ಕೊವಿಡ್‌ ಮೃತದೇಹ ಸುಡಲು ಮತ್ತೆರಡು ಸ್ಥಳ ನಿಗದಿ; ಗಿಡ್ಡೇನಹಳ್ಳಿಯಲ್ಲಿ ನಾಳೆಯಿಂದ ಅಂತ್ಯಕ್ರಿಯೆಗೆ ವ್ಯವಸ್ಥೆ

|

Updated on: Apr 28, 2021 | 3:25 PM

ಕಂದಾಯ ಇಲಾಖೆಯಿಂದ ಈಗಾಗಲೇ ಗುರುತಿಸಲ್ಪಟ್ಟಿರುವ 23 ತಾತ್ಕಾಲಿಕ ಸ್ಮಶಾನಗಳನ್ನು ಹೊರತುಪಡಿಸಿ ಎರಡು ಪ್ರತ್ಯೇಕ ಚಿತಾಗಾರ ನಿರ್ಮಾಣ ಮಾಡಿದ್ದು, ಕಂದಾಯ ಇಲಾಖೆಯ ಸಚಿವರಾದ ಆರ್.ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊವಿಡ್‌ ಮೃತದೇಹ ಸುಡಲು ಮತ್ತೆರಡು ಸ್ಥಳ ನಿಗದಿ; ಗಿಡ್ಡೇನಹಳ್ಳಿಯಲ್ಲಿ ನಾಳೆಯಿಂದ ಅಂತ್ಯಕ್ರಿಯೆಗೆ ವ್ಯವಸ್ಥೆ
ಕಂದಾಯ ಇಲಾಖೆಯ ಸಚಿವರಾದ ಆರ್.ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ದೇಶದೆಲ್ಲೇಡೆ ಜನರು ತತ್ತರಿಸಿಹೋಗಿದ್ದು, ಸೋಂಕಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಮೃತ ದೇಹಗಳನ್ನು ಸುಡಲು ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಈ ಮೊದಲು ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿ ಅಂತ್ಯಸಂಸ್ಕಾರಕ್ಕೆ ಸ್ಥಳ ನಿಗದಿ ಮಾಡಿತ್ತು. ಅದರಂತೆ ಈಗ ಮತ್ತೇರಡು ಸ್ಥಳವನ್ನು ನಿಗದಿ ಮಾಡಿದೆ.

ಬೆಂಗಳೂರು ಉತ್ತರ ತಾಲೂಕಿನ ಗಿಡ್ಡೇನಹಳ್ಳಿ ಹಾಗೂ ಯಲಹಂಕ ತಾಲೂಕಿನ ಭಂಗೀಪುರದಲ್ಲಿ ಹೊಸ ಚಿತಾಗಾರದ ವ್ಯವಸ್ಥೆ ಮಾಡಿದ್ದು, ಸೌದೆಯಿಂದ ಕೊವಿಡ್ ಮೃತದೇಹ ಸುಡಲು ಅವಕಾಶ ಮಾಡಿಕೊಡಲಾಗಿದೆ. ಅದರಂತೆ ಗಿಡ್ಡೇನಹಳ್ಳಿಯಲ್ಲಿ ನಾಳೆಯಿಂದ ಅಂತ್ಯಕ್ರಿಯೆ ವ್ಯವಸ್ಥೆ ಆರಂಭವಾಗಲಿದ್ದು, ಭಂಗೀಪುರದಲ್ಲಿ ಶುಕ್ರವಾರದಿಂದ ಅಂತ್ಯಕ್ರಿಯೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕಂದಾಯ ಇಲಾಖೆಯಿಂದ ಈಗಾಗಲೇ ಗುರುತಿಸಲ್ಪಟ್ಟಿರುವ 23 ತಾತ್ಕಾಲಿಕ ಸ್ಮಶಾನಗಳನ್ನು ಹೊರತುಪಡಿಸಿ ಎರಡು ಪ್ರತ್ಯೇಕ ಚಿತಾಗಾರ ನಿರ್ಮಾಣ ಮಾಡಿದ್ದು, ಕಂದಾಯ ಇಲಾಖೆಯ ಸಚಿವರಾದ ಆರ್.ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಿಡ್ಡೇನಹಳ್ಳಿಯಲ್ಲಿ ನಾಳೆಯಿಂದ ಅಂತ್ಯಕ್ರಿಯೆಗೆ ವ್ಯವಸ್ಥೆ

ಯಲಚಗುಪ್ಪೆ ಸಮೀಪ 4 ಎಕರೆ ಪ್ರದೇಶದಲ್ಲಿ ಸ್ಮಶಾನ ನಿರ್ಮಾಣ
ಬೆಂಗಳೂರಿನ ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಸಮಸ್ಯೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಯಲಚಗುಪ್ಪೆ ಸಮೀಪ 4 ಎಕರೆ ಪ್ರದೇಶದಲ್ಲಿ ಸ್ಮಶಾನ ನಿರ್ಮಾಣವಾಗಿದೆ. ಈ ಗ್ರಾಮದ ಸಮೀಪ ಏಕಕಾಲದಲ್ಲಿ 25 ಶವಗಳನ್ನು ಸುಡುವುದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಆಡಳಿತ ಭರದಿಂದ ಕಾಮಗಾರಿ ನಡೆಸುತ್ತಿದೆ. ಅಲ್ಲೇ ಪಕ್ಕದಲ್ಲಿ ಮತ್ತೊಂದೆಡೆ ಶವಗಳನ್ನು ಇರಿಸಲು ಟೆಂಟ್​ಗಳ ನಿರ್ಮಾಣ ಕಾರ್ಯ ಸಹ ನಡೆದಿದ್ದು, ಸ್ಮಶಾನ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, 5 ಜೆಸಿಬಿಗಳ ಮೂಲಕ ಜಮೀನು ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ.

ಇದನ್ನೂ ಓದಿ:

ರಾಜ್ಯದಲ್ಲಿ ಕೊರೊನಾ ನಿಯಂತ್ರಣ, ಚಿಕಿತ್ಸೆಗೆಂದು ಮುಖ್ಯಮಂತ್ರಿ ಯಡಿಯೂರಪ್ಪ- ಪ್ರಧಾನಿ ಮೋದಿಗೆ 11 ಸಲಹೆ ನೀಡಿದ ಸಿದ್ದರಾಮಯ್ಯ

ಕೊರೊನಾ ಲಸಿಕೆ ಫಾರ್ಮುಲಾ ಬೇರೆ ದೇಶಗಳಿಗೆ ನೀಡುವುದು ಅಂದರೆ ಅಡುಗೆಯ ರೆಸಿಪಿ ಹಂಚಿಕೊಂಡಂತಲ್ಲ ಎಂದ ಬಿಲ್ ಗೇಟ್ಸ್

(Cremation land is ready to cremate Covid dead bodies in Giddenahalli of Bangalore)