ಕೋಲಾರದ ದೊಡ್ಡ ಅಯ್ಯೂರು ಗುಡ್ಡಗಳಲ್ಲಿ ಗಣಿಗಾರಿಕೆ ನಡೆಸಲು ಹೈಕೋರ್ಟ್ ತಡೆ; ಗ್ರಾಮಸ್ಥರಿಗೆ ಜಯ

ಗಣಿಗಾರಿಕೆ ನಡೆಯುತ್ತಿರುವ ಗುಡ್ಡದಲ್ಲಿ ಆಂಜನೇಯ ಸ್ವಾಮಿ, ಈರಣ್ಣ ಸ್ವಾಮಿ, ಪಟಾಲಮ್ಮ ದೇವಿ, ಗಂಗಮ್ಮ‌ದೇವಿ ದೇಗುಲವಿದೆ. ಅಲ್ಲಿ ಗಣಿಗಾರಿಕೆ ನಡೆಸುವದರಿಂದ‌ ಕಾಡು ಹಾಗೂ ನೀರಿನ ಮೂಲ‌ ನಾಶವಾಗುತ್ತದೆ ಎಂದು ಗ್ರಾಮಸ್ಥರ ಪರವಾಗಿ ವಕೀಲ ಶಿವಪ್ರಕಾಶ್ ವಾದ ಮಂಡಿಸಿದ್ದರು.

ಕೋಲಾರದ ದೊಡ್ಡ ಅಯ್ಯೂರು ಗುಡ್ಡಗಳಲ್ಲಿ ಗಣಿಗಾರಿಕೆ ನಡೆಸಲು ಹೈಕೋರ್ಟ್ ತಡೆ; ಗ್ರಾಮಸ್ಥರಿಗೆ ಜಯ
ಕರ್ನಾಟಕ ಹೈಕೋರ್ಟ್
Follow us
TV9 Web
| Updated By: guruganesh bhat

Updated on:Aug 31, 2021 | 8:32 PM

ಬೆಂಗಳೂರು: ಗಣಿಗಾರಿಕೆಯಿಂದ ಕೋಲಾರದ ಬೆಟ್ಟಗಳ ನಾಶವಾಗುತ್ತಿರುವದಕ್ಕೆ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದ್ದು, ದೊಡ್ಡ ದೊಡ್ಡ ಅಯ್ಯೂರುನಲ್ಲಿನ ಕಲ್ಲು ಗಣಿಗಾರಿಕೆಗೆ ಹೈಕೋರ್ಟ್ ತಡೆ ಒಡ್ಡಿದೆ. ಕೋಲಾರದ ಗುಡ್ಡಗಳು ವಿಶಿಷ್ಟ ಸೌಂದರ್ಯ ಹೊಂದಿವೆ. ಇಂತಹ ಗುಡ್ಡಗಳನ್ನು ಬೇರೆಲ್ಲೂ ಕಂಡಿಲ್ಲ. ಗುಡ್ಡ ನಾಶಪಡಿಸಿದರೆ ಮುಂದಿನ ಜನಾಂಗಕ್ಕೆ ಉಳಿಸುವುದೇನು? ಅರಣ್ಯ, ಗುಡ್ಡಗಳು ಪ್ರಾಣಿಗಳು ಉಳಿಯುವುದು ಬೇಡವೇ? ಎಂದು ಹೈಕೋರ್ಟ್​ ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈಕುರಿತು ರಾಜ್ಯ ಸರ್ಕಾರದ ಪ್ರತಿಕ್ರಿಯಿಸಲು ಹೈಕೋರ್ಟ್ ತಿಳಿಸಿದೆ.

ಗಣಿಗಾರಿಕೆಯನ್ನು ನಿಲ್ಲಿಸುವಂತೆ ದೊಡ್ಡ ಅಯ್ಯೂರು ಸುತ್ತಮುತ್ತಲಿನ ಗ್ರಾಮಸ್ಥರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಗಣಿಗಾರಿಕೆ ನಡೆಯುತ್ತಿರುವ ಗುಡ್ಡದಲ್ಲಿ ಆಂಜನೇಯ ಸ್ವಾಮಿ, ಈರಣ್ಣ ಸ್ವಾಮಿ, ಪಟಾಲಮ್ಮ ದೇವಿ, ಗಂಗಮ್ಮ‌ದೇವಿ ದೇಗುಲವಿದೆ. ಅಲ್ಲಿ ಗಣಿಗಾರಿಕೆ ನಡೆಸುವದರಿಂದ‌ ಕಾಡು ಹಾಗೂ ನೀರಿನ ಮೂಲ‌ ನಾಶವಾಗುತ್ತದೆ ಎಂದು ಗ್ರಾಮಸ್ಥರ ಪರವಾಗಿ ವಕೀಲ ಶಿವಪ್ರಕಾಶ್ ವಾದ ಮಂಡಿಸಿದ್ದರು.

ಬೆಂಗಳೂರಿನ ಶೌಚಾಲಯಗಳ ಸರ್ವೆ ನಡೆಸಲು ಹೈಕೋರ್ಟ್ ಸೂಚನೆ ಬೆಂಗಳೂರು: ಬೆಂಗಳೂರಿನ ಶೌಚಾಲಯಗಳ ಸರ್ವೆ ನಡೆಸಲು ಹೈಕೋರ್ಟ್ ಆದೇಶಿಸಿದ್ದು, ಈಕುರಿತು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮಹತ್ವದ ಸೂಚನೆ ನೀಡಿದೆ. ನೀರಿನ ಸೌಕರ್ಯ, ಶುಚಿತ್ವದ ಬಗ್ಗೆ ಸರ್ವೆ ನಡೆಸುವಮತೆ ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಬೆಂಗಳೂರಿನ ಶೌಚಾಲಯಗಳ ಕುರಿತ ವರದಿಯನ್ನು ಅಕ್ಟೋಬರ್ 7 ರೊಳಗೆ ಸಲ್ಲಿಸಲು ಸಹ ಹೈಕೋರ್ಟ್ ಸೂಚಿಸಿದೆ. ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಸೂಚನೆ ನೀಡಿದೆ. ಹಲವೆಡೆ ಶೌಚಾಲಯಗಳಲ್ಲಿ ಸ್ವಚ್ಚತೆ ಕಾಪಾಡಿಲ್ಲ. ಕೆಲವೆಡೆ ಶೌಚಾಲಯವನ್ನೇ ಅಡುಗೆ ಮನೆಯನ್ನಾಗಿ ಬಳಸುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್ ವಾದ ಮಂಡಿಸಿದ್ದರು.

ಇದನ್ನೂ ಓದಿ: 

ಕೋಲಾರದ ಕಲ್ಲು ಕುಟುಕರ ಸವಾಲಿನಂತಹ ಕಷ್ಟದ ಕೆಲಸಕ್ಕೆ ಬೇಕಿದೆ ಕಾನೂನಾತ್ಮಕ ಪರಿಹಾರ

ಕೋಲಾರ: ಚಿನ್ನದ ನಾಡಿನಲ್ಲಿವೆ ಅಪರೂಪದ ಕೃಷ್ಣಮೃಗಗಳು!; ಬೇಕಿದೆ ಜವಾಬ್ದಾರಿಯುತ ರಕ್ಷಣೆಯ ಹೊಣೆ

(Karnataka High Court barriers to mining in Kolars Eyuru hills Victory for the villagers)

Published On - 8:13 pm, Tue, 31 August 21

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ