ಮಂಡ್ಯದ ಮಿಮ್ಸ್‌ನಲ್ಲಿ ಕೊರೊನಾ ಸೋಂಕಿತರ ಪರದಾಟ; ಬೆಡ್ ಇಲ್ಲದೆ ಕುಳಿತಲ್ಲೇ ಆಕ್ಸಿಜನ್ ಪಡೆಯುವ ದುಃಸ್ಥಿತಿ ನಿರ್ಮಾಣ

|

Updated on: May 10, 2021 | 2:50 PM

ಮಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿರು ಬೆಡ್​ನ ಅಭಾವದಿಂದ ಕುಳಿತಲ್ಲೇ ಆಕ್ಸಿಜನ್ ಪಡೆಯುವ ದುಃಸ್ಥಿತಿ ನಿರ್ಮಾಣವಾಗಿದ್ದು, ಕಾರಿಡಾರ್‌ನಲ್ಲಿಯೇ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಒಬ್ಬರ ಇಬ್ಬರ ಸಮಸ್ಯೆ ಅಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಜನ ಹೀಗೆ ನರಳಾಡುತ್ತಿದ್ದಾರೆ.

ಮಂಡ್ಯದ ಮಿಮ್ಸ್‌ನಲ್ಲಿ ಕೊರೊನಾ ಸೋಂಕಿತರ ಪರದಾಟ; ಬೆಡ್ ಇಲ್ಲದೆ ಕುಳಿತಲ್ಲೇ ಆಕ್ಸಿಜನ್ ಪಡೆಯುವ ದುಃಸ್ಥಿತಿ ನಿರ್ಮಾಣ
ಬೆಡ್ ಇಲ್ಲದೆ ಚೆರ್​ನಲ್ಲಿ ಕುಳಿತು ಚಿಕಿತ್ಸೆ ಪಡೆಯುತ್ತಿರುವ ದೃಶ್ಯ
Follow us on

ಮಂಡ್ಯ: ಕೊರೊನಾ ಎರಡನೇ ಅಲೆ ವೇಗಗತಿಯಲ್ಲಿ ಹಬ್ಬಿದ್ದು, ಸೋಂಕಿತ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದೆ. ಇದರ ಜೊತೆಗೆ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಈ ಮಧ್ಯೆ ಕೊವಿಡ್ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಮತ್ತು ವೆಂಟಿಲೇಟರ್ ಕೊರತೆ ಇದೆ ಎನ್ನುವ ಕೂಗು ಕೂಡ ಕೇಳಿಬರುತ್ತದೆ. ಈ ಸಾಲಿಗೆ ಮಂಡ್ಯ ಕೂಡ ಸೆರ್ಪಡೆಯಾಗಿದ್ದು, ಜಿಲ್ಲೆಯ ಮಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿತರು ಬೆಡ್ ಇಲ್ಲದೆ ನರಳಾಡುತ್ತಿದ್ದಾರೆ.

ಮಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿರು ಬೆಡ್​ನ ಅಭಾವದಿಂದ ಕುಳಿತಲ್ಲೇ ಆಕ್ಸಿಜನ್ ಪಡೆಯುವ ದುಃಸ್ಥಿತಿ ನಿರ್ಮಾಣವಾಗಿದ್ದು, ಕಾರಿಡಾರ್‌ನಲ್ಲಿಯೇ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಒಬ್ಬರ ಇಬ್ಬರ ಸಮಸ್ಯೆ ಅಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಜನ ಹೀಗೆ ನರಳಾಡುತ್ತಿದ್ದಾರೆ. ಇದರ ಜೊತೆಗೆ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲಿ ನರಕ ಅನುಭವಿಸುತ್ತಿದ್ದಾರೆ.

ಇನ್ನು ಎಮರ್​ಜೆನ್ಸಿ ವಾರ್ಡ್​ ಪಕ್ಕದಲ್ಲಿಯೇ ಜನ ಫ್ಯಾನ್​ಗಳಿಲ್ಲದೆ ನರಳಾಡುತ್ತಿದ್ದು, ಸೋಂಕಿತರ ಸಂಬಂಧಿಕರು ತಮ್ಮ ಮೊಬೈಲ್​ಗಳನ್ನೇ ಟಾರ್ಚ್ ಮಾಡಿಕೊಂಡಿದ್ದಾರೆ. ಇನ್ನು ಕೈ ಮತ್ತು ಮೆಡಿಕಲ್ ರಿಪೋರ್ಟ್​ಗಳನ್ನೇ ಫ್ಯಾನ್​ಗಳನ್ನಾಗಿ ಮಾಡಿಕೊಂಡಿದ್ದಾರೆ. ಸದ್ಯ ಸಂಕಷ್ಟದಲ್ಲಿರುವ ಜನರಿಗೆ ಸೂಕ್ತ ಚಿಕಿತ್ಸೆ ಕೊಡಿ ಎಂದು ರೋಗಿಗಳ ಸಂಬಂಧಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

ಹೊಟ್ಟೆ ನೋವಿನಿಂದ ಬಳಲುತ್ತಿರುವ ರೋಗಿಗೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲ; 4 ದಿನದಿಂದ ತುಮಕೂರಿನ ವ್ಯಕ್ತಿ ಪರದಾಟ

ಗದಗದಲ್ಲೂ ಶುರುವಾಗಿದೆ ಬೆಡ್ಗಾಗಿ ಹಾಹಾಕಾರ.. ಜಿಮ್ಸ್‌ ಆಸ್ಪತ್ರೆಯಲ್ಲಿ ಡಿಸ್ಚಾರ್ಜ್ ಆದ್ರೆ ಮಾತ್ರ ಸೋಂಕಿತರಿಗೆ ಬೆಡ್