ವಿಜಯಪುರದಲ್ಲಿ ಅಕ್ಷರಶಃ ಬಾವಿಯ ಆಳಕ್ಕಿಳಿದು ಜಾಲಾಡಿದ ಇನ್ಸ್​ಪೆಕ್ಟರ್​​​ ಸಂಜೀವ್ ಕಾಂಬಳೆ ಹಾಗೂ ಟೀಂ ಜೋಡಿ ಶವಗಳ ಪ್ರಕರಣ ಭೇದಿಸಿದ್ದು ಹೇಗೆ ಗೊತ್ತಾ?

Vijayapura Police: ಅದು 19-03-2023 ಇಂದಿಗೆ ಒಂದು ವರ್ಷ 7 ದಿನಗಳ ಹಿಂದಿನ ಘಟನೆ. ಅಂದು ವಿಜಯಪುರ ತಾಲೂಕಿನ ಸಿದ್ದಾಪುರ ಗ್ರಾಮದ ಹೊರ ಭಾಗದಲ್ಲಿನ ಬಾವಿಯೊಂದರಲ್ಲಿ ಇಬ್ಬರ ಶವಗಳು ಕಂಡು ಬಂದಿದ್ದವು. ಲಗೇಜ್ ಬ್ಯಾಗ್ ನಲ್ಲಿ ಹಾಕಿದ್ದ ಶವಗಳು ಉಬ್ಬಿಕೊಂಡು, ಲಗೇಜ್ ಬ್ಯಾಗ್ ಒಡೆದು ಹೊರ ಬಂದಿದ್ದವು. ದೇಹ ಮುಖ ಊದಿಕೊಂಡು ಈ ಶವಗಳು ಯಾರದ್ದೆಂದು ಗೊತ್ತಾಗದೇ ಹೋಗಿತ್ತು. B Report ಹಾಕಿ ಕೇಸ್​ ಕ್ಲೋಸ್​ ಆಗಿತ್ತು. ಆದರೆ ಇನ್ಸ್​ಪೆಕ್ಟರ್​​​ ಕಾಂಬಳೆ ಹತ್ಯೆಯ ಜಾಡು ಹಿಡಿದಿದ್ದು ಹೀಗೆ...

ವಿಜಯಪುರದಲ್ಲಿ ಅಕ್ಷರಶಃ ಬಾವಿಯ ಆಳಕ್ಕಿಳಿದು ಜಾಲಾಡಿದ ಇನ್ಸ್​ಪೆಕ್ಟರ್​​​ ಸಂಜೀವ್ ಕಾಂಬಳೆ ಹಾಗೂ ಟೀಂ ಜೋಡಿ ಶವಗಳ ಪ್ರಕರಣ ಭೇದಿಸಿದ್ದು ಹೇಗೆ ಗೊತ್ತಾ?
ವಿಜಯಪುರ ಇನ್ಸ್​ಪೆಕ್ಟರ್​​​ ಬಾವಿಯಲ್ಲಿದ್ದ ಜೋಡಿ ಶವಗಳ ಪ್ರಕರಣ ಭೇದಿಸಿದ್ದು ಹೀಗೆ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಸಾಧು ಶ್ರೀನಾಥ್​

Updated on: Mar 27, 2024 | 11:02 AM

ಅನೇಕ ಕ್ಲಿಷ್ಟಕರ ಪ್ರಕರಣಗಳನ್ನು ಭೇಧಿಸಿದ ಕೀರ್ತಿ ಕರ್ನಾಟಕ ಪೊಲೀಸರದ್ದು. ಇದಕ್ಕೆ ಇಂಬು ಕೊಡುವಂತೆ ಇಂಥದ್ದೇ ಮತ್ತೊಂದು ಪ್ರಕರಣವನ್ನು ವಿಜಯಪುರ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಬಹುತೇಕವಾಗಿ ಬಿ ರಿಪೋರ್ಟ್ ಹಾಕಿ ಮುಗಿಸಿದ್ದ ಕೇಸ್ ನನ್ನು ಬಾವಿಯ ಆಳಕ್ಕೆ ಇಳಿದು ಜಾಲಾಡಿದ ವಿಜಯಪುರ ಗ್ರಾಮೀಣ ಸಿಪಿಐ ಸಂಜೀವ್ ಕಾಂಬಳೆ ಹಾಗೂ ಟೀಂ ಜೋಡಿ ಕೊಲೆಯ ರಹಸ್ಯವನ್ನು ಭೇದಿಸಿದ್ದಾರೆ. ಒಂದು ವರ್ಷದ ಹಿಂದೆ ಬಾವಿಯಲ್ಲಿ ಆ ಜೋಡಿ ಶವಗಳು ಪತ್ತೆಯಾಗಿ ಅನಾಮಧೇಯ ಶವಗಳೆಂದು ಗುರುತಿಸಲಾಗಿತ್ತು. ಶವಗಳ ಹೆಸರು ವಿಳಾಸ ಗೊತ್ತಾಗದೇ ಖಾಕಿ ತಡಕಾಡಿತ್ತು. ಯಾವುದೇ ಸುಳಿವೂ ಸಹ ಸಿಗದೇ ಕೈಬಿಟ್ಟು ಕೂಡುವಂತಾಗಿತ್ತು. ಆದರೆ ಛಲ ಬಿಡದ ಸೂಪರ್ ಕಾಪ್, ಆ ಜೋಡಿ ಶವಗಳ ಗುರುತು ಹೆಸರು ವಿಳಾಸ ಪತ್ತೆ ಮಾಡಿದ್ದಲ್ಲದೆ, ಅವರ ಉಸಿರು ನಿಲ್ಲಿಸಿದವರ ಕೈಗೆ ಕೋಳವನ್ನೂ ಹಾಕಿದ್ದಾರೆ. ಜೋಡಿ ಶವಗಳ ರಹಸ್ಯ ಕುರಿತ ವರದಿ ಇಲ್ಲಿದೆ ನೋಡಿ.

ಅದು 19-03-2023 ಇಂದಿಗೆ ಒಂದು ವರ್ಷ 7 ದಿನಗಳ ಹಿಂದಿನ ಘಟನೆ. ಅಂದು ವಿಜಯಪುರ ತಾಲೂಕಿನ ಸಿದ್ದಾಪುರ ಗ್ರಾಮದ ಹೊರ ಭಾಗದಲ್ಲಿನ ಬಾವಿಯೊಂದರಲ್ಲಿ ಇಬ್ಬರ ಶವಗಳು ಕಂಡು ಬಂದಿದ್ದವು. ಲಗೇಜ್ ಬ್ಯಾಗ್ ನಲ್ಲಿ ಹಾಕಿದ್ದ ಶವಗಳು ಉಬ್ಬಿಕೊಂಡು, ಲಗೇಜ್ ಬ್ಯಾಗ್ ಒಡೆದು ಹೊರ ಬಂದಿದ್ದವು. ದೇಹ ಮುಖ ಊದಿಕೊಂಡು ಈ ಶವಗಳು ಯಾರದ್ದೆಂದು ಗೊತ್ತಾಗದೇ ಹೋಗಿತ್ತು.

ಸಿದ್ದಪ್ಪ ದಳವಾಯಿ ಎಂಬುವವರ ಬಾವಿಯಲ್ಲಿ ಕಂಡುಬಂದಿದ್ದ ಈ ಜೋಡಿ ಶವಗಳು ಸಿದ್ದಾಪುರ ಗ್ರಾಮದ ಜನರನ್ನು ಥರಗುಟ್ಟಿಸಿತ್ತು. ಜಮೀನು ಮಾಲೀಕ ಸಿದ್ದಪ್ಪ ದಳವಾಯಿ ತಡಮಾಡದೇ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಾರ ತಿಳಿಸಿದ್ದ. ಜೋಡಿ ಶವಗಳು ಬಾವಿಯಲ್ಲಿ ಕಂಡು ಬಂದಿದ್ದ ವಿಚಾರ ತಿಳಿದ ವಿಜಯಪುರ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು.

ಸ್ಥಳದಲ್ಲಿ ಪರಿಶೀಲನೆ ಮಾಡಿ ಶವಗಳನ್ನು ಬಾವಿಯಿಂದ ಮೇಲೆತ್ತಿದ್ದರು. ಎರಡೂ ಶವಗಳು ಊದಿಕೊಂಡ ಕಾರಣ ಗುರುತು ಚಹರೆ ಹೆಸರು ವಿಳಾಸ ಪತ್ತೆಯಾಗಿರಲಿಲ್ಲ. ಪತ್ತೆಯಾಗುವಂತೆ ಯಾವುದೇ ವಸ್ತುಗಳಾಗಲಿ ಗುರುತಿನ ಪತ್ರ ಸಿಕ್ಕಿರಲಿಲ್ಲಾ. ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಕಾನೂನು ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಈ ಕುರಿತು ತನಿಖೆ ನಡೆಸಿದರೂ ಬಾವಿಯಲ್ಲಿ ಸಿಕ್ಕಿರೋ ಎರಡು ಶವಗಳ ಕುರಿತ ಮಾಹಿತಿ ಸಿಕ್ಕಿರಲಿಲ್ಲ.

ಇಷ್ಟರ ಮದ್ಯೆ ಈ ಕೇಸ್ ಗೆ ಬಿ ರಿಪೋರ್ಟ್ ಹಾಕಿದರಾಯಿತು ಎಂದುಕೊಳ್ಳಲಾಯಿತು. ಆದರೂ ಇನ್ನಷ್ಟು ಕಾಯೋಣವೆಂದು ಬಿ ರಿಪೋರ್ಟ್ ಹಾಕದೇ ಬಿಟ್ಟಿದ್ದರು. ಎಲ್ಲರೂ ಮರೆತೇ ಹೋಗಿದ್ದ ಈ ಪ್ರಕರಣದ ಮೇಲೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸಂಜೀವ್ ಕಾಂಬಳೆ ಕಣ್ಣಿಟ್ಟಿದ್ದರು. ಹೇಗಾದರೂ ಮಾಡಿ ಜೋಡಿ ಶವಗಳು ಬಾವಿಯಲ್ಲಿ ಸಿಕ್ಕಿದ್ದರ ಪ್ರಕರಣಕ್ಕೆ ಫುಲ್​ ಸ್ಟಾಪ್​ ಹಾಕದೆ, ಫುಲ್ ಪಾಯಿಂಟ್ಸ್​​ ಹಾಕಬೇಕೆಂದು ತನಿಖೆ ನಡೆಸಿದ್ದರು.

ಹೀಗೆ ಜೋಡಿ ಶವಗಳ ಪ್ರಕರಣ ಕುರಿತು ಸಿಪಿಐ ಸಂಜೀವ್ ಮಾಹಿತಿ ಕಲೆ ಹಾಕುತ್ತಿರೋವಾಗಲೇ ಅದೊಂದು ಕೇಸ್ ಇವರ ಗಮನಕ್ಕೆ ಬರುತ್ತದೆ. ಅದುವೇ ದೂರದ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾದ 23/2024 ನಂಬರಿನ ಕೇಸ್ ಕಣ್ಣಿಗೆ ಬೀಳುತ್ತದೆ. ಈ ಕೇಸ್ ನಲ್ಲಿ ಓರ್ವ ಮಹಿಳೆ ಹಾಗೂ ಓರ್ವ ಬಾಲಕ ನಾಪತ್ತೆಯಾಗಿರೋ ಕುರಿತು ದೂರು ದಾಖಲಾಗಿರುತ್ತದೆ. ಆ ದೂರನ್ನು ಪರಿಶೀಲಿಸಲಾಗಿ ಇಲ್ಲಿ ಪತ್ತೆಯಾದ ಶವಗಳು ಮೈಸೂರಿನ ಶೃತಿ ಹಾಗೂ ಆಕೆಯ ಪುತ್ರ ಅಪ್ರಾಪ್ತ ಬಾಲಕನದ್ದು ಎಂಬುದು ಗೊತ್ತಾಗುತ್ತದೆ.

ವಿಜಯಪುರ ತಾಲೂಕಿನ ಸಿದ್ದಾಪುರ ಗ್ರಾಮದ ಹೊರ ಭಾಗದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಶೃತಿ ಹಾಗೂ ಆಕೆಯ ಪುತ್ರನದ್ದು ಎಂಬ ವಿಚಾರ ಗೊತ್ತಾಗಿದ್ದೇ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಶೃತಿ ಅವರ ತಂದೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ಹಾಗೂ ಮೊಮ್ಮಗ ಕಳೆದ 2023 ರ ಮಾರ್ಚ್ ನಿಂದ ಕಾಣೆಯಾಗಿದ್ದಾರೆ ಎಂಬ ದೂರ ನೀಡಿದ ಮೇಲೆಯೆ ಎಂಬುದನ್ನ ಗಮನಿಸಬೇಕಿದೆ.

ಮುಂದಿನ ತನಿಖೆಯಲ್ಲಿ ಶೃತಿ ಹಾಗೂ ಆಕೆಯ ಪುತ್ರ ರೋಹನ್ ಮೈಸೂರಿನಿಂದ ರೈಲು ಮೂಲಕ ವಿಜಯಪುರಕ್ಕೆ ಬಂದಿರೋದು ಗೊತ್ತಾಗುತ್ತದೆ. ತಡ ಮಾಡದ ಇನ್ಸಪೆಕ್ಟರ್ ಸಂಜೀವ್ ಕಾಂಬಳೆ ತನಿಖೆಯನ್ನು ತೀವ್ರಗೊಳಿಸುತ್ತಾರೆ. ತನಿಖೆಯಲ್ಲಿ ಮೈಸೂರಿನ ಶೃತಿಗೂ ವಿಜಯಪುರದ ಸಾಗರ ಲಂಬಾಣಿ ಎಂಬುವವನಿಗೂ ಪರಿಚಯವಿರೋದು ಗೊತ್ತಾಗುತ್ತದೆ.

ಆಗ ಸಾಗರ ಹಾಗೂ ಶೃತಿಯ ಮೊಬೈಲ್ ಗಳ ಕಾಲ್ ಡಿಟೇಲ್ಸ್ ಪರಿಶೀಲನೆ ಮಾಡಿದಾಗ ಸಾಗರ ಹಾಗೂ ಶೃತಿ ಪರಸ್ಪರ ಪರಿಚಯಸ್ಥರೇ ಎಂಬುದು ಬಹಿರಂಗವಾಗುತ್ತದೆ. ಪೊಲೀಸರು ವಿಜಯಪುರ ನಗರದ ಸಾಯಿ ಪಾರ್ಕ್ ಏರಿಯಾದಲ್ಲಿ ಹೊಟೇಲ್​ ನಡೆಸುತ್ತಿದ್ದ ಸಾಗರನನ್ನು ಎತ್ಹಾಕಿಕೊಂಡು ಬಂದಾಗ ಒಂದು ಭಯಾನಕ ವಿಚಾರವೇ ಇಡೀ ಪ್ರಕರಣಕ್ಕೆ ಟ್ವಿಸ್ಟ್ ನೀಡುತ್ತದೆ.

ಅದುವೇ ಸಾಗರ ಹಾಗೂ ಶೃತಿ ಲವ್ ಸ್ಟೋರಿ. ವಿಜಯಪುರದ ಸಾಗರ ಲಂಬಾಣಿ ಮೈಸೂರಿನಲ್ಲೇ ಬೆಳೆದಿದ್ದು. ಸಾಗರನ ತಾಯಿ ಮೈಸೂರಿನಲ್ಲಿ ಶಿಕ್ಷಕಿಯಾಗಿದ್ದು ಆತ ಅಲ್ಲೇ ಮೈಸೂರಿನಲ್ಲಿ ಸಾಗರನಿಗೆ ಶೃತಿ ಫೇಸ್ ಬುಕ್ ನಲ್ಲಿ ಪರಿಚಯವಾಗಿತ್ತಂತೆ. ಪರಿಚಯ ಪ್ರೇಮಕ್ಕೆ ತಿರುಗಿ ಅದು ಕಾಮಕ್ಕೂ ಹೋಗಿದೆ. ಅದಾಗಲೇ ಒಂದು ಮಗುವಿನ ತಾಯಿಯಾಗಿರೋ ಶೃತಿ ಹಾಗೂ ಅವಿವಾಹಿತ ಸಾಗರನ ಮಧ್ಯೆ ಅನೈತಿಕ ಸಂಬಂಧ ಬೆಳೆದು ಹೋಗುತ್ತದೆ.

ಈ ಸಾಗರ ಎಂಬ ವ್ಯಕ್ತಿ ಶೃತಿಯೊಂದಿಗೆ ಜಗಳ ಮಾಡಿ ಮೈಸೂರನ್ನು ಬಿಟ್ಟು ವಾಪಸ್ ಸ್ವಂತ ಊರು ವಿಜಯಪುರಕ್ಕೆ ಬಂದು ಮೊದಲು ಕೃಷಿ ಕೆಲಸಕ್ಕೆ ಮುಂದಾಗುತ್ತಾನೆ. ನಂತರ ನಗರದ ಸಾಯಿ ಪಾರ್ಕ್ ಬಳಿ ಚಾಟ್ ಹೊಟೇಲ್ ತೆರೆದು ಜೀವನ ಮಾಡುತ್ತಿರುತ್ತಾನೆ. ಆದರೆ ಶೃತಿ ಮಾತ್ರ ಸಾಗರನನ್ನು ಬಿಟ್ಟಿರಲಾರದೇ ತನ್ನ 12 ವರ್ಷದ ಮಗನೊಂದಿಗೆ ಲಗೇಜ್ ಸಮೇತ ರೈಲು ಮೂಲಕ ವಿಜಯಪುರಕ್ಕೆ ಬಂದು ಸಾಗರನಿಗೆ ಕೆರೆ ಮಾಡಿ ನಾನು ಗಂಟುಮೂಟೆ ಸಮೇತ ವಿಜಯಪುರಕ್ಕೆ ಬಂದಿದ್ದೇನೆಂದು ಹೇಳುತ್ತಾಳೆ.

ಆಗ ಸಾಗರ ಶೃತಿ ಹಾಗೂ ಆಕೆಯ ಪುತ್ರ ರೋಹನ್ ಗೆ ನಗರದ ಫೋರ್ ವೇ ಲಾಡ್ಜ್ ಗೆ ಕರೆದುಕೊಂಡು ಬಂದು ರೂಂ ನಂಬರ್ 103 ರಲ್ಲಿ ಇಡುತ್ತಾನೆ. ಬಳಿಕ ಶೃತಿಯ 12 ವರ್ಷ ಅಪ್ರಾಪ್ತ ವಯಸ್ಸಿನ ರೋಹಿತ್ ನನ್ನು ತನ್ನ ಸ್ನೇಹಿತ ಲಕ್ಷ್ಮೀಕಾಂತ ಬಳಿ ಕಳುಹಿಸುತ್ತಾನೆ. ಲಾಡ್ಜನಲ್ಲಿ ಶೃತಿ ಹಾಗೂ ಸಾಗರನ ಮಧ್ಯೆ ಜಗಳ ಆಗುತ್ತದೆ. ಆಗ ಸಾಗರ ಈಕೆಯನ್ನು ಮದುವೆಯಾಗಲು ಸಾಧ್ಯವಿಲ್ಲಾ ಎಂದು ಕತ್ತು ಹಿಸುಕಿ ಶೃತಿಯನ್ನು ಕೊಲೆ ಮಾಡುತ್ತಾನೆ.

ಬಳಿಕ ಶೃತಿಯ ಹತ್ಯೆಗೆ ಆಕೆಯ ಮಗನೇ ಸಾಕ್ಷಿಯಾಗುತ್ತಾನೆಂದು ಬಗೆದು ಗೆಳೆಯ ಲಕ್ಷ್ಮೀಕಾಂತ ಬಳಿಯಿದ್ದ ರೋಹಿತ್ ನನ್ನು ಲಾಡ್ಜಗೆ ಕರೆಸಿಕೊಂಡು ಬಾಲಕನನ್ನೂ ರೂಂನಲ್ಲಿ ಕತ್ತು ಹಿಸುಕಿ ಕೊಂದು ಬಿಡುತ್ತಾನೆ ಸಾಗರ್​​. ನಂತರ ಇಬ್ಬರ ಶವಗಳನ್ನು ಲಗೇಜ್ ಬ್ಯಾಗ್ ನಲ್ಲಿ ಹಾಕಿ ಸ್ಕಾರ್ಪೀಯೋ ವಾಹನದಲ್ಲಿ ಹಾಕಿಕೊಂಡು ಸಿದ್ದಾಪುರ ಗ್ರಾಮದ ಹೊರಭಾಗದಲ್ಲಿರೋ ಬಾವಿಗೆ ಎಸೆದು ಏನೂ ಗೊತ್ತೇ ಇಲ್ಲದವನಂತೆ ಇದ್ದು ಬಿಡುತ್ತಾನೆ. ಈತನಿಗೆ ಸಹಾಯ ಮಾಡಿದ ಲಕ್ಷ್ಮೀಕಾಂತ ಕುಂಬಾರ ಸಹ ಯಾರ ಮುಂದೆಯೂ ಈ ವಿಚಾರ ಬಾಯಿ ಬಿಡಲ್ಲ. ಇದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದ್ದು ಇಬ್ಬನ್ನೂ ಈಗ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಆಧಿಕಾರಿಗಳು ಬಂಧಿಸಿದ್ದಾರೆ.

ಇನ್ನೂ ಓದಿ: ವಯಸ್ಕರ ಪ್ರೇಮಿಗಳಿಗೆ ಜೀವ ಬೆದರಿಕೆ: ಯುವತಿ ತಾಯಿಯಿಂದ ಯುವಕನಿಗೆ 50 ಲಕ್ಷಕ್ಕೆ ಡಿಮ್ಯಾಂಡ್!

ಸಿದ್ದಾಪುರ ಗ್ರಾಮದ ಬಾವಿಯಲ್ಲಿ ಸಿಕ್ಕ ಜೋಡಿ ಶವಗಳ ಪ್ರಕರಣದ ರಹಸ್ಯ ಭೇದಿಸಿರುವ ವಿಚಾರ ಜಿಲ್ಲೆಯಲ್ಲಿ ಗೊತ್ತಾಗಿದ್ದೇ ತಡ ಜನರು ಬೆಚ್ಚಿ ಬಿದ್ದಿದ್ಧಾರೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಮಹಿಳೆಯನ್ನು ಕೊಲೆ ಮಾಡಿದ್ದು ಸರಿಯಲ್ಲ. ಅದರಲ್ಲೂ ಏನೂ ತಪ್ಪೇ ಮಾಡದ ಪುಟ್ಟ ಬಾಲಕನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದು ಯಾವ ನ್ಯಾಯವೆಂದು ಮಮ್ಮಲಮರುಗಿದ್ಧಾರೆ.

ಮಹಿಳೆಯನ್ನು ಇಲ್ಲಿ ಅಬಲೆಯನ್ನಾಗಿಯೇ ಮಾಡಿದ್ದಾರೆ. ಹೀಗೆಲ್ಲಾ ಮಹಿಳೆಯರು ಮೋಸ ಹೋಗಬಾರದೆಂದು ಸಾಮಾಜಿಕ ಜಾಲ ತಾಣದಲ್ಲಿ ಎಚ್ಚರಿಕೆ ಮಿಶ್ರಿತ ಮನವಿ ಮಾಡಿದ್ದಾರೆ. ಇನ್ನು ಒಂದು ವರ್ಷದ ಹಿಂದೆ ನಡೆದ ಈ ಪ್ರಕರಣವನ್ನು ಪೊಲೀಸರು ಸೂಕ್ತ ತನಿಖೆ ನಡೆಸಿ ಜೋಡಿ ಕೊಲೆಯ ರಹಸ್ಯವನ್ನು ಭೇದಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಇಂಥ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಇಂಥ ಕುಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ವಿಜಯಪುರ ನಗರದ ಜನರು ಒತ್ತಾಯ ಮಾಡಿದ್ದಾರೆ.

ವಿವಾಹಿತ ಮಹಿಳೆಯ ಪ್ರೇಮ ಸಂಪಾದನೆ ಮಾಡಿದ್ದವ ಇಲ್ಲಿ ಭೀಕರ ಘಟನೆಗೆ ಕಾರಣವಾಗಿದ್ಧಾನೆ. ಸಾಗರ ಲಂಬಾಣಿಯ ಪ್ರೇಮವನ್ನೇ ನಂಬಿ ಮೈಸೂರಿನಿಂದ ಬಂದಿದ್ದ ಪ್ರೇಯಸಿಗೆ ಈ ವಂಚಕ ಯಮಲೋಕದ ಹಾದಿ ತೋರಿದ್ದು ಮಾತ್ರ ಅತ್ಯಂತ ಅಮಾನವೀಯ. ಸಾಲದೆಂಬಂತೆ ಮಹಿಳೆಯ ಅಪ್ರಾಪ್ತ ಬಾಲಕನ್ನೂ ಖಲಾಸ್ ಮಾಡಿ ಇಬ್ಬರ ಶವಗಳನ್ನು ಬಾವಿಗೆ ಎಸೆದು ಏನೂ ನಡೆದೇ ಇಲ್ಲವೆಂಬಂತೆ ಇದ್ದವನನ್ನು ಒಂದು ವರ್ಷದ ಬಳಿಕ ಪೊಲೀಸರು ಖೆಡ್ದಾಕ್ಕೆ ಕೆಡವಿದ್ದಾರೆ.

ಜೋಡಿ ಕೊಲೆ ಮಾಡಿದ ಕೀಚಕ ಹಾಗೂ ಆತನಿಗೆ ಸಾಥ್ ನೀಡಿದ ದುರುಳನಿಗೆ ಜೈಲಿನ ಮುಖ ತೋರಿಸಿದ್ದಾರೆ. ಒಂದು ವರ್ಷದ ಹಿಂದಿನ ಜೊಡಿ ಶವಗಳ ಪತ್ತೆಯ ಹಿಂದೆ ಮರ್ಡರ್ ಮಿಸ್ಟರಿಯನ್ನು ಹೊರಗೆಳೆದು ಆರೋಪಿಗಳನ್ನು ಬಂಧಿಸಿದ ವಿಜಯಪುರ ಜಿಲ್ಲಾ ಪೊಲೀಸರಿಗೆ ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂಜೀವ್ ಕಾಂಬಳೆ ಹಾಗೂ ಇತರೆ ಆಧಿಕಾರಿಗಳು ಮತ್ತು ಸಿಬ್ಬಂದಿಗಳ ತನಿಖೆಗೆ ಭೇಷ್ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ