ವಯಸ್ಕರ ಪ್ರೇಮಿಗಳಿಗೆ ಜೀವ ಬೆದರಿಕೆ: ಯುವತಿ ತಾಯಿಯಿಂದ ಯುವಕನಿಗೆ 50 ಲಕ್ಷಕ್ಕೆ ಡಿಮ್ಯಾಂಡ್!

ವಯಸ್ಕರ ಪ್ರೇಮಿಗಳಿಗೆ ಜೀವ ಬೆದರಿಕೆ ಹಾಕಲಾಗಿದೆ. ಅದಾಗಲೇ 1 ಲಕ್ಷ ಹಣ ಪಡೆದಿದ್ದು, ಇನ್ನೂ 50 ಲಕ್ಷಕ್ಕೆ ಡಿಮ್ಯಾಂಡ್ ಇಡಲಾಗಿದೆ. ಭಯದಲ್ಲಿರೋ ಯುವ ಜೋಡಿ ಮಾತ್ರ ನಮಗೆ ಏನಾದರೂ ಅನಾಹುತವಾದರೆ ರೌಡಿ ಶೀಟರ್ ಹುಚ್ಚಪ್ಪ ಕಾಲೇಬಾಗ್, ಮುತ್ತಪ್ಪ ಹಾಗೂ ಯುವತಿಯ ತಾಯಿ ಕಾರಣವೆಂದು ಹೇಳಿದ್ದಾರೆ. ನಮಗೆ ಸೂಕ್ತ ರಕ್ಷಣೆ ಬೇಕೆಂದು ಒತ್ತಾಯ ಮಾಡಿದ್ದಾರೆ.

ವಯಸ್ಕರ ಪ್ರೇಮಿಗಳಿಗೆ ಜೀವ ಬೆದರಿಕೆ: ಯುವತಿ ತಾಯಿಯಿಂದ ಯುವಕನಿಗೆ 50 ಲಕ್ಷಕ್ಕೆ ಡಿಮ್ಯಾಂಡ್!
ವಯಸ್ಕರ ಪ್ರೇಮಿಗಳಿಗೆ ಜೀವ ಬೆದರಿಕೆ: ಯುವಕನಿಗೆ 50 ಲಕ್ಷಕ್ಕೆ ಡಿಮ್ಯಾಂಡ್!
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಸಾಧು ಶ್ರೀನಾಥ್​

Updated on:Mar 15, 2024 | 2:45 PM

ಆತನದ್ದು ಬೇರೆ ಜಾತಿ, ಈಕೆಯದ್ದು ಬೇರೆ ಜಾತಿ. ಆದರೆ ಇಬ್ಬರದ್ದೂ ಒಂದೇ ಊರು. ಮೊದಲ ನೋಟದಲ್ಲೇ ಪ್ರೀತಿ ಹುಟ್ಟುತ್ತೆ ಎಂದು ಹೇಳೋ ಹಾಗೇ ಇವರಿಬ್ಬರೂ ಮೊದಲ ನೋಟದಲ್ಲೇ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಯ ಲವ್ ಕಹಾನಿ (Adult Lovers) ಎರಡೂ ಮನೆಯವರಿಗೆ ಗೊತ್ತಾಗಿ ಹೋಗಿತ್ತು. ಆದರೆ ಎರಡೂ ಮನೆಯವರು ಇವರ ಪ್ರೀತಿಗೆ ವಿರೋಧ ಮಾಡಿದ್ದರು. ಆಗ ಯುವ ಪ್ರೇಮಿಗಳು ಮನೆ ಬಿಟ್ಟು ಓಡಿ ಹೋಗಿ ಮದುವೆಯಾದರು. ಆದರೆ ಇದೀಗಾ ಯುವತಿಯ ತಾಯಿ (Mother) ಹಾಗೂ ಮನೆಯವರು ರೌಡಿ ಶೀಟರ್ ಗಳನ್ನು ಮುಂದಿಟ್ಟುಕೊಂಡು ಯುವಕನ್ನು ಕೊಲೆ ಮಾಡುತ್ತೇವೆ (Life Threat), ಇಲ್ಲವೇ 50 ಲಕ್ಷ ರೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ದಾರಿ ಕಾಣದೇ ನವವಿವಾಹಿತರು ಖಾಕಿ ಮೊರೆ ಹೋಗಿದೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ ನೋಡಿ….

ನಿಜವಾದ ಪ್ರೀತಿಗೆ ಜಾತಿ ವಯಸ್ಸು ಬಣ್ಣ ಮುಖ್ಯವಾಗಿರಲ್ಲ. ನಿಜವಾದ ಪ್ರೇಮಿಗಳು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುತ್ತಾರೆ. ಇಲ್ಲಿ ಆಗಿದ್ದೂ ಅದೇ. ಇಂಡಿ ತಾಲೂಕಿನ ಹಂಜಗಿ ಗ್ರಾಮದ (Hanjagi village of Indi taluk Belagavi) ಅನ್ಯ ಕೋಮಿನ ಯುವಕ ಯಾಸೀನ್ ಜಮಾದಾರ್ ಹಾಗೂ ಎಸ್ಸಿ ಸಮುದಾಯಕ್ಕೆ ಸೇರಿರೋ ಅಶ್ವಿನಿ ಭಂಡಾರಿ ಪರಸ್ಪರ ಇಷ್ಟಪಟ್ಟ್ಟಿದ್ದರು. ಇಬ್ಬರೂ ವಯಸ್ಕರರಾಗಿದ್ದು ಮದುವೆಯಾಗೋ ಕನಸು ಕಂಡಿದ್ದರು. ಇವರ ಪ್ರೇಮದ ಕಹಾನಿ ಇಬ್ಬರೂ ಮನೆಯವರಿಗೆ ಗೊತ್ತಾಗಿತ್ತು. ಈ ಕಾರಣ ಯಾಸೀನ್ ಹಾಗೂ ಆಶ್ವಿನಿ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ, ಸದ್ಯ ಆಶ್ವಿನಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ.

ಎರಡೂ ಕಡೆಯೆ ಮನೆಯವರ ಉಸಾಬರಿ ಬೇಡಾ ಎಂದು ತಮ್ಮ ಪಾಡಿಗೆ ತಾವಿದ್ದಾರೆ. ಇಷ್ಟರ ಮಧ್ಯೆ ಅಶ್ವಿನಿ ತಾಯಿ ಗರ್ಭಪಾತ ಮಾಡಿಸಿ ನಿನಗೆ ಬೇರೆ ಮದುವೆ ಮಾಡುತ್ತೇವೆಂದು ದುಂಬಾಲು ಬಿದ್ದಿದ್ದಾಳಂತೆ. ಜೊತೆಗೆ ಅದೇ ಗ್ರಾಮದ ರೌಡಿ ಶೀಟರ್ ಹುಚ್ಚಪ್ಪಾ ಕಾಲೇಬಾಗ್, ಕೊಲೆಯೊಂದರ ಪ್ರಕರಣದ ಆರೋಪಿಯಾಗಿರೋ ಮುತ್ತಪ್ಪ ಎಂಬುವವರ ಜೊತೆ ಬಂದು ಯಾಸೀನ್ ಗೆ ಬೆದರಿಕೆ ಹಾಕಿದ್ಧಾರೆ. ಅಶ್ವಿನಿಯನ್ನು ಬಿಟ್ಟು ಬಿಡಬೇಕೆಂದು ಒತ್ತಾಯ ಮಾಡಿದ್ದಾರೆ.

ಆದರೆ ಯಾಸೀನ್ ಹಾಗೂ ಅಶ್ವಿನಿ ಇಬ್ಬರೂ ಒಬ್ಬರನ್ನು ಬಿಟ್ಟು ಒಬ್ಬರು ಇರಲ್ಲ ಎಂದು ಹೇಳಿದ್ದಾರೆ. ಆಗ ಯುವತಿಯ ಮನೆಯವರು ಯಾಸೀನ್ ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇಷ್ಟರ ಮದ್ಯೆ ರೌಡಿ ಶೀಟರ್ ಆಗಿರೋ ಹುಚ್ಚಪ್ಪ ಕಾಲೇಬಾಗ ನಮ್ಮ ಸಮಾಜದ ಯುವತಿಯನ್ನು ಮದುವೆಯಾಗಿದ್ದೀಯಾ. ಒಂದು ಲಕ್ಷ ಹಣ ಕೊಟ್ಟುಬಿಡು ನಿನ್ನ ಕೊಲೆ ಮಾಡಲ್ಲಾ ಎಂದು ಹೇಳಿದ್ದಾರೆ. ಜೀವ ಭಯದಲ್ಲಿದ್ದ ಯಾಸೀನ್ ಒಂದು ಲಕ್ಷ ರೂಪಾಯಿಯನ್ನು ಹುಚ್ಚಪ್ಪ ಕಾಲೇಭಾಗಗೆ ನೀಡಿದ್ದಾರೆ. ಈ ಹಣವನ್ನು ಹುಚ್ಚಪ್ಪ ಕಾಲೇಬಾಗ್, ಮುತ್ತಪ್ಪ ಹಾಗೂ ಅಶ್ವಿನಿಯ ತಾಯಿ ಹಂಚಿಕೊಂಡಿದ್ದಾರೆ ಎಂದು ಯುವತಿ ಅಶ್ವಿನಿ ಆರೋಪ ಮಾಡಿದ್ದಾಳೆ.

ಹೀಗೆ ಪ್ರೀತಿಸಿ ಮದುವೆಯಾಗಿರೋ ಯಾಸೀನ್ ಹಾಗೂ ಆಶ್ವಿನಿ, ಹುಚ್ಚಪ್ಪ ಹಾಗೂ ಇತರರಿಗೆ ಜೀವ ಭಯ ಹಾಕಿರೋ ಕಾರಣ ಒಂದು ಲಕ್ಷ ರೂಪಾಯಿ ನೀಡಿ ತಮ್ಮ ಪಾಡಿಗೆ ತಾವಿದ್ದಾರೆ. ಇದೀಗ ಯಾಸೀನ್ ಕೊಲೆ ಮಾಡುತ್ತೇವೆಂದು ಹುಚ್ಚಪ್ಪ ಹಾಗೂ ಮುತ್ತಪ್ಪ ಮತ್ತೇ ಬೆದರಿಕೆ ಹಾಕುತ್ತಿದ್ದಾರಂತೆ. ಒಟ್ಟು 50 ಲಕ್ಷ ರೂಪಾಯಿ ಹಣ ನೀಡಿದರೆ ಮಾತ್ರ ಬಿಡುತ್ತೇವೆ. 50 ಲಕ್ಷ ರೂಪಾಯಿ ಹಣ ನೀಡದಿದ್ದರೆ ಕೊಲೆ ಮಾಡುತ್ತೇವೆಂದು ಹುಚ್ಚಪ್ಪ ಹಾಗೂ ಮುತ್ತಪ್ಪ ಬೆದರಿಕೆ ಹಾಕುತ್ತಿದ್ದಾರಂತೆ. ಇದಕ್ಕೆ ಆಶ್ವಿನಿಯ ತಾಯಿಯೂ ಕೈ ಜೋಡಿಸಿದ್ದಾಳೆ.

ಈ ಮಧ್ಯೆ, ಯಾಸೀನ್ ನನ್ನು ಬಿಟ್ಟು ಬಾ ಬೇರೆ ಮದುವೆ ಮಾಡುತ್ತೇವೆಂದು ಒತ್ತಾಯ ಮುಂದುವರೆಸಿದ್ದಾಳಂತೆ. 50 ಲ್ಷ ಹಣ ಬೇಕೆಂಬ ಬೇಡಿಕೆಗೆ ಯಾಸೀನ್ ಹಾಗೂ ಆಶ್ವಿನಿ ಚಿಂತಾಕ್ರಾಂತರಾಗಿದ್ದಾರೆ. ನಮ್ಮ ಬಳಿ ಹಣವಿಲ್ಲಾ ಎಂದು ಹೇಳಿದರೂ ಯಾಸೀನ್ ತಂದೆ ತಾಯಿಯವರ ಮೇಲೆ ಹೊರ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿರೋ ಸುಳ್ಳು ಪ್ರಕರಣ ದಾಖಲು ಮಾಡಿ ಹಿಂಸೆ ನೀಡುತ್ತಿದ್ದಾರಂತೆ. ಇದರಿಂದ ಭಯಗೊಂಡ ಯಾಸೀನ್ ಹಾಗೂ ಅಶ್ವಿನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ.

ಅಪರ ಪೊಲೀಸ್ ವರಿಷ್ಟಾಧಿಕಾರಿ ಶಂಕರ ಮಾರಿಹಾಳ ಅಶ್ವಿನಿ ಹಾಗೂ ಯಾಸೀನ್ ದೂರನ್ನು ಸ್ವೀಕಾರ ಮಾಡಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದ್ಧಾರೆ. 50 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ. ಭಯದಲ್ಲಿರೋ ಯುವ ಜೋಡಿ ಮಾತ್ರ ನಮಗೆ ಏನಾದರೂ ಅನಾಹುತವಾದರೆ ರೌಡಿ ಶೀಟರ್ ಹುಚ್ಚಪ್ಪ ಕಾಲೇಬಾಗ್, ಮುತ್ತಪ್ಪ ಹಾಗೂ ಯುವತಿಯ ತಾಯಿ ಕಾರಣವೆಂದು ಹೇಳಿದ್ದಾರೆ. ನಮಗೆ ಸೂಕ್ತ ರಕ್ಷಣೆ ಬೇಕೆಂದು ಒತ್ತಾಯ ಮಾಡಿದ್ದಾರೆ.

Also Read: ನಮ್ಮೂರಿನ ಗೋಮಾಳ ನಮಗೇ ಮೀಸಲಿಡಿ -ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ಕೊಡಬೇಡಿ: ಕೋಲಾರ ಡಿಸಿ ವಿರುದ್ಧ ಗಾಜಲದಿನ್ನೆ ಗ್ರಾಮಸ್ಥರು ಕಿಡಿ

ಪರಸ್ಪರ ಇಷ್ಟ ಪಟ್ಟು ಮದುವೆಯಾಗಿರೋ ವಯಸ್ಕರ ಪ್ರೇಮಿಗಳಿಗೆ ಜೀವ ಬೆದರಿಕೆ ಹಾಕಲಾಗಿದೆ. ಅದಾಗಲೇ ಒಂದು ಲಕ್ಷ ರೂಪಾಯಿ ಹಣ ಪಡೆದಿರುವವರು 50 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದು ಎಷ್ಟರ ಮಟ್ಟಿಗೆ ಸರಿಯಾದ ಕೆಲಸ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ನಿಟ್ಟಿನಲ್ಲಿ ನವ ವಿವಾಹಿತ ಜೋಡಿಗೆ ಜಿಲ್ಲಾ ಅಪರ ಪೊಲೀಸ್ ವರಿಷ್ಟಾಧಿಕಾರಿಗಳು ಕಾನೂನು ನೆರವು ಹಾಗೂ ರಕ್ಷಣೆ ನೀಡೋದಾಗಿ ಭರವಸೆ ನೀಡಿದ್ದಾರೆ. ಇವರಿಗೆ ಹಣದ ಬೇಡಿಕೆ ಇಟ್ಟಿರುವವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳವುದಾಗಿಯೂ ಪ್ರೇಮಿಗಳಿಗೆ ಭರವಸೆಯಿತ್ತಿದ್ದಾರೆ. ಇದು ಭರವಸೆಯಾಗಿಯೇ ಇರುತ್ತದೆಯೋ ಅಥವಾ ಪ್ರೇಮಿಗಳಿಗೆ ಸಹಾಯವಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:30 pm, Fri, 15 March 24

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ