ಶಿಲ್ಪಾನಾಗ್​ರಿಂದ ರಾಜೀನಾಮೆಯನ್ನು ಸ್ವೀಕರಿಸದ ಸಿಎಸ್ ರವಿಕುಮಾರ್; ಸೋಮವಾರ ನಿರ್ಧಾರ

ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಸಮರ ಮುಂದುವರಿದಿದೆ. ರೋಹಿಣಿ ಸಿಂಧೂರಿ ಆರೋಪಕ್ಕೆ ಶಿಲ್ಪಾನಾಗ್ ತಿರುಗೇಟು ನೀಡಿದ್ದು, ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾನು ಕೆಲವು ಸಭೆಗಳಿಗೆ ಹೋಗಿದ್ದೇನೆ. ನನಗೆ ಬೇರೆ ಪಾಲಿಕೆ ಕೆಲಸವಿದ್ದಾಗ ನನ್ನ ಪರವಾಗಿ ಅಧಿಕಾರಿಯನ್ನು ಕಳುಹಿಸಿದ್ದೇನೆ.

ಶಿಲ್ಪಾನಾಗ್​ರಿಂದ ರಾಜೀನಾಮೆಯನ್ನು ಸ್ವೀಕರಿಸದ ಸಿಎಸ್ ರವಿಕುಮಾರ್; ಸೋಮವಾರ ನಿರ್ಧಾರ
ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್
Updated By: sandhya thejappa

Updated on: Jun 05, 2021 | 11:29 AM

ಮೈಸೂರು: ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆಯನ್ನು ಸಿಎಸ್ ಸ್ವೀಕರಿಸಿದ್ದು, ರಾಜೀನಾಮೆ ಬಗ್ಗೆ ಸೋಮವಾರ ನಿರ್ಧಾರವಾಗಲಿದೆ. ರಾಜೀನಾಮೆ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ತಿಳಿಸಲು ಸಿಎಸ್ ರವಿಕುಮಾರ್ ಸೂಚನೆ ನೀಡಲಾಗಿದೆ ಎಂದು ಟಿವಿ9ಗೆ ಮೂಲಗಳಿಂದ ಮಾಹಿತಿ ದೊರಕಿದೆ. ಸದ್ಯ ಶಿಲ್ಪಾನಾಗ್ ಇಂದು ಮತ್ತು ನಾಳೆ ಅಧಿಕೃತ ರಜೆಯಲ್ಲಿರುವ ಕಾರಣ ರಾಜೀನಾಮೆ ಬಗ್ಗೆ ಸೋಮವಾರ ನಿರ್ಧಾರವಾಗುವ ಸಾಧ್ಯತೆಯಿದೆ.

ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಸಮರ ಮುಂದುವರಿದಿದೆ. ರೋಹಿಣಿ ಸಿಂಧೂರಿ ಆರೋಪಕ್ಕೆ ಶಿಲ್ಪಾನಾಗ್ ತಿರುಗೇಟು ನೀಡಿದ್ದು, ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾನು ಕೆಲವು ಸಭೆಗಳಿಗೆ ಹೋಗಿದ್ದೇನೆ. ನನಗೆ ಬೇರೆ ಪಾಲಿಕೆ ಕೆಲಸವಿದ್ದಾಗ ನನ್ನ ಪರವಾಗಿ ಅಧಿಕಾರಿಯನ್ನು ಕಳುಹಿಸಿದ್ದೇನೆ. 9 ಕಡೆ ಕೊವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. 1,122 ಹಾಸಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲಾಡಳಿತದ ವಿರುದ್ಧ ಯಾವುದೇ ರೀತಿ ಹೇಳಿಕೆ ನೀಡಿಲ್ಲ ಎಂದು ಪತ್ರಿಕಾ ಪ್ರಕಟಣೆ ಮೂಲಕ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳು ಬಹಿರಂಗವಾಗಿ ಸುದ್ದಿಗೋಷ್ಠಿ ಮಾಡಿದ್ದು ತಪ್ಪು: ಸಚಿವ ಈಶ್ವರಪ್ಪ
ಐಎಎಸ್ ಅಧಿಕಾರಿಗಳ ಜಟಾಪಟಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಅಧಿಕಾರಿಗಳು ಬಹಿರಂಗವಾಗಿ ಸುದ್ದಿಗೋಷ್ಠಿ ಮಾಡಿದ್ದು ತಪ್ಪು. ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಒಳ್ಳೆಯ ಅಧಿಕಾರಿ. ಈ ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದರು ಕೆಲಸ ಮಾಡಿದ್ದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಪಕ್ಷಾತೀತವಾಗಿ ಅವರ ವಿರುದ್ಧ ಟೀಕೆ ಮಾಡುತ್ತಿದ್ದಾರೆ.

ಸಿಎಸ್ ರವಿಕುಮಾರ್ ನಿನ್ನೆ ಮೈಸೂರಿಗೆ ಭೇಟಿ ನೀಡಿದ್ದಾರೆ. ಘಟನೆಯ ಬಗ್ಗೆ ಸಿಎಸ್ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಮುಖ್ಯಮಂತ್ರಿಗೆ ಯಡಿಯೂರಪ್ಪಗೆ ಸಿಎಸ್ ವರದಿಯನ್ನು ನೀಡಲಿದ್ದಾರೆ. ಮುಖ್ಯಮಂತ್ರಿಗಳು ಸಮಸ್ಯೆ ಬಗೆಹರಿಸುತ್ತಾರೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ

ಮೈಸೂರು ಜಿಲ್ಲಾಧಿಕಾರಿ- ಮೇಯರ್ ಜಟಾಪಟಿ: ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ ಶಿಲ್ಪಾ ನಾಗ್

ಅತ್ತ ಸುತ್ತೂರು ಶ್ರೀಗಳ ಎದುರು ಶಿಲ್ಪಾನಾಗ್​ ಕಣ್ಣೀರು; ಇತ್ತ ಸಮರ್ಥನೆಗೆ ದಾಖಲೆ ಸಿದ್ಧಪಡಿಸುತ್ತಿರುವ ರೋಹಿಣಿ ಸಿಂಧೂರಿ

(CS Ravikumar received from Shilpa Nag Resignation and decision will be made on Monday)