ಕೊವಿಡ್ ಸಂಕಷ್ಟದಲ್ಲಿಯೂ 4 ಲಕ್ಷ ಕಾರ್ಮಿಕರಿಗೆ ಜೀವನಾಧಾರವಾದ ಅಗರಬತ್ತಿ ಉದ್ಯಮ

ಕೊವಿಡ್ ಸವಾಲಿನ ನಡುವೆಯೂ ಉದ್ಯಮವು ಸುಮಾರು 4 ಲಕ್ಷ ಕಾರ್ಮಿಕರಿಗೆ ಕಳೆದ ಹಣಕಾಸು ವರ್ಷದಲ್ಲಿ ಉದ್ಯೋಗಾವಕಾಶ ಒದಗಿಸಲಾಗಿದೆ. ನಾಲ್ಕು ಲಕ್ಷ ಕಾರ್ಮಿಕರ ಪೈಕಿ ಶೇ 60ರಷ್ಟು ಮಂದಿ ಉತ್ಪಾದನೆಯಲ್ಲಿ ಹಾಗೂ ಉಳಿದವರು ಮಾರುಕಟ್ಟೆ ಸಂಬಂಧಿತ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಕೊವಿಡ್ ಸಂಕಷ್ಟದಲ್ಲಿಯೂ 4 ಲಕ್ಷ ಕಾರ್ಮಿಕರಿಗೆ ಜೀವನಾಧಾರವಾದ ಅಗರಬತ್ತಿ ಉದ್ಯಮ
ಅಗರಬತ್ತಿ ಹೊಸೆಯುತ್ತಿರುವ ಮಹಿಳೆ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: Skanda

Updated on: May 31, 2021 | 9:30 AM

ಬೆಂಗಳೂರು: ಅಗರಬತ್ತಿ ಉದ್ಯಮವು ಕಾರ್ಮಿಕ ಆಧಾರಿತವಾದ ಉದ್ಯಮವಾಗಿದ್ದು, ಈ ಉದ್ಯಮವು ಕೊವಿಡ್ ಸಂದರ್ಭದಲ್ಲಿಯೂ ತನ್ನ ಕಾರ್ಮಿಕರಿಗೆ ಜೀವನಾಧಾರವಾಗಿದೆ ಎಂದು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ಹೇಳಿದೆ. ಸಂಘದ ಪ್ರಕಾರ, ಕೊವಿಡ್ ಸವಾಲಿನ ನಡುವೆಯೂ ಉದ್ಯಮವು ಸುಮಾರು 4 ಲಕ್ಷ ಕಾರ್ಮಿಕರಿಗೆ ಕಳೆದ ಹಣಕಾಸು ವರ್ಷದಲ್ಲಿ ಉದ್ಯೋಗಾವಕಾಶ ಒದಗಿಸಲಾಗಿದೆ. ನಾಲ್ಕು ಲಕ್ಷ ಕಾರ್ಮಿಕರ ಪೈಕಿ ಶೇ 60ರಷ್ಟು ಮಂದಿ ಉತ್ಪಾದನೆಯಲ್ಲಿ ಹಾಗೂ ಉಳಿದವರು ಮಾರುಕಟ್ಟೆ ಸಂಬಂಧಿತ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಾರ್ಮಿಕರಲ್ಲಿ ಶೇ 70ರಷ್ಟು ಮಹಿಳೆಯರೇ ಇರುವುದು ವಿಶೇಷ.

ಕೊವಿಡ್ ಸಂದರ್ಭದಲ್ಲಿ ಕಾರ್ಮಿಕರ ಹಿತ ಕಾಪಾಡಲು ಉದ್ಯಮವು ಕೈಗೊಂಡಿರುವ ಕ್ರಮಗಳನ್ನು ವಿವರಿಸಿರುವ ಸಂಘದ ಅಧ್ಯಕ್ಷ ಅರ್ಜುನ ರಂಗಾ, ‘ಉದ್ಯಮವನ್ನು ಕೊವಿಡ್ ಬಾಧಿಸುವ ಮೊದಲೇ ನಾವು ಬೇಡಿಕೆ ಮತ್ತು ಪೂರೈಕೆ ವ್ಯವಸ್ಥೆಗೆ ತೊಡಕಾಗದಂತೆ ಕ್ರಮವಹಿಸಿದೆವು. ಉದ್ಯಮದಲ್ಲಿ ಗುರುತಿಸಿಕೊಂಡವರು ಯೋಗ ತರಬೇತಿ ಪಡೆದುಕೊಂಡರು. ಕಷ್ಟಕಾಲದಲ್ಲಿ ಹೊರಬರಲು, ಆದಷ್ಟು ಬೇಗ ಚೇತರಿಸಿಕೊಳ್ಳಲು ಇದು ಸಹಕಾರಿಯಾಯಿತು. ಜನರ ಉದ್ಯೋಗಕ್ಕೂ ಸಹಕಾರಿಯಾಯಿತು. ಹಲವು ಮನೆಗಳಲ್ಲಿ ಅಗರಬತ್ತಿ ಉದ್ಯಮದಲ್ಲಿ ತೊಡಗಿಕೊಂಡಿರುವವರು ಕುಟುಂಬದ ಜೀವನಾಧಾರವೂ ಆಗಿದ್ದಾರೆ’ ಎಂದು ಹೇಳಿದರು.

ರಾಜ್ಯದಲ್ಲಿ ಕೊವಿಡ್ 2ನೇ ಅಲೆ ವ್ಯಾಪಕವಾಗಿ ಹರಡಿದ ನಂತರ ಹೇರಿದ ಲಾಕ್‌ಡೌನ್‌ನಿಂದಾಗಿ ಸರಕುಗಳ ಸಾಗಣೆಗೆ ಮತ್ತು ಕಚ್ಚಾ ಪದಾರ್ಥಗಳನ್ನು ಉತ್ಪಾದನಾ ಘಟಕಗಳಿಗೆ ತರಿಸಿಕೊಳ್ಳಲು ಪರಿಣಾಮ ಬೀರಿತು ಎಂದು ಅವರು ವಿವರಿಸಿದರು. ಉದ್ಯೋಗಾವಕಾಶದ ಜೊತೆಗೆ ಅಗರಬತ್ತಿ ಉದ್ಯಮವು ತನ್ನ ಕಾರ್ಮಿಕರಿಗೆ ವ್ಯಾಕ್ಸಿನ್ ತೆಗೆದುಕೊಳ್ಳಲು ನೆರವು ನೀಡಿದೆ. ಬಹುತೇಕ ಸದಸ್ಯರು ಲಸಿಕೆಯನ್ನು ಪಡೆದುಕೊಂಡಿದ್ದು, ಈ ಮೂಲಕ ತಮ್ಮ ಜೀವ, ಜೀವನ ರಕ್ಷಣೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

Incense Sticks Agarbatti Business Gives Work For 4 lakh Workers in Covid Times

ಉತ್ಪಾದನಾ ಘಟಕದಲ್ಲಿ ಸಿದ್ಧವಾಗುತ್ತಿದೆ ಅಗರಬತ್ತಿ

ಭಾರತೀಯ ಅಗರಬತ್ತಿ ಉದ್ಯಮದ ವಾರ್ಷಿಕ ಬೆಳವಣಿಗೆ ದರವು ಶೇ 3.6 ಇದೆ. ಹಲವು ವರ್ಷಗಳಿಂದ ಉದ್ಯಮವು ಪ್ರಗತಿಯ ಹಾದಿಯಲ್ಲಿದೆ. ಪ್ರಸ್ತುತ ಉದ್ಯಮದ ವಾರ್ಷಿಕ ವಹಿವಾಟು ₹ 7500 ಕೋಟಿ ಇದೆ. ರಫ್ತು ವಹಿವಾಟಿನಿಂದ ಸುಮಾರು ₹ 1000 ಕೋಟಿ ಆದಾಯವಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಉದ್ಯಮವು ವಹಿವಾಟು ನಡೆಸುವಲ್ಲಿ ಯಶಸ್ವಿಯಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ಮೊದಲು ಇದ್ದ ವಹಿವಾಟು ಗಾತ್ರಕ್ಕೆ ಹೋಲಿಸಿದರೆ ಪ್ರಸ್ತುತ ಉದ್ಯಮವು ಶೇ 90ರಷ್ಟು ವಹಿವಾಟು ನಡೆಸುತ್ತಿದೆ. ಶೇ 10ರಷ್ಟು ವಹಿವಾಟು ಕಡಿಮೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

Agarabatti

ಸಿದ್ಧವಾಗಿರುವ ಅಗರಬತ್ತಿಗಳು

ಮೈಸೂರು ಊದುಬತ್ತಿ ಉತ್ಪಾದಕರ ಸಂಘದ ಹೆಸರಿನಲ್ಲಿ 1949ರಲ್ಲಿ ಏಳು ಉದ್ಯಮಿಗಳು ಈ ಸಂಘ ಸ್ಥಾಪಿಸಿದರು. 80ರ ದಶಕದಲ್ಲಿ ಹೆಚ್ಚಿನ ಸಂಖ್ಯೆಯ ಉತ್ಪಾದಕರು ಉದ್ಯಮದತ್ತ ಆಸಕ್ತಿ ತೋರಿದರು. ಆಗ ಸಂಘವನ್ನು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ಎಂದು ಮರುನಾಮಕರಣ ಮಾಡಲಾಯಿತು. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಘಕ್ಕೆ ದೇಶದಾದ್ಯಂತ ಒಟ್ಟು 800 ಅಜೀವ ಸದಸ್ಯರಿದ್ದಾರೆ.

(Incense Sticks Agarbatti Business Gives Work For 4 lakh Workers in Covid Times)

ಇದನ್ನೂ ಓದಿ: ಸಚಿವ ಸಂಪುಟ ನಿರ್ಧಾರ: ಜಿಂದಾಲ್​ಗಿಲ್ಲ ಭೂಮಿ, ಮಕ್ಕಳ ಐಸಿಯು ಸ್ಥಾಪನೆಗೆ ಕ್ರಮ, ಮತ್ತೊಂದು ಕೊವಿಡ್ ಪ್ಯಾಕೇಜ್​ಗೆ ಚಿಂತನೆ

ಇದನ್ನೂ ಓದಿ: ಕಲಾವಿದರಿಗೆ ಲಾಕ್​ಡೌನ್ ಪ್ಯಾಕೇಜ್: ಯಕ್ಷಗಾನದ ಯುವ ಕಲಾವಿದರಿಗೆ ಅನ್ಯಾಯ ತಪ್ಪಿಸಲು ವಯೋಮಿತಿಯನ್ನು 25ಕ್ಕೆ ಇಳಿಸಲು ಮನವಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್