Cyclone Tauktae in Karnataka: ತೌಕ್ತೆ ಚಂಡಮಾರುತದಿಂದ ರಾಜ್ಯಕ್ಕೆ ಆದ ಹಾನಿಯೆಷ್ಟು? ಇಲ್ಲಿದೆ ವಿವರ

|

Updated on: May 17, 2021 | 3:51 PM

ಸಂಜೆಯ ವೇಳೆಗೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

Cyclone Tauktae in Karnataka: ತೌಕ್ತೆ ಚಂಡಮಾರುತದಿಂದ ರಾಜ್ಯಕ್ಕೆ ಆದ ಹಾನಿಯೆಷ್ಟು? ಇಲ್ಲಿದೆ ವಿವರ
ಪ್ರಾತಿನಿಧಿಕ ಚಿತ್ರ
Follow us on

ಮಂಗಳೂರು: ತೌಕ್ತೆ ಚಂಡಮಾರುತದಿಂದ ರಾಜ್ಯದಲ್ಲಿ ಈವರೆಗೆ 6 ಜನ ಮೃತಪಟ್ಟಿದ್ದಾರೆ. 22 ತಾಲೂಕುಗಳಲ್ಲಿ 57 ಗುಡಿಸಲು, 333 ಮನೆಗಳಿಗೆ ಹಾನಿಯಾಗಿದೆ. 30 ಹೆಕ್ಟೇರ್​ ಕೃಷಿ ಬೆಳೆ, 2.87 ಹೆಕ್ಟೇರ್ ತೋಟಗಾರಿಕಾ ಬೆಳೆ, 57 ಕಿ.ಮೀ ರಸ್ತೆಗೆ ಹಾನಿ ಉಂಟಾಗಿದೆ. 644 ವಿದ್ಯುತ್ ಕಂಬ, 147 ಟ್ರಾನ್ಸ್​ಫಾರ್ಮಾರ್, 104 ಬೋಟ್​ಗಳಿಗೆ ತೌಕ್ತೆಯ ಅಬ್ಬರದಿಂದ ಹಾನಿಗೊಳಗಾಗಿವೆ ಎಂದು ರಾಜ್ಯ ಪ್ರಕೃತಿ ವಿಕೋಪ ವಿಪತ್ತು ನಿರ್ವಹಣಾ ಸಂಸ್ಥೆ ಸರ್ಕಾಕ್ಕೆ ವರದಿ ಸಲ್ಲಿಸಿದೆ.

ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ತೌಕ್ತೆ ಚಂಡಮಾರುತದಿಂದ ಉಂಟಾದ ಹಾನಿಯ ವರದಿ ಸಲ್ಲಿಸಿದ ರಾಜ್ಯ ಪ್ರಕೃತಿ ವಿಕೋಪ ವಿಪತ್ತು ನಿರ್ವಹಣಾ ಸಂಸ್ಥೆ, ಚಂಡಮಾರುತದಿಂದ ಹಾನಿಗೊಳಗಾದ 547 ಜನರನ್ನು ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. 13 ನೆರೆ ಪರಿಹಾರ ಕೇಂದ್ರಗಳಲ್ಲಿ 290 ಜನರಿಗೆ ಆಶ್ರಯ ಒದಗಿಸಲಾಗಿದೆ ಎಂದು ತಿಳಿಸಿದೆ.

ತೌಕ್ತೆ ಚಂಡಮಾರುತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾನಿ ಪರಿಶೀಲನೆಗೆ ಮಂಗಳೂರಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿದರು. ಜತೆಗೆ ಅವರು ಎನ್​ಎಂಪಿಟಿ ಕಚೇರಿಯಲ್ಲಿ ಸಮುದ್ರದಲ್ಲಿ ಸಿಕ್ಕಿಬಿದ್ದಿದ್ದ ರಕ್ಷಣೆಯಾದ ಕಾರ್ಮಿಕರ ಭೇಟಿಯಾಗಿ ಮಾಹಿತಿ ಸಂಗ್ರಹಿಸಿದರು. ಸಂಜೆಯ ವೇಳೆಗೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Miss Universe 2021 Winner: ಕೊವಿಡ್​ ಸಂಬಂಧಿತ ಪ್ರಶ್ನೆಗೆ ಉತ್ತರಿಸಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಆ್ಯಂಡ್ರಿಯಾ ಮೆಜಾ

Explainer: ತೌಕ್ತೆ ಚಂಡಮಾರುತ ಸೇರಿದಂತೆ ತೀವ್ರವಾದ ಚಂಡಮಾರುತಗಳು ಅರಬ್ಬೀ ಸಮುದ್ರದಲ್ಲೇ ರೂಪುಗೊಳ್ಳುವುದೇಕೆ?

(Cyclone Tauktae effects coastal Karnataka here is the full details)