ರಾಮನಗರ: ಹೆಚ್ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ. ಬೆಳಗ್ಗೆ 6ಕ್ಕೆ ಹೋದರೂ ಜನರನ್ನ ಮನೆಗೆ ಸೇರಿಸುತ್ತಿರಲಿಲ್ಲ ಎಂದು ಏಕವಚನದಲ್ಲೇ HDK ವಿರುದ್ಧ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಿನ್ನೆ ನಡೆದ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಂದರ್ಭದಲ್ಲಿ ಸಿ.ಪಿ.ಯೋಗೇಶ್ವರ್ ಏಕವಚನದಲ್ಲೇ HDK ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಗೆ ಹೋದರು ಜನರನ್ನ ಮನೆಗೆ ಸೇರಿಸುತ್ತಿರಲಿಲ್ಲ. ಆದರೆ ಅವನು ಅಧಿಕಾರ ಕಳೆದುಕೊಂಡಾಗ 6 ಗಂಟೆಗೆ ಚನ್ನಪಟ್ಟಣಕ್ಕೆ ಬರ್ತಿದ್ದಾನೆ. ಅವನಿಗೆ ಈಗ ಗೊತ್ತಾಗಿದೆ ಜನರೆದುರು ದುರಹಂಕಾರ ನಡೆಯಲ್ಲವೆಂದು. ಅಭಿವೃದ್ಧಿ ಮಾಡಿದರಷ್ಟೇ ಜನ ಮತ ಹಾಕ್ತಾರೆಂದು ಗೊತ್ತಾಗಿದೆ. ಹೆಚ್‌ಡಿಕೆ ಬಂದಾಗ JDS ಮುಖಂಡರು, ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ. ‘ಅವನಿಗೆ ಹೂವಿನ ಹಾರ ಹಿಡ್ಕೊಂಡು ಹೋಗುತ್ತಾರೆ’ ‘ಆದ್ರೆ ಅವನು ಸಿಎಂ ಆಗಿದ್ದಾಗ ಯಾರಿಗೆ ಅಧಿಕಾರ ಕೊಟ್ಟಿದ್ದಾನೆ’ ಎಂದು ಏಕವಚನದಲ್ಲೇ HDK ವಿರುದ್ಧ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಕಾರ್ಯಕ್ರಮದಲ್ಲಿ CPY ಮಾತಾಡಿದ್ದ ವಿಡಿಯೋ ವೈರಲ್ ಆಗಿದೆ.
ಇನ್ನು ಮಾತು ಮುಂದುವರೆಸಿದ ಅವರು.. ವಿಧಾನಸೌಧ ಚನ್ನಪಟ್ಟಣದಿಂದ 60 ಕಿ.ಮೀ ಇದೇ. ಆದರೆ ಯಾರು ವಿಧಾನಸೌಧದ ಮೆಟ್ಟಿಲು ಹತ್ತಿದ್ದಾರೆ ಜೆಡಿಎಸ್ ನವರು
ಮುಂದಿನ ಏಪ್ರಿಲ್ ನಂತರ ನನ್ನ ರಾಜಕೀಯ ಪ್ರಾರಂಭವಾಗಲಿದೆ. ಇಲ್ಲಿ ನಾನು ಶಾಸಕ, ಬೇರೆಯವರು ಯಾಕೆ ಬರ್ತಾರೆ ಅಂತಾರೆ ಕುಮಾರಸ್ವಾಮಿ. ಹಾಗಾಗಿ ಮುಂದಿನ ಏಪ್ರಿಲ್ ನಂತರ ಕ್ಷೇತ್ರ ಪ್ರವಾಸ ಮಾಡ್ತೇನೆ. ಪ್ರತಿ ಹಳ್ಳಿಗೂ ಭೇಟಿ ಕೊಡ್ತೇನೆ, ಪಕ್ಷ ಸಂಘಟನೆ ಮಾಡ್ತೇನೆ. ಚನ್ನಪಟ್ಟಣ ನನ್ನ ತವರೂರು, ನನಗೆ ರಾಜಕೀಯ ಜನ್ಮ ನೀಡಿದ ತಾಲೂಕು. ನನಗೆ ನೀವು ಬಿಡುವು ಮಾಡಿಕೊಟ್ಟಿದ್ದೀರಿ, ಚನ್ನಪಟ್ಟಣದಿಂದ ರಾಜ್ಯ ಪ್ರವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ, ಸರ್ಕಾರ ನನಗೆ ವಿಧಾನಸೌಧದಲ್ಲಿ ಕಚೇರಿ ಕೊಟ್ಟಿದೆ, ಬೆಂಗಳೂರಿನಲ್ಲಿ ಬಂಗಲೆ ಕೊಟ್ಟಿದೆ, ಜನ ನನಗೆ ಮತ ಹಾಕದಿದ್ದರೂ ಸಹ ಸಚಿವನಾಗುವ ಶಕ್ತಿ ಕೊಟ್ಟಿದ್ದೀರಿ ಎಂದು ಯೋಗೇಶ್ವರ್ ಹೇಳಿದ್ರು.
ಕುಮಾರಸ್ವಾಮಿ ಜೋಕರ್ ತರಹ ಎಂದ ಯೋಗೇಶ್ವರ್ (ಮಂಗಳೂರು ವರದಿ)
ಇನ್ನು ಫೆ.26ರಂದು ಮಂಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಪಿ.ಯೋಗೇಶ್ವರ್ ಮತ್ತೆ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ. ಕುಮಾರಸ್ವಾಮಿ ಜೋಕರ್ ತರಹ ಎಂದು ಹೇಳಿದ್ದಾರೆ. HDK ಯಾವ ಪಕ್ಷವಾದರೂ ಅಡ್ಜೆಸ್ಟ್ ಆಗಿಬಿಡುತ್ತಾರೆ. ಅವರಿಗೆ ನೈತಿಕತೆ, ಸಿದ್ಧಾಂತ ಯಾವುದೂ ಇಲ್ಲ. ಸಿಎಂ ಆಗಿದ್ದಾಗ ಹೆಚ್‌ಡಿಕೆ ಉಡಾಫೆಯಿಂದ ವರ್ತಿಸಿದ್ದರು. ಈಗ H.D.ಕುಮಾರಸ್ವಾಮಿಯವರಿಗೆ ಆತಂಕ ಕಾಡುತ್ತಿದೆ. ದಿನ ಬೆಳಗೆದ್ದು ಕುಮಾರಸ್ವಾಮಿ ಜನರ ಕಡೆ ಹೋಗ್ತಿದ್ದಾರೆ. ಅಧಿಕಾರ ಇದ್ದಾಗ ಕುಮಾರಸ್ವಾಮಿ ಏನೂ ಮಾಡಲಿಲ್ಲ. ಅಧಿಕಾರ ಇಲ್ಲದಾಗ ಜನರ ಬಳಿ ಹೋಗಿ ಗೋಳಾಡುವುದು, ಕಣ್ಣೀರು ಹಾಕುವುದು ಅವರ ಗುಣವಾಗಿಬಿಟ್ಟಿದೆ. ಮುಂದಿನ ಚುನಾವಣೆಯಲ್ಲಿ JDS ಸಂಪೂರ್ಣ ನೆಲಕಚ್ಚುತ್ತೆ. ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಆತಂಕದಲ್ಲಿದ್ದಾರೆ ಎಂದು ಮಂಗಳೂರಿನಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: ನನ್ನ ಬಳಿ ಯಾವುದೇ CD ಇಲ್ಲ.. ಇದು ಅಪ್ರಸ್ತುತ, ಅಸಹ್ಯ -ಸಿ.ಪಿ.ಯೋಗೇಶ್ವರ್
Published On - 2:06 pm, Fri, 26 February 21