Covid 19 Karnataka Update: ಕರ್ನಾಟಕದಲ್ಲಿ 1217 ಮಂದಿಗೆ ಕೊರೊನಾ ಸೋಂಕು, 25 ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 31, 2021 | 8:02 PM

ಪಾಸಿಟಿವಿಟಿ ಪ್ರಮಾಣ ಶೇ 0.94 ಇದ್ದರೆ, ಸಾವಿನ ಪ್ರಮಾಣ ಶೇ 2.05 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 29,49,445 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 28,93,715 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 18,386 ಸಕ್ರಿಯ ಪ್ರಕರಣಗಳಿವೆ.

Covid 19 Karnataka Update: ಕರ್ನಾಟಕದಲ್ಲಿ 1217 ಮಂದಿಗೆ ಕೊರೊನಾ ಸೋಂಕು, 25 ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರ ಒಟ್ಟು 1217 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 1198 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇ 0.94 ಇದ್ದರೆ, ಸಾವಿನ ಪ್ರಮಾಣ ಶೇ 2.05 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 29,49,445 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 28,93,715 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 18,386 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 37,318 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ 287 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 7 ಜನರು ಸಾವನ್ನಪ್ಪಿದ್ದಾರೆ. 185 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ 7438 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಒಟ್ಟು 12,37,837 ಮಂದಿಯಲ್ಲಿ ಈವರೆಗೆ ಸೋಂಕು ದೃಢಪಟ್ಟಿದ್ದು, 12,14,405 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 15,993 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 287, ದಕ್ಷಿಣ ಕನ್ನಡ 224, ಉಡುಪಿ 150, ಮೈಸೂರು 127, ಕೊಡಗು 89, ಹಾಸನ 56, ಕೋಲಾರ 55, , ಉತ್ತರ ಕನ್ನಡ 41, ಶಿವಮೊಗ್ಗ 36, ತುಮಕೂರು 30, ಚಿಕ್ಕಮಗಳೂರು 25, ಬೆಂಗಳೂರು ಗ್ರಾಮಾಂತರ 18, ಬೆಳಗಾವಿ 17, ಮಂಡ್ಯ 11, ದಾವಣಗೆರೆ 10, ಧಾರವಾಡ 9, ಚಿತ್ರದುರ್ಗ 8, ರಾಮನಗರ 6, ಚಾಮರಾಜನಗರ 5, ವಿಜಯಪುರ 4, ಕಲಬುರಗಿ 3, ಚಿಕ್ಕಬಳ್ಳಾಪುರ 2, ಕೊಪ್ಪಳ, ಹಾವೇರಿ, ಯಾದಗಿರಿ, ಗದಗ 1.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ಬೆಂಗಳೂರು ನಗರ 7, ಮೈಸೂರು 4, ಕೊಡಗು 2, ತುಮಕೂರು, ಉಡುಪಿ, ವಿಜಯಪುರ ಕೋಲಾರ, ಚಾಮರಾಜನಗರ, ಬೆಳಗಾವಿ 1.

(Covid Karnataka Numbers 1217 Infected 25 deaths on August 31)

ಇದನ್ನೂ ಓದಿ: ಇದು ಸ್ವಾತಂತ್ರ್ಯ ಹೋರಾಟವೇನೂ ಅಲ್ಲ, ಹೋರಾಡುವುದಾದರೆ ಕೊವಿಡ್ ವಿರುದ್ಧ ಹೋರಾಡಿ: ಬಿಜೆಪಿ ವಿರುದ್ಧ ಗುಡುಗಿದ ಉದ್ಧವ್ ಠಾಕ್ರೆ

ಇದನ್ನೂ ಓದಿ: ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ; ಕೊರೊನಾ ಲಸಿಕೆ ಪ್ರಮಾಣ 10 ಲಕ್ಷಕ್ಕೆ ಏರಿಕೆ: ಡಾ ಕೆ ಸುಧಾಕರ್

Published On - 8:01 pm, Tue, 31 August 21