Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಜನರಿಂದಲೂ ಅಪ್ಪು ಗುಣಗಾನ; ವಿವರಿಸಿದ ಸಂತೋಷ್​ ಆನಂದ್​ರಾಮ್​

ತಮಿಳುನಾಡು ಜನರಿಂದಲೂ ಅಪ್ಪು ಗುಣಗಾನ; ವಿವರಿಸಿದ ಸಂತೋಷ್​ ಆನಂದ್​ರಾಮ್​

TV9 Web
| Updated By: ಮದನ್​ ಕುಮಾರ್​

Updated on: Mar 26, 2024 | 9:23 PM

‘ಅಪ್ಪು ಸರ್ ನಮ್ಮ ಜೊತೆ ಇಲ್ಲ ಎಂಬ ಭಾವನೆ ಇತ್ತೀಚೆಗೆ ನನಗೆ ಹೋಗಿದೆ. ಯಾಕೆಂದರೆ, ಎಲ್ಲರಲ್ಲೂ ಅವರು ಜೀವಂತವಾಗಿ ಇರುವಾಗ ಇಲ್ಲ ಅಂತ ಹೇಗೆ ಹೇಳೋದು? ಚಿತ್ರರಂಗದಲ್ಲಿ ಯಾರೇ ಸಿನಿಮಾ ಮಾಡಿದರೂ ಅಪ್ಪು ಸರ್​ ಹೆಸರು ಹೇಳುತ್ತಾರೆ. ಯುವ ಸಿನಿಮಾ ಆಗಲು ಅವರೇ ಪರೋಕ್ಷ ಕಾರಣ. ಅವರ ಇರುವಿಕೆಯನ್ನು ನಾನು ಫೀಲ್​ ಮಾಡುತ್ತಿದ್ದೇನೆ’ ಎಂದು ಸಂತೋಷ್​ ಆನಂದ್​ ರಾಮ್​ ಹೇಳಿದ್ದಾರೆ.

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಭೌತಿಕವಾಗಿ ನಮ್ಮ ನಡುವೆ ಇಲ್ಲ. ಆದರೆ ಅವರು ಎಲ್ಲರ ಮನದಲ್ಲೂ ಶಾಶ್ವತ ಸ್ಥಾನ ಪಡೆದಿದ್ದಾರೆ. ಪುನೀತ್​ ಜೊತೆ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಅವರು ಹತ್ತಿರದ ಒಡನಾಟ ಹೊಂದಿದ್ದರು. ‘ರಾಜಕುಮಾರ’, ‘ಯುವರತ್ನ’ ಚಿತ್ರಗಳನ್ನು ಅವರು ಜೊತೆಯಾಗಿ ಮಾಡಿದ್ದರು. ಈಗ ‘ಯುವ’ (Yuva Movie) ಸಿನಿಮಾಗೆ ಸಂತೋಷ್ ಆನಂದ್​ರಾಮ್​ ನಿರ್ದೇಶನ ಮಾಡಿದ್ದಾರೆ. ಮಾರ್ಚ್​ 28ರಂದು ಚಿತ್ರ ಬಿಡುಗಡೆ ಆಗಲಿದ್ದು, ಈ ಪ್ರಯುಕ್ತ ‘ಟಿವಿ9 ಕನ್ನಡ’ಕ್ಕೆ ಅವರು ವಿಶೇಷ ಸಂದರ್ಶನ ನೀಡಿದ್ದಾರೆ. ಈ ವೇಳೆ ಪುನೀತ್​ ರಾಜ್​ಕುಮಾರ್​ ಅವರನ್ನು ಸಂತೋಷ್​ ಆನಂದ್​ರಾಮ್​ ನೆನಪಿಸಿಕೊಂಡಿದ್ದಾರೆ. ‘ಅವರ ಜನ್ಮದಿನದಂದು ಲಕ್ಷಾಂತರ ಜನರು ಬಂದಿದ್ದರು. ಅದು ತಮಾಷೆ ಅಲ್ಲ. ನಾನು ‘ಯುವ’ ಚಿತ್ರದ ಮಿಕ್ಸಿಂಗ್​ಗೆ ತಮಿಳುನಾಡಿಗೆ ಹೋದಾಗ ಅಲ್ಲಿ ಡ್ರೈವರ್​ ಮಾತನಾಡುತ್ತಿದ್ದರು. ಎಂಜಿಆರ್​ ಮುಂತಾದ ನಟರಿಗಿಂತಲೂ ಕರ್ನಾಟಕದಲ್ಲಿ ಪುನೀತ್​ ಸರ್ ಮೇಲೆ ಅಂತ ಅವರು ಹೇಳಿದ್ರು. ಜೀವನ ದೀರ್ಘವಾಗಿ ಅಲ್ಲ, ದೊಡ್ಡದಾಗಿ ಇರಬೇಕು. ಎಷ್ಟು ವರ್ಷ ಇರುತ್ತೀವಿ ಎಂಬುದು ಮುಖ್ಯವಲ್ಲ. ಇದ್ದಾಗ ನಾವು ಏನು ಮಾಡಿದ್ದೇವೆ ಎಂಬುದು ಮುಖ್ಯ. ಸಾಧಕರು ಹೋದಮೇಲೆ ಜೀವಿಸುತ್ತಾರೆ. ಅದೇ ಪುನೀತ್​ ರಾಜ್​ಕುಮಾರ್​. ನಮ್ಮೊಳಗೆಲ್ಲ ಅವರು ಜೀವಿಸುತ್ತಿದ್ದಾರೆ’ ಎಂದು ಸಂತೋಷ್​ ಆನಂದ್​ರಾಮ್​ (Santhosh Ananddram) ಹೇಳಿದ್ದಾರೆ. ಪೂರ್ತಿ ಸಂದರ್ಶನದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.