆ ಎದುರು ಧರಣಿ, ಗಲಾಟೆಗೆ ಮುಂದಾದರು. ಐದು ದಿನಗಳ ಹಿಂದೆ ಕೆಲ ಸ್ಥಳೀಯರಿಂದ ಗಂಟಲು ದ್ರವ ಹಾಗೂ ರಕ್ತದ ಮಾದರಿ ಪಡೆದ ಆರೋಗ್ಯಾಧಿಕಾರಿಗಳು ಅದನ್ನು ಕೊವಿಡ್ ಪರೀಕ್ಷೆಗೆ ರವಾನಿಸಿದ್ದರು. ಆದರೆ, ಇಷ್ಟು ದಿನವಾದ್ರೂ ರಿಪೋರ್ಟ್ ಬಾರದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ. ಇದಕ್ಕೆ ಅವರು ನಾವು ಕೇವಲ ಟೆಸ್ಟ್ ಮಾಡುತ್ತೇವೆ. ಆದರೆ, ಪರೀಕ್ಷಾ […]

ಕೊಪ್ಪಳ: ಕೊವಿಡ್ ಪರೀಕ್ಷೆ ನಡೆಸಿ 5 ದಿನವಾದರೂ ಪರೀಕ್ಷಾ ವರದಿ ಬಾರದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಸಾರ್ವಜನಿಕರು ಇಂದು ಜಿಲ್ಲೆಯ ಗಂಗಾವತಿ ಉಪವಿಭಾಗ ಆಸ್ಪತ್ರೆ ಎದುರು ಧರಣಿ, ಗಲಾಟೆಗೆ ಮುಂದಾದರು.
ಐದು ದಿನಗಳ ಹಿಂದೆ ಕೆಲ ಸ್ಥಳೀಯರಿಂದ ಗಂಟಲು ದ್ರವ ಹಾಗೂ ರಕ್ತದ ಮಾದರಿ ಪಡೆದ ಆರೋಗ್ಯಾಧಿಕಾರಿಗಳು ಅದನ್ನು ಕೊವಿಡ್ ಪರೀಕ್ಷೆಗೆ ರವಾನಿಸಿದ್ದರು. ಆದರೆ, ಇಷ್ಟು ದಿನವಾದ್ರೂ ರಿಪೋರ್ಟ್ ಬಾರದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ. ಇದಕ್ಕೆ ಅವರು ನಾವು ಕೇವಲ ಟೆಸ್ಟ್ ಮಾಡುತ್ತೇವೆ. ಆದರೆ, ಪರೀಕ್ಷಾ ವರದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕೇಳಿ ಎಂದು ಹೇಳಿ ಸುಮ್ಮನಾದರಂತೆ.
ಇದರಿಂದ ಸಿಟ್ಟಿಗೆದ್ದ ಜನರು ಆಸ್ಪತ್ರೆ ಮುಂದೆ ಕೂಗಾಟ ಪ್ರಾರಂಭಿಸಿದರು. ಸುಮ್ನೆ ಬಂದು ಸ್ಯಾಂಪಲ್ ಹಿಡಕೊಂಡು ಹೋಗ್ತೀರಿ. ಯಾವ ಆಧಾರದ ಮೇಲೆ ತಗೊಂಡು ಹೋದ್ರಿ ಎಂದು ಮುಖ್ಯ ವೈದ್ಯಾಧಿಕಾರಿ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ನಮ್ಮ ಪರೀಕ್ಷಾ ವರದಿ ಕೊಡಿ ಅಂತಾ ಗಲಾಟೆ ಮಾಡಿದರು.