ಸರ್ಕಾರದ ತುರ್ತು ಗಮನಕ್ಕೆ.. 4 ದಿನ ಹಿಂದೆಯೇ ಅಟೆಂಡೆನ್ಸ್ ರಿಜಿಸ್ಟರ್‌ಗೆ ಸಹಿ ಹಾಕಿ, ನಿಗೂಢವಾಗಿ ನಾಪತ್ತೆಯಾದ ವೈದ್ಯ!
ವೈದ್ಯೋ ನಾರಾಯಣ ಹರಿ ಎಂಬಂತೆ ಕೊರೊನಾದ ದುರಿತ ಕಾಲದಲ್ಲಿ ಸೋಂಕಿತ ಚಿಕಿತ್ಸೆಗೆ ಮುಂದಾಗದೆ ವೈದ್ಯ ಮಹಾಶಯ ರವಿಕುಮಾರ್ ಎಲ್ಲಿಗೆ ಹೋದರು ಎಂಬುದು ಆಶ್ಚರ್ಯಕರವಾಗಿದೆ. ವೈದ್ಯ ರವಿಕುಮಾರ್ ಹೀಗೆ ನಾಲ್ಕೂ ದಿನಕ್ಕೆ ಸಹಿ ಮಾಡಿ,ಹೋಗಿರುವುದು ನೋಡಿದರೆ ಮೊದಲೇ ಪ್ಲಾನ್ ಮಾಡಿ, ಹೋದಂತಿದೆ. ಅದರೆ ಯಾಕೆ ಹೀಗೆ ಮಾಡಿದರು ಎಂಬುದು ಮಾತ್ರ ನಿಗೂಢವಾಗಿದೆ.
ಮಂಡ್ಯ: ಕೊವಿಡ್ ಸಂಕಷ್ಟದಲ್ಲೂ ವೈದ್ಯ ಎಂ.ವಿ. ರವಿಕುಮಾರ್ ಕಳ್ಳಾಟವಾಡತೊಡಗಿದ್ದಾರೆ. ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ 4 ದಿನಗಳ ಹಿಂದೆಯೇ ರಿಜಿಸ್ಟರ್‌ಗೆ ಸಹಿ ಹಾಕಿ ವೈದ್ಯ ನಾಪತ್ತೆಯಾಗಿದ್ದಾರೆ.
ಕುತೂಹಲದ ಸಂಗತಿಯೆಂದ್ರೆ ಸದರಿ ವೈದ್ಯ ಮಹಾಶಯ ನಾಳೆಯವರೆಗೆ ರಿಜಿಸ್ಟರ್‌ನಲ್ಲಿ ಸಹಿ ಹಾಕಿ ಎಸ್ಕೇಪ್ ಆಗಿದ್ದಾರೆ. ರಿಜಿಸ್ಟರ್‌ನಲ್ಲಿ ಸಹಿ ಮಾಡಿ ಕೆಲಸಕ್ಕೆ ಹಾಜರಾಗದ ವೈದ್ಯರಿಗಾಗಿ ರೋಗಿಗಳು ಆಸ್ಪತ್ರೆ ಬಳಿ ಕಾಯುತ್ತ ನಿಂತಿದ್ದಾರೆ. ಕೊರೋನಾ ಸಂದರ್ಭದಲ್ಲೂ ವೈದ್ಯನ ಕಳ್ಳಾಟ ಕಂಡು ಜನ ತಲೆ ಚಚ್ಚಿಕೊಂಡಿದ್ದಾರೆ. ಇರುವ ಒಬ್ಬೇ ಮಹಿಳಾ ವೈದ್ಯೆ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ.
ವೈದ್ಯೋ ನಾರಾಯಣ ಹರಿ ಎಂಬಂತೆ ಕೊರೊನಾದ ದುರಿತ ಕಾಲದಲ್ಲಿ ಸೋಂಕಿತ ಚಿಕಿತ್ಸೆಗೆ ಮುಂದಾಗದೆ ವೈದ್ಯ ಮಹಾಶಯ ರವಿಕುಮಾರ್ ಎಲ್ಲಿಗೆ ಹೋದರು ಎಂಬುದು ಆಶ್ಚರ್ಯಕರವಾಗಿದೆ. ವೈದ್ಯ ರವಿಕುಮಾರ್ ಹೀಗೆ ನಾಲ್ಕೂ ದಿನಕ್ಕೆ ಸಹಿ ಮಾಡಿ,ಹೋಗಿರುವುದು ನೋಡಿದರೆ ಮೊದಲೇ ಪ್ಲಾನ್ ಮಾಡಿ, ಹೋದಂತಿದೆ. ಅದರೆ ಯಾಕೆ ಹೀಗೆ ಮಾಡಿದರು ಎಂಬುದು ಮಾತ್ರ ನಿಗೂಢವಾಗಿದೆ.
(doctor in mandya holalu village absent since 4 days after signing in the attendance register)