ಲಾಕ್ಡೌನ್ ನಡುವೆ ಕಾರವಾರದಲ್ಲಿ ಅಂಗವಿಕಲನಿಂದ ಸಮಾಜ ಸೇವೆ
ಅಂಗವಿಕಲರಾದ ಕಾರವಾರ ನಿವಾಸಿ ಜಗದೀಶ್ ಎಂಬುವವರು ಫ್ರಂಟ್ ಲೈನ್ ವಾರಿಯರ್ಸ್ ಪೊಲೀಸರಿಗೆ ನೀರು, ಜ್ಯೂಸ್ ಮತ್ತು ಬಿಸ್ಕತ್ತು ನೀಡುವ ಮೂಲಕ ತನ್ನ ಕೈಯಲ್ಲಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜಗದೀಶ್ ಅಪಘಾತದಲ್ಲಿ ಒಂದು ಕೈಯನ್ನು ಕಳೆದುಕೊಂಡಿದ್ದರು.
ಕಾರವಾರ: ಕೊರೊನಾ ಆರ್ಭಟ ಎಲ್ಲಿಗೆ ಬಂದು ತಲುಪುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಅನಿವಾರ್ಯವಾಗಿ ಇಂದಿನಿಂದ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೊಳಿಸಿದೆ. ಕಠಿಣ ನಿಯಮಗಳು ಜಾರಿಯಾಗಿದ್ದರು ರಾಜ್ಯದ ಹಲವು ಕಡೆ ಬೇಜಾವಬ್ದಾರಿಯಿಂದ ಬೇಕಾಬಿಟ್ಟಿಯಾಗಿ ಜನ ಓಡಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಅಂಗವಿಕಲರೊಬ್ಬರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.
ಅಂಗವಿಕಲರಾದ ಕಾರವಾರ ನಿವಾಸಿ ಜಗದೀಶ್ ಎಂಬುವವರು ಫ್ರಂಟ್ ಲೈನ್ ವಾರಿಯರ್ಸ್ ಪೊಲೀಸರಿಗೆ ನೀರು, ಜ್ಯೂಸ್ ಮತ್ತು ಬಿಸ್ಕತ್ತು ನೀಡುವ ಮೂಲಕ ತನ್ನ ಕೈಯಲ್ಲಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜಗದೀಶ್ ಅಪಘಾತದಲ್ಲಿ ಒಂದು ಕೈಯನ್ನು ಕಳೆದುಕೊಂಡಿದ್ದರು. ಆದರೂ, ಒಂದೇ ಕೈಯಲ್ಲಿ ಎಂ-80 ಚಲಾಯಿಸುತ್ತಾ ಇಡೀ ನಗರ ಸುತ್ತಾಡಿ ತನ್ನ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ.
ಬಿಸಿಲಿನಲ್ಲಿ ಇಡೀ ದಿನ ನಿಂತು ಬಸವಳಿಯೋ ಪೊಲೀಸರ ಹೊಟ್ಟೆಯನ್ನು ಜಗದೀಶ್ ತಣ್ಣಗಿರಿಸುತ್ತಿದ್ದಾರೆ. ಹೋಟೆಲ್ನಲ್ಲಿ ಕೆಲಸ ಮಾಡುವ ಇವರು ಕಳೆದ ಲಾಕ್ಡೌನ್ ಸಂದರ್ಭದಲ್ಲೂ ಸೇವೆ ನೀಡಿದ್ದರು. ಈ ಬಾರಿ ಮತ್ತೆ ಲಾಕ್ಡೌನ್ ಸಂದರ್ಭ ನೀರು, ಜ್ಯೂಸ್, ಬಿಸ್ಕತ್ತು ನೀಡುತ್ತಿದ್ದಾರೆ.
ಇದನ್ನೂ ಓದಿ
ಕೊರೊನಾಗೆ ಬಲಿಯಾಗಿದ್ದ ವೃದ್ಧ ಮಹಿಳೆಯೊಬ್ಬರ ಅಂತ್ಯಸಂಸ್ಕಾರ ಮಾಡಿದ ವೈದ್ಯ
(Doing social service amidst a disabled lockdown at Karwar)