ಚಾಮರಾಜನಗರ, ಜೂನ್ 28: ಇತಿಹಾದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಯುಬಿ ಘಟಕದಲ್ಲಿ 98.56 ಕೋಟಿ ರೂ. ಮೌಲ್ಯದ ಬಿಯರ್ (beer) ಅನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಅನಗತ್ಯ ಕಿರುಕುಳವೆಂದು ಹೈಕೋರ್ಟ್ಗೆ ಯುನೈಟೆಡ್ ಬ್ರೆವರೀಸ್ ಅರ್ಜಿ ಸಲ್ಲಿಸಿತ್ತು. ವಿಚಾರಣೆ ಮಾಡಿದ ಹೈಕೋರ್ಟ್ 41ಎ ನೋಟಿಸ್ ನಂತರ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.
ಚುನಾವಣೆ ವೇಳೆ ಮದ್ಯ ತಯಾರಿಕಾ ಘಟಕವನ್ನು ಅಧಿಕಾರಿಗಳು ಸೀಜ್ ಮಾಡಿದ್ದರು. ಕಂಪನಿಯ ವಿದೇಶಿ ನಿರ್ದೇಶಕರಿಗೂ 41ಎ ಅಡಿ ನೋಟಿಸ್ ನೀಡಿದ್ದರು, ಲಂಚ ನೀಡಿಲ್ಲವೆಂದು ಹೀಗೆ ಮಾಡಿದ್ದಾರೆಂದು ವಕೀಲರು ಆರೋಪಿಸಿದ್ದರು.
ಇದನ್ನೂ ಓದಿ: ಮೈಸೂರಿನಲ್ಲಿ 98.56 ಕೋಟಿ ರೂ. ಮೌಲ್ಯದ ಬಿಯರ್, ಕಚ್ಚಾ ವಸ್ತು ವಶಕ್ಕೆ, ಇದು ಇತಿಹಾಸದಲ್ಲೇ ಮೊದಲು
ಹೆನಿಕೆನ್ ಯುಬಿಯ ಶೇ.61ರಷ್ಟು ಷೇರುಗಳನ್ನು ಖರೀದಿಸಿದೆ. ಲಂಚ ನೀಡಬಾರದೆಂಬುದು ಈ ಕಂಪನಿಯ ನಿಯಮ. ಹೀಗಾಗಿ ಅನಗತ್ಯ ಕಿರುಕುಳವೆಂದು ಯುಬಿ ಮದ್ಯ ಘಟಕ ಆರೋಪಿಸಿದ್ದು, ಅಧಿಕಾರಿಗಳ ಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ 8 ಕೋಟಿ ರೂ. ನಷ್ಟವಾಗಿದೆ. ಹೀಗಾಗಿ ಪೊಲೀಸರ ನೋಟಿಸ್ ಅಡಿ ಕ್ರಮ ಕೈಗೊಳ್ಳದಂತೆ ನ್ಯಾ.ಎಂ.ನಾಗಪ್ರಸನ್ನ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 25 ಲಕ್ಷ ಹಣ, 199 LED ಟಿವಿ ವಶ
ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 7,000 ಬಿಯರ್ ಪೆಟ್ಟಿಗೆಗಳು ಪತ್ತೆ ಆಗಿದ್ದವು. ಘಟಕದಲ್ಲಿ ನಿಗದಿಗಿಂತ ಹೆಚ್ಚುವರಿ ಬಿಯರ್ ತಯಾರಿಸಿ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೂಡ ಮಾಡಲಾಗಿತ್ತು. ಪ್ರಕರಣದಲ್ಲಿ 17 ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿ ಅಬಕಾರಿ ಪೊಲೀಸರು ತನಿಖೆ ನಡೆಸಿದ್ದರು.
ಈ ವೇಳೆ ಪೊಲೀಸರಿಂದ ಅನಗತ್ಯ ಕಿರುಕುಳವೆಂದು ಯುಬಿ ಮದ್ಯ ಘಟಕ ಆರೋಪ ಮಾಡಿದೆ. ಈ ವಿಚಾರವಾಗಿ ಯುನೈಟೆಡ್ ಬ್ರೆವರೀಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳ ಈ ಕ್ರಮದಿಂದಾಗಿ ಸರ್ಕಾರದ ಬೊಕ್ಕಸಕ್ಕೆ 8 ಕೋಟಿ ರೂ. ನಷ್ಟವೆಂದು ಆರೋಪಿಸಲಾಗಿದೆ. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ 41ಎ ನೋಟಿಸ್ ನಂತರ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.