Daily Devotional: ಮನೆಯಲ್ಲಿ ಹಲ್ಲಿ ಲೊಚಗುಟ್ಟಿದರೆ ಏನು ಅರ್ಥ? ಈ ವಿಡಿಯೋ ನೋಡಿ
ಹಲ್ಲಿಯು ಲೊಚಗುಟ್ಟಿದರೆ ಅದು ಯಾವ ದಿಕ್ಕಿನಲ್ಲಿದೆ ಹಾಗೂ ಲೊಚಗುಟ್ಟಿದ ದಿನ ಹಾಗೂ ವಾರ ಯಾವುದು ಎನ್ನುವುದನ್ನೂ ಗಮನಿಸಲಾಗುತ್ತದೆ. ಮನೆಯಲ್ಲಿ ಏನಾದರು ವಿಷಯ ಹೇಳುವ ಸಮಯದಲ್ಲಿ ಹಲ್ಲಿ ಶಬ್ದ (ಲೊಚಗುಟ್ಟಿದರೆ) ಹೇಳುತ್ತಿರುವ ವಿಷಯ ಸತ್ಯ ಎಂದು ಭಾವಿಸುತ್ತೇವೆ. ಅಸಲಿಯತ್ತಾಗಿ ಹಲ್ಲಿ ಲೊಚಗುಟ್ಟಿದರೆ ಏನು ಅರ್ಥ? ಬಸವರಾಜ ಗುರೂಜಿ ತಿಳಿದ್ದಾರೆ...
ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಹಲವಾರು ಮೂಢನಂಬಿಕೆಗಳಿವೆ. ಸರೀಸೃಪವಾದ ಹಲ್ಲಿ ಮನೆಯಲ್ಲಿ ವಾಸಿಸುವುದು ಸಾಮಾನ್ಯ. ಹಿಂದಿನ ಕಾಲದಿಂದಲೂ ಪಾಲಿಸಿಕೊಂಡು ಬಂದ ಕೆಲ ಆಚಾರಗಳ ಪ್ರಕಾರ ಹಲ್ಲಿಯನ್ನು ಕೆಲವೊಮ್ಮೆ ಶುಭ ಸೂಚಕವಾಗಿ ಪರಿಗಣಿಸಿದರೂ ಕೆಲವೊಮ್ಮೆ ಅಶುಭದ ಸಂಕೇತವಾಗಿ ಸೂಚಿಸಲಾಗುತ್ತದೆ. ಹಲ್ಲಿ ತಲೆಯ ಮೇಲೆ ಬಿದ್ದರೆ ಅಪಶಕುನ, ಹಲ್ಲಿ ಅಕಸ್ಮಾತ್ ದೇಹದ ಭಾಗದ ಮೇಲೆ ಬಿದ್ದರೆ ಒಮ್ಮೆ ಸ್ನಾನ ಮಾಡಿದ್ದರೂ ಮತ್ತೆ ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡುವಂತೆ ಹಿರಿಯರು ಗದರುತ್ತಾರೆ. ಹೀಗೆ ಹಲ್ಲಿ ತಲೆ ಮೇಲೆ ಬಿದ್ದರೆ ಅಪಶಕುನವೆನ್ನುವವರು ಅದೇ ಹಲ್ಲಿ ಮುಖದ ಮೇಲೆ ಬಿದ್ದರೆ ಯಾರೋ ಅತಿಥಿಗಳು ಮನೆಗೆ ಬರುವವರಿದ್ದಾರೆ ಎಂದು ನಂಬುತ್ತಾರೆ.
ಹಲ್ಲಿ ದೇಹದ ಭಾಗಕ್ಕೆ ಬಿದ್ದರೆ ಯಾವೆಲ್ಲಾ ನಂಬಿಕೆಗಳಿವೆಯೋ ಹಾಗೆಯೇ ಹಲ್ಲಿ ಲೊಚಗುಟ್ಟುವುದರ ಬಗ್ಗೆಯೂ ಹಲವಾರು ನಂಬಿಕೆಗಳಿವೆ. ಹಲ್ಲಿಯು ಲೊಚಗುಟ್ಟಿದರೆ ಅದು ಯಾವ ದಿಕ್ಕಿನಲ್ಲಿದೆ ಹಾಗೂ ಲೊಚಗುಟ್ಟಿದ ದಿನ ಹಾಗೂ ವಾರ ಯಾವುದು ಎನ್ನುವುದನ್ನೂ ಗಮನಿಸಲಾಗುತ್ತದೆ. ಮನೆಯಲ್ಲಿ ಏನಾದರು ವಿಷಯ ಹೇಳುವ ಸಮಯದಲ್ಲಿ ಹಲ್ಲಿ ಶಬ್ದ (ಲೊಚಗುಟ್ಟಿದರೆ) ಹೇಳುತ್ತಿರುವ ವಿಷಯ ಸತ್ಯ ಎಂದು ಭಾವಿಸುತ್ತೇವೆ. ಅಸಲಿಯತ್ತಾಗಿ ಹಲ್ಲಿ ಲೊಚಗುಟ್ಟಿದರೆ ಏನು ಅರ್ಥ? ಬಸವರಾಜ ಗುರೂಜಿ ತಿಳಿದ್ದಾರೆ…