ಬೆಂಗಳೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 25 ಲಕ್ಷ ಹಣ, 199 LED ಟಿವಿ ವಶ
ಲೋಕಸಭೆ ಚುನಾವಣೆಗೆ ಹಿನ್ನೆಲೆಯಲ್ಲಿ ದೇಶದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಮತಕ್ಕಾಗಿ ಜನರಿಗೆ ಆಮಿಷವೊಂಡುವುದನ್ನು ತಡೆಯಲು ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅಕ್ರಮ ಹಣ-ಹೆಂಡ ಹಾಗೂ ವಸ್ತುಗಳನ್ನು ಹಂಚುವುದು ಮತ್ತು ಸಾಗಾಟದ ಮೇಲೆ ಕಣ್ಣಿಟ್ಟಿದ್ದು, ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 25 ಲಕ್ಷ ಹಣ ಮತ್ತು ಎಲ್ಇಡಿ ಟಿವಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಬೆಂಗಳೂರು, ಮಾರ್ಚ್ 27: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 25 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ಬೆಂಗಳೂರಿನ ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಮಂಗಳವಾರ (ಮಾರ್ಚ್.27) ರ ಸಂಜೆ ವಶಕ್ಕೆ ಪಡೆದುಕೊಂಡಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.ದಾಖಲೆ ಇಲ್ಲದೆ ಸಾಗಿಸುತ್ತಿದ್ದ 199 ಎಲ್ಇಡಿ ಟಿವಿಗಳು ಜಪ್ತಿ
199 LED ಟಿವಿಗಳು ವಶಕ್ಕೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಲ್ಯಾಂಕೋ ಟೋಲ್ನಲ್ಲಿ ಚುನಾವಣಾ ಅಧಿಕಾರಿಗಳು 199 ಎಲ್ಇಡಿ ಟಿವಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಎಲ್ಇಡಿ ಟಿವಿಗಳು ಇಸ್ಲಾಂಪುರ ಗ್ರಾಮದ ಬಾಬುಜಾನ್ಗೆ ಸೇರಿವೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚುನಾವಣಾ ಅಧಿಕಾರಿಗಳ ಹದ್ದಿನ ಕಣ್ಣು: ರಾಜ್ಯದ ವಿವಿಧಡೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ವಸ್ತುಗಳು ಜಪ್ತಿ
ಬನವಾಸಿ ಚೆಕ್‌ಪೋಸ್ಟ್ ಬಳಿ 6 ಲಕ್ಷ ಜಪ್ತಿ
ಕಾರವಾರ: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಕಂದಾಯ ಅಧಿಕಾರಿಗಳು 6.7 ಲಕ್ಷ ನಗದು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ನಡೆದಿತ್ತು. ಬೆಳಗಾವಿ ಜಿಲ್ಲೆ ಅಥಣಿ ನಿವಾಸಿ ಪರಶುರಾಮ್ ಯಲ್ಲಪ್ಪ ಅವರಿಗೆ ಸೇರಿದ 5.2 ಲಕ್ಷ ನಗದನ್ನು ಶಿರಸಿ ತಾಲೂಕಿನ ಬನವಾಸಿ ಚೆಕ್‌ಪೋಸ್ಟ್ ಬಳಿ ವಶಕ್ಕೆ ಪಡೆಯಲಾಗಿತ್ತು. ಚಿನ್ನ ಖರೀದಿಸಲು ಸೊರಬದಿಂದ ಶಿರಸಿಗೆ ತೆರಳುತ್ತಿದ್ದ ಶಿವಮೊಗ್ಗ ಜಿಲ್ಲೆ ಸೊರಬದ ರೇಣುಕಾ ನಾಗರಾಜ್ ಎಂಬವರ ಬಳಿಯಿಂದ 1.5 ಲಕ್ಷ ನಗದು ಜಪ್ತಿ ಮಾಡಲಾಗಿತ್ತು. ಸೂಕ್ತ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಹಿನ್ನೆಲೆ ಜಪ್ತಿ ಮಾಡಲಾಗಿತ್ತು.
ಪಿಳ್ಳೆಕೇರನಹಳ್ಳಿ ಚೆಕ್‌ಪೋಸ್ಟ್ ಬಳಿ 20 ಲಕ್ಷ ನಗದು ಜಪ್ತಿ
ಚಿತ್ರದುರ್ಗ: ತಾಲೂಕಿನ ಪಿಳ್ಳೆಕೇರನಹಳ್ಳಿ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ 35 ಸಾವಿರ ರೂ. ಜಪ್ತಿ ಮಾಡಲಾಗಿತ್ತು. ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ ನೇತೃತ್ವದ ಎಸ್.ಎಸ್.ಟಿ ಹಾಗೂ ಎಫ್.ಎಸ್.ಟಿ ತಂಡವು ಈ ಹಣವನ್ನ ವಶಕ್ಕೆ ಪಡೆಯಲಾಗಿತ್ತು. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ