ವರುಣಾ ಬಿಜೆಪಿ ಮುಖಂಡ ಸದಾನಂದರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ಯಶಕಂಡ ವಿಜಯೇಂದ್ರ, ಸಿದ್ದರಾಮಯ್ಯಗೆ ನೈತಿಕ ಸೋಲು?
ಇನ್ನೇನು ಒಂದು ಕಾರ್ಯಕ್ರಮ ಏರ್ಪಡಿಸಿ ಸದಾನಂದರನ್ನು ಕಾಂಗ್ರೆಸ್ ಸೇರಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸುವ ಹಂತದಲ್ಲಿ ವಿಜೆಯೇಂದ್ರ ತಮ್ಮ ಸಂಘಟನಾ ಚಾತುರ್ಯ ಮೆರೆದಿದ್ದಾರೆ. ಸದಾನಂದರ ಮನಸ್ಸು ಪರಿವರ್ತನೆ ಮಾಡಿ ಬಿಜೆಪಿಯಲ್ಲಿ ಉಳಿಯುವಂತೆ ಮಾಡುವಲ್ಲಿ ವಿಜಯೇಂದ್ರ ಯಶ ಕಂಡಿದ್ದಾರೆ.
ಮೈಸೂರು: ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ತಮ್ಮದೇ ಕ್ಷೇತ್ರದಲ್ಲಿ ಅಗಿರುವ ನೈತಿಕ ಸೋಲು ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಸಿದ್ದರಾಮಯ್ಯ ಪಕ್ಷ ಸಂಘಟನೆಯಲ್ಲಿ (party organization) ಚಾಣಾಕ್ಷರಲ್ಲ, ಅವರೇನಿದ್ದರೂ ಆಡಳಿತದಲ್ಲಿ ಸಿದ್ಧಹಸ್ತ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಅವರು ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿ ಪ್ರಮುಖ ಬೆಜೆಪಿ ಮುಖಂಡ ಬಿಎನ್ ಸದಾನಂದ (BN Sadananda) ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಗ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇಬ್ಬರಿಗೆ ಆಪ್ತರಾಗಿದ್ದರೂ ಅವರನ್ನು ಕಾಂಗ್ರೆಸ್ ನತ್ತ ಸೆಳೆಯುವಲ್ಲಿ ಸಿದ್ದರಾಮಯ್ಯ ಸಫಲರಾಗಿದ್ದರು. ಇನ್ನೇನು ಒಂದು ಕಾರ್ಯಕ್ರಮ ಏರ್ಪಡಿಸಿ ಸದಾನಂದರನ್ನು ಕಾಂಗ್ರೆಸ್ ಸೇರಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸುವ ಹಂತದಲ್ಲಿ ವಿಜೆಯೇಂದ್ರ ತಮ್ಮ ಸಂಘಟನಾ ಚಾತುರ್ಯ ಮೆರೆದಿದ್ದಾರೆ. ಸದಾನಂದರ ಮನಸ್ಸು ಪರಿವರ್ತನೆ ಮಾಡಿ ಬಿಜೆಪಿಯಲ್ಲಿ ಉಳಿಯುವಂತೆ ಮಾಡುವಲ್ಲಿ ವಿಜಯೇಂದ್ರ ಯಶ ಕಂಡಿದ್ದಾರೆ. ಸದಾನಂದರ ಮನೆಗೆ ತೆರಳಿ ಅವರಿಗೆ ವಿಜಯೇಂದ್ರ ಸಿಹಿ ತಿನ್ನಿಸುತ್ತಿರುವ ದೃಶ್ಯಗಳನ್ನು ಇಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಇದುವರೆಗೆ 15 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಡ್ಡರೇನೂ ಅಲ್ಲ: ಬಿವೈ ವಿಜಯೇಂದ್ರ, ಬಜೆಪಿ ರಾಜ್ಯಾಧ್ಯಕ್ಷ