ಸಚಿವ ಸಂಪುಟ ನಿರ್ಧಾರ: ಜಿಂದಾಲ್​ಗಿಲ್ಲ ಭೂಮಿ, ಮಕ್ಕಳ ಐಸಿಯು ಸ್ಥಾಪನೆಗೆ ಕ್ರಮ, ಮತ್ತೊಂದು ಕೊವಿಡ್ ಪ್ಯಾಕೇಜ್​ಗೆ ಚಿಂತನೆ

ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಕುರಿತು ಈ ಹಿಂದೆ ಸಚಿವ ಸಂಪುಟ ತೆಗೆದುಕೊಂಡಿದ್ದ ನಿರ್ಧಾರವನ್ನು ಜಾರಿಗೊಳಿಸದಿರಲು ಸಂಪುಟ ಇಂದು ನಿರ್ಧರಿಸಿತು. ಇದರ ಜೊತೆಗೆ ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ವಿಶೇಷ ವಾರ್ಡ್​ಗಳನ್ನು ರೂಪಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು.

ಸಚಿವ ಸಂಪುಟ ನಿರ್ಧಾರ: ಜಿಂದಾಲ್​ಗಿಲ್ಲ ಭೂಮಿ, ಮಕ್ಕಳ ಐಸಿಯು ಸ್ಥಾಪನೆಗೆ ಕ್ರಮ, ಮತ್ತೊಂದು ಕೊವಿಡ್ ಪ್ಯಾಕೇಜ್​ಗೆ ಚಿಂತನೆ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us
|

Updated on:May 27, 2021 | 1:48 PM

ಬೆಂಗಳೂರು: ಕರ್ನಾಟಕ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಗುರುವಾರ (ಮೇ 27) ವಿಧಾನಸೌಧದಲ್ಲಿ ನಡೆಯಿತು. ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಕುರಿತು ಈ ಹಿಂದೆ ಸಚಿವ ಸಂಪುಟ ತೆಗೆದುಕೊಂಡಿದ್ದ ನಿರ್ಧಾರವನ್ನು ಜಾರಿಗೊಳಿಸದಿರಲು ಸಂಪುಟ ಇಂದು ನಿರ್ಧರಿಸಿತು. ಇದರ ಜೊತೆಗೆ ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ವಿಶೇಷ ವಾರ್ಡ್​ಗಳನ್ನು ರೂಪಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು. ಈ ಎರಡು ನಿರ್ಣಯಗಳ ಜೊತೆಗೆ ಇತರ ಹಲವು ಮಹತ್ವದ ನಿರ್ಣಯಗಳನ್ನು ಇಂದಿನ ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ.

ಜಿಂದಾಲ್​ಗೆ ಜಿಂದಾಲ್​ಗೆ ಭೂಮಿ ಪರಭಾರೆ ಮಾಡುವ ಕುರಿತು ಜಿಂದಾಲ್​ಗೆ ಭೂಮಿ ಬಗ್ಗೆ ಹಿಂದಿನ ಸಚಿವ ಸಂಪುಟ ಸಭೆ ತೆಗೆದುಕೊಂಡಿದ್ದ ನಿರ್ಧಾರವನ್ನು ಜಾರಿಗೊಳಿಸದಿರಲು ಸಭೆ ನಿರ್ಧರಿಸಿತು. ಜಿಂದಾಲ್​ಗೆ ಭೂಮಿ ಪರಭಾರೆ ವಿಚಾರ ಮುಂದಿನ ದಿನಗಳಲ್ಲಿ ಯಾವ ತಿರುವ ಪಡೆದುಕೊಳ್ಳುತ್ತದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಸುಪ್ರೀಂಕೋರ್ಟ್​ನಲ್ಲಿಯೂ ಪ್ರಕರಣದ ವಿಚಾರಣೆ ಬಾಕಿ ಇದೆ ಎಂದು ಸಚಿವ ಸಂಪುಟ ಸಭೆಯ ವಿವರ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಕೊರೊನಾ 3ನೇ ಅಲೆ ಮಕ್ಕಳಿಗೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡಿರುವುದರಿಂದ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ವಿಶೇಷ ವಾರ್ಡ್​ಗಳು ಮತ್ತು ತುರ್ತು ನಿಗಾ ಘಟಕ (ಐಸಿಯು) ಸ್ಥಾಪಿಸಲಾಗುವುದು. ಹುಬ್ಬಳ್ಳಿಯಲ್ಲಿ ಬ್ಲಾಕ್​ ಫಂಗಸ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವದರಿಂದ, ಬ್ಲಾಕ್​ ಫಂಗಸ್ ಔಷಧಿಯನ್ನು ಅಲ್ಲಿಗೆ ಅಗತ್ಯ ಪ್ರಮಾಣದಲ್ಲಿ ತಲುಪಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದರು.

ಲಾಕ್​ಡೌನ್ ಪ್ಯಾಕೇಜ್​ ಪರಿಹಾರ ಕೆಲ ಸಮುದಾಯಗಳಿಗೆ ದೊರೆತಿಲ್ಲ. ಈ ಸಂಬಂಧ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆ ಜೊತೆಗೆ ಚರ್ಚೆ ಮಾಡಿದ ನಂತರ ನಿರ್ಧಾರ ತೆಗೆದುಕೊಳ್ತಾರೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ವಿಶೇಷ ಪರಿಹಾರ ನೀಡುವ ಬಗ್ಗೆ ಚರ್ಚೆಯಾಗಿದೆ. ಕೇಂದ್ರದಿಂದ ಈ ಬಗ್ಗೆ ಹೊಸ ಮಾರ್ಗಸೂಚಿ ಬರಲಿದೆ. ಆ ಬಳಿಕ ಬಂದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಮೇಕೆದಾಟು ವಿಚಾರವಾಗಿ ಇಂದು ಸಿಎಂ ನೇತೃತ್ವದಲ್ಲಿ ಚರ್ಚೆ ಆಗಿದೆ. ಎನ್​ಜಿಟಿಯಲ್ಲೇ ಪ್ರಶ್ನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದರು.

ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಇತರ ಪ್ರಮುಖ ನಿರ್ಧಾರಗಳ ವಿವರ ಇಂತಿದೆ.. – ಪಶುಸಂಗೋಪನೆ ಇಲಾಖೆಯಿಂದ ಪಿಪಿಪಿ ಮಾದರಿಯಲ್ಲಿ ಹಾವೇರಿಯಲ್ಲಿ ಅಲ್ಟ್ರಾ ಪ್ಯಾಕೇಜ್ ಮಿಲ್ಕ್ ಪ್ರೊಡಕ್ಟ್ ಯುನಿಟ್ ಸ್ಥಾಪನೆ, ₹ 90 ಕೋಟಿ ವೆಚ್ಚ. – ಕರ್ನಾಟಕ ಎಲೆಕ್ಟ್ರಿಕ್ ಎನರ್ಜಿ ಸ್ಟೋರೇಜ್ ಪಾಲಿಸಿಯಲ್ಲಿ ಶೇ 15ರಷ್ಟು ಬಂಡವಾಳ ಸಬ್ಸಿಡಿಯನ್ನು ಕೊಡುವುದು, ಐದು ಕಂತುಗಳಲ್ಲಿ, ಗರಿಷ್ಠ 50 ಎಕರೆಗೆ ನೀಡಲಾಗುವುದು. – ಹಾಸನ ಮೆಡಿಕಲ್ ಕಾಲೇಜಿನಲ್ಲಿ 52 ಹೊಸ ಪಿಜಿ ಸೀಟ್ ಹೆಚ್ಚಳ. – ದೊಡ್ಡಬಳ್ಳಾಪುರ ತಾಲ್ಲೂಕು ಆದಿನಾರಾಯಣಹಳ್ಳಿ ಗ್ರಾಮದಲ್ಲಿ ಹೋಂಡಾ ಆ್ಯಕ್ಟೀವಾ ಕಂಪನಿಯ ಕಾರ್ಖಾನೆ ಸ್ಥಾಪನೆಗೆ ಕಂದಾಯ ಇಲಾಖೆಯಿಂದ 18.07 ಎಕರೆ ಗೋಮಾಳ ಜಮೀನು. – ಜಲಜೀವನ್ ಮಿಷನ್ ಅಡಿಯಲ್ಲಿ ಮಸ್ಕಿ, ಇಂಡಿ, ಚಡಚಣ, ಪಾಂಡವಪುರ, ನಾಗಮಂಗಲ, ಹುಬ್ಬಳ್ಳಿ ಧಾರವಾಡ, ಉಡುಪಿ, ಬೈಂದೂರು, ಹೊಳಲ್ಕೆರೆ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ. – ಸಿಂಗಸಂದ್ರದಲ್ಲಿ ₹ 75 ಕೋಟಿ ವೆಚ್ಚದ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ. – ಮೈಸೂರು ರೋಡ್​ನಿಂದ ಉತ್ತರಹಳ್ಳಿ ರೋಡ್ ₹ 25.7 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್. – ಹಾಸನದಲ್ಲಿ ಐದು ಪಾರ್ಕ್ ಅಭಿವೃದ್ಧಿ. – ಅಣ್ಣಿಗೆರೆ, ಸುರಪುರ, ಶಹಾಪುರ, ಶಿವಮೊಗ್ಗ, ಹೊನ್ನಾಳಿ ಪಟ್ಟಣಗಳ ಕುಡಿಯುವ ನೀರು ಯೋಜನೆ ₹ 770 ಕೋಟಿ. – ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ವಾರ್ಡ್ ಆರಂಭ. ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ವಿಶೇಷ ವ್ಯವಸ್ಥೆ. – ಅಕ್ಸಿಜನ್ ಪೂರೈಕೆ ಪ್ರಮಾಣ ಹೆಚ್ಚಿಸಲು ಕ್ರಮ.

(Karnataka Government Cabinet Decision No Land For Jindal Industries Special ICU for Children in all Govt Hospital)

ಇದನ್ನೂ ಓದಿ: ವಿಪತ್ತು ಸ್ಪಂದನಾ ಪಡೆ ಬಲ ಹೆಚ್ಚಳಕ್ಕೆ ಆದ್ಯತೆ, ಪ್ರಸಕ್ತ ವರ್ಷ 15 ಕೋಟಿ ನೆರವು: ಬಸವರಾಜ ಬೊಮ್ಮಾಯಿ ಘೋಷಣೆ

ಇದನ್ನೂ ಓದಿ: BS Yediyurappa: ನಾಯಕತ್ವ ಬದಲಾವಣೆ ಚಟುವಟಿಕೆ ಸಚಿವರಿಂದಲೇ ನಡೆದಿದೆ -ಪರೋಕ್ಷವಾಗಿ ಪುಷ್ಠೀಕರಿಸಿದ ಸಿಎಂ ಯಡಿಯೂರಪ್ಪ

Published On - 1:44 pm, Thu, 27 May 21

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ