AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದಲ್ಲಿ ಮಂಗಳಮುಖಿಗೆ ಪೊಲೀಸರಿಂದ ಲಾಠಿ ಏಟು; ಜುಟ್ಟು ಹಿಡಿದು ಠಾಣೆಗೆ ಕರೆದೊಯ್ದ ಪಿಎಸ್ಐ

ಪೊಲೀಸರು ಅನಗತ್ಯವಾಗಿ ಓಡಾಡಬೇಡ ಎಂದು ಹೇಳಿ ಮಂಗಳಮುಖಿಯನ್ನು ಕಳುಹಿಸಿದ್ದರು. ಆದರೆ ಮಂಗಳಮುಖಿ ಸ್ಮಿತಾ ಮನೆಗೆ ವಾಪಸ್ ಹೋಗಿ ಮತ್ತೆ ಹೊರ ಬಂದಿದ್ದರು. ಈ ವೇಳೆ ಮತ್ತೆ ಏಕೆ ಬಂದೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ

ಕೋಲಾರದಲ್ಲಿ ಮಂಗಳಮುಖಿಗೆ ಪೊಲೀಸರಿಂದ ಲಾಠಿ ಏಟು; ಜುಟ್ಟು ಹಿಡಿದು ಠಾಣೆಗೆ ಕರೆದೊಯ್ದ ಪಿಎಸ್ಐ
ಮಂಗಳಮುಖಿಗೆ ಲಾಠಿ ಏಟು ನೀಡಿದ ಪಿಎಸ್ಐ ವೇದಾವತಿ
sandhya thejappa
sandhya thejappa|

Updated on: May 10, 2021 | 1:20 PM

Share

ಕೋಲಾರ: ಮೆಡಿಕಲ್ ಶಾಪ್​ಗೆ ಹೋಗಬೇಕೆಂದು ನೆಪ ಹೇಳಿದ್ದ ಮಂಗಳಮುಖಿಗೆ ಪೊಲೀಸರು ಲಾಠಿ ರುಚಿ ನೀಡಿದ್ದಾರೆ. ಈ ಘಟನೆ ಕೋಲಾರ ನಗರದ ಅಮ್ಮವಾರಪೇಟೆ ವೃತ್ತದಲ್ಲಿ ನಡೆದಿದೆ. ಪೊಲೀಸರು ಅನಗತ್ಯವಾಗಿ ಓಡಾಡಬೇಡ ಎಂದು ಹೇಳಿ ಮಂಗಳಮುಖಿಯನ್ನು ಕಳುಹಿಸಿದ್ದರು. ಆದರೆ ಮಂಗಳಮುಖಿ ಸ್ಮಿತಾ ಮನೆಗೆ ವಾಪಸ್ ಹೋಗಿ ಮತ್ತೆ ಹೊರ ಬಂದಿದ್ದರು. ಈ ವೇಳೆ ಮತ್ತೆ ಏಕೆ ಬಂದೆ ಎಂದು ಪೊಲೀಸರು ಪ್ರಶ್ನಿಸಿದಾಗ ಸ್ಮಿತಾ ಅಸಭ್ಯವಾಗಿ ವರ್ತಿಸಿದ್ದಾರೆ. ಕೂಡಲೇ ಕೋಪಗೊಂಡ ಗಲ್ ಪೇಟೆ ಪೊಲೀಸ್ ಪಿಎಸ್​ಐ ವೇದಾವತಿ ಮಂಗಳಮುಖಿ ಬಲಗೈನಲ್ಲಿ ರಕ್ತ ಬರುವಂತೆ ಲಾಟಿ ಏಟು ನೀಡಿದ್ದಾರೆ. ಜೊತೆಗೆ ಜುಟ್ಟು ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಚಾಲಕನಿಗೆ ಕಪಾಳಮೋಕ್ಷ ಬೆಳಗಾವಿ: ಕುಟುಂಬ ಸಮೇತ ಕಾರಿನಲ್ಲಿ ತೆರಳುತ್ತಿದ್ದ ಚಾಲಕನಿಗೆ ಪೊಲೀಸರು ಕಪಾಳಮೋಕ್ಷ ಮಾಡಿ, ಲಾಠಿ ಏಟು ನೀಡಿದ್ದಾರೆ. ಈ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿರುವ ಚೆನ್ನಮ್ಮನ ಕೋಟೆ ಬಳಿ ನಡೆದಿದೆ. ಅನಗತ್ಯವಾಗಿ ಹೊರ ಬರಬೇಡಿ ಅಂದರೂ ಕಾರು ಚಾಲಕರೊಬ್ಬರು ಕುಟುಂಬ ಸಮೇತ ಹೊರ ಬಂದಿದ್ದರು. ಈ ವೇಳೆ ಪೊಲೀಸರು ಚಾಲಕನನ್ನು ಕೆಳಗಿಳಿಸಿ ಕಪಾಳಕ್ಕೆ ಹೊಡೆದು ಲಾಠಿ ಏಟು ನೀಡಿ ವಾಪಾಸ್ ಕಳುಹಿಸಿದ್ದಾರೆ.

ಬಸ್ಕಿ ಹೊಡೆಸಿದ ಪೊಲೀಸರು ಹಾಸನ: ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಸಿದ್ದಾಪುರ ಗೇಟ್ನಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಬಸ್ಕಿ ಶಿಕ್ಷೆ ನೀಡಿದ್ದಾರೆ. ಕೊಣನೂರು ಠಾಣಾ ಪಿಎಸ್ಐ ಅಜಯ್ ಕುಮಾರ್ ಹಾಗೂ ಸಿಬ್ಬಂದಿಗಳು ಬಸ್ಕಿ ಹೊಡೆಸಿ ಮತ್ತೊಮ್ಮೆ ಬಂದರೆ ವಾಹನ ಸೀಜ್ ಮಾಡಿ ದಂಡ ಹಾಕುವುದಾಗಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರ ಮುಂದೆ ಮದ್ಯವ್ಯಸನಿಯ ಕಿರಿಕ್, ಕುಡಿದ ಮತ್ತಲ್ಲಿ ರಸ್ತೆಯಲ್ಲಿ ನಿಂತು ಸ್ಟೆಪ್ಸ್

ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರ ಜತೆ ವಾಟಾಳ್ ನಾಗರಾಜ್​ ರಸ್ತೆಗೆ ಬಂದಿದ್ದರು

(Transgender was knocked out by police at Kolar)

Follow Us
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್