ಪರಪ್ಪನ ಅಗ್ರಹಾರ ಜೈಲಿನ 18ರಿಂದ 44 ವರ್ಷದ ಕೈದಿಗಳಿಗೆ ಲಸಿಕೆ ವಿತರಣೆ ಆರಂಭ

|

Updated on: May 30, 2021 | 8:03 PM

ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲಿನಲ್ಲಿ 4,600 ಕೈದಿಗಳಿದ್ದು, 45 ವರ್ಷ ಮೇಲ್ಪಟ್ಟ 580 ಕೈದಿಗಳಿಗೆ ಈಗಾಗಲೇ ವ್ಯಾಕ್ಸಿನ್​ ನೀಡಲಾಗಿದೆ. ಇಂದಿನಿಂದ4120 ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳಿಗೆ ಇಂದಿನಿಂದ ಲಸಿಕೆ ವಿತರಣೆ ಆರಂಭಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನ 18ರಿಂದ 44 ವರ್ಷದ ಕೈದಿಗಳಿಗೆ ಲಸಿಕೆ ವಿತರಣೆ ಆರಂಭ
ಪರಪ್ಪನ ಅಗ್ರಹಾರ ಜೈಲು
Follow us on

ಬೆಂಗಳೂರು: ಪರಪ್ಪನ ಅಗ್ರಹಾರದ 18ರಿಂದ 44 ವರ್ಷ ವಯೋಮಾನದ ಕೈದಿಗಳಿಗೆ ಜೈಲಿನಲ್ಲಿ ಕೊವಿಡ್ ವ್ಯಾಕ್ಸಿನ್ ವಿತರಣೆ ಆರಂಭಿಸಲಾಗಿದೆ. ನ್ಯಾಯಾಧೀಶರು, ಸೆಂಟ್ರಲ್ ಜೈಲಿನ ಅಧಿಕಾರಿಗಳಿಂದ ಚಾಲನೆ ನೀಡಲಾಗಿದೆ. ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲಿನಲ್ಲಿ 4,600 ಕೈದಿಗಳಿದ್ದು, 45 ವರ್ಷ ಮೇಲ್ಪಟ್ಟ 580 ಕೈದಿಗಳಿಗೆ ಈಗಾಗಲೇ ವ್ಯಾಕ್ಸಿನ್​ ನೀಡಲಾಗಿದೆ. ಇಂದಿನಿಂದ4120 ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳಿಗೆ ಇಂದಿನಿಂದ ಲಸಿಕೆ ವಿತರಣೆ ಆರಂಭಿಸಲಾಗಿದೆ.

ಸದ್ಯ ದೇಶ ಮತ್ತು ರಾಜ್ಯದಲ್ಲಿ ಲಸಿಕೆ ವಿತರಣೆ ವೇಗವಾಗಿ ನಡೆಯುತ್ತಿದ್ದು, ಲಸಿಕೆ ಕೊರತೆಯಿದೆ ಎಂಬ ದೂರುಗಳು ಸಹ ಕೇಳಿಬರುತ್ತಿವೆ.  ಮೇ ರಿಂದ ಕರ್ನಾಟಕದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆದ್ಯತಾ ವರ್ಗಕ್ಕೆ ಅನುಗುಣವಾಗಿ ಕೊವಿಡ್ ಲಸಿಕೆ ಹಾಕಲಾಗುತ್ತಿದೆ.

ಕರ್ನಾಟಕದಲ್ಲಿ ಇಂದು ಒಂದೇ ದಿನ 20,378 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 382 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 4,734 ಜನರಿಗೆ ಕೊವಿಡ್ ದೃಢಪಟ್ಟಿದ್ದು, 213 ಜನರು ಅಸು ನೀಗಿದ್ದಾರೆ. ಇಂದು ಪತ್ತೆಯಾದ ಕೊವಿಡ್ ಸೋಂಕಿತರ ಮೂಲಕ ರಾಜ್ಯದಲ್ಲಿ ಈವರೆಗೆ ಪತ್ತೆಯಾದ ಕೊವಿಡ್ ಸೋಂಕಿತರ ಸಂಖ್ಯೆ 25,87,827ಕ್ಕೆ ಏರಿಕೆಯಾಗಿದೆ. ಜತೆಗೆ ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 28,679 ಜನರು ಸಾವನ್ನಪ್ಪಿದಂತಾಗಿದೆ.

ಇಂದು ಒಂದೇ ದಿನ 28,053 ಜನರು ಕೊವಿಡ್ ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು,  ಈವರೆಗೆ 22,17,117 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 3,42,010 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾವಾರು ಸೋಂಕಿತರ ವಿವರ
ಬಾಗಲಕೋಟೆ 193, ಬಳ್ಳಾರಿ 598, ಬೆಳಗಾವಿ 1,171, ಬೆಂಗಳೂರು ಗ್ರಾಮಾಂತರ 392, ಬೆಂಗಳೂರು ನಗರ 4,734, ಬೀದರ್ 37, ಚಾಮರಾಜನಗರ 402, ಚಿಕ್ಕಬಳ್ಳಾಪುರ 356, ಚಿಕ್ಕಮಗಳೂರು 671, ಚಿತ್ರದುರ್ಗ 805, ದಕ್ಷಿಣ ಕನ್ನಡ 727, ದಾವಣಗೆರೆ 698, ಧಾರವಾಡ 525, ಗದಗ 289, ಹಾಸನ 2227, ಹಾವೇರಿ 206, ಕಲಬುರಗಿ 107, ಕೊಡಗು 271, ಕೋಲಾರ 341, ಕೊಪ್ಪಳ 365 , ಮಂಡ್ಯ 643, ಮೈಸೂರು 1559, ರಾಯಚೂರು 278, ರಾಮನಗರ 164, ಶಿವಮೊಗ್ಗ 386, ತುಮಕೂರು 773, ಉಡುಪಿ 651, ಉತ್ತರ ಕನ್ನಡ 504, ವಿಜಯಪುರ 198, ಯಾದಗಿರಿ ಜಿಲ್ಲೆಯಲ್ಲಿ ಇಂದು 107 ಕೊರೊನಾ ಸೋಮಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕೊವಿಡ್ ಕೇರ್ ಸೆಂಟರ್​ನಲ್ಲಿ ಸೋಂಕಿತರಿಗೆ ಹೋಳಿಗೆ ಊಟ 

ಕೊವಿಡ್ ತಡೆಯಲು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿದ್ದೇವೆ, ಸಿಎಂ ಯಡಿಯೂರಪ್ಪರ ಜತೆ ನಾವಿದ್ದೇವೆ: ಶಾಸಕ ರೇಣುಕಾಚಾರ್ಯ

(Covid Vaccination to 18 to 44 year old Prisoner of Parappana Agrahara)