AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer: ತೌಕ್ತೆ ಚಂಡಮಾರುತ ಸೇರಿದಂತೆ ತೀವ್ರವಾದ ಚಂಡಮಾರುತಗಳು ಅರಬ್ಬೀ ಸಮುದ್ರದಲ್ಲೇ ರೂಪುಗೊಳ್ಳುವುದೇಕೆ?

Cyclone Tauktae: ವರ್ಷಕ್ಕೊಮ್ಮೆ ಬಂಗಾಳಕೊಲ್ಲಿಯಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ಸರಾಸರಿ ಐದು ಚಂಡಮಾರುತಗಳು ಉಂಟಾಗುತ್ತವೆ. ಈ ಪೈಕಿ ನಾಲ್ಕು ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿದೆ. ಇದು ಅರಬ್ಬಿ ಸಮುದ್ರಕ್ಕಿಂತ ಬೆಚ್ಚಗಿರುತ್ತದೆ.

Explainer: ತೌಕ್ತೆ ಚಂಡಮಾರುತ ಸೇರಿದಂತೆ ತೀವ್ರವಾದ ಚಂಡಮಾರುತಗಳು ಅರಬ್ಬೀ ಸಮುದ್ರದಲ್ಲೇ ರೂಪುಗೊಳ್ಳುವುದೇಕೆ?
ಮುಂಬೈನಲ್ಲಿ ತೌಕ್ತೆ ಅಬ್ಬರ
Follow us
ರಶ್ಮಿ ಕಲ್ಲಕಟ್ಟ
|

Updated on: May 17, 2021 | 2:30 PM

ಅತ್ಯಂತ ತೀವ್ರವಾದ ಚಂಡಮಾರುತ (VSCS) ಎಂದು ವರ್ಗೀಕರಿಸಲ್ಪಟ್ಟ ಮತ್ತು ಅರೇಬಿಯನ್ ಸಮುದ್ರದಲ್ಲಿ ರೂಪುಗೊಂಡ Taukta (ತೌಕ್ತೆ ಎಂದು ಉಚ್ಚರಿಸಲಾಗುತ್ತದೆ) ಮಂಗಳವಾರ ದಕ್ಷಿಣ ಗುಜರಾತ್‌ಗೆ ಅಪ್ಪಳಿಸುವ ನಿರೀಕ್ಷೆಯಿದೆ. ಇತ್ತೀಚಿನ ವರ್ಷಗಳಲ್ಲಿ, ಅರೇಬಿಯನ್ ಸಮುದ್ರದಲ್ಲಿ ಮೊದಲಿಗಿಂತ ಹೆಚ್ಚಾಗಿ ಬಲವಾದ ಚಂಡಮಾರುತಗಳು ರೂಪುಗೊಳ್ಳುತ್ತಿವೆ.

ಮುನ್ಸೂಚನೆ ಏನು? ಭಾನುವಾರ ಸಂಜೆ 5.30 ರ ಮಾಹಿತಿ ಪ್ರಕಾರ ತೌಕ್ತೆ ಚಂಡಮಾರುತವು ಪಂಜಿಮ್‌ನಿಂದ ವಾಯುವ್ಯಕ್ಕೆ 190 ಕಿ.ಮೀ, ಮುಂಬೈಯಿಂದ ನೈಋತ್ಯಕ್ಕೆ 270 ಕಿ.ಮೀ, ವೆರಾವಾಲ್‌ನಿಂದ ಆಗ್ನೇಯಕ್ಕೆ 510 ಕಿ.ಮೀ, ದಿಯುಗೆ ಆಗ್ನೇಯಕ್ಕೆ 470 ಕಿ.ಮೀ ಮತ್ತು ಕರಾಚಿಯಿಂದ ಆಗ್ನೇಯಕ್ಕೆ 700 ಕಿ.ಮೀ ಚಲಿಸಲಿದೆ. ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳುವ ನಿರೀಕ್ಷೆಯಿದೆ.

ಇತ್ತೀಚಿನ ಸೈಕ್ಲೋನ್ ಟ್ರ್ಯಾಕ್ ಮುನ್ಸೂಚನೆಯ ಪ್ರಕಾರ, ಮಂಗಳವಾರ ಮುಂಜಾನೆ ತೌಕ್ತೆ ಗುಜರಾತ್‌ನ ಭಾವನಗರ ಜಿಲ್ಲೆಯ ಪೋರ್‌ಬಂದರ್ ಮತ್ತು ಮಾಹುವಾವನ್ನು ಅತ್ಯಂತ ತೀವ್ರವಾದ ಚಂಡಮಾರುತ ಆಗಿ ದಾಟಲಿದ್ದು, ಗಾಳಿಯ ವೇಗವು ಗಂಟೆಗೆ 150-160 ಕಿ.ಮೀ ನಿಂದ ಗಂಟೆಗೆ 175ಕಿಮೀಗೆ ಏರಲಿದೆ.

ಭಾರಿ ಮಳೆ ಮತ್ತು ಬಿರುಗಾಳಿಯು ಗುಜರಾತ್‌ನ ಕನಿಷ್ಠ 12 ಜಿಲ್ಲೆಗಳಾದ ಕಚ್, ಸೌರಾಷ್ಟ್ರ, ಪೋರ್‌ಬಂದರ್, ಜುನಾಗಡ್, ಭಾವನಗರ, ಅಹಮದಾಬಾದ್, ಸೂರತ್, ವಲ್ಸಾದ್, ಅಮ್ರೆಲಿ, ಆನಂದ್ ಮತ್ತು ಭರೂಚ್, ಮತ್ತು ಕೇಂದ್ರಾಡಳಿತ ಪ್ರದೇಶವಾದ ದಿಯು ಮೇಲೆ ಪರಿಣಾಮ ಬೀರಬಹುದು.

ತೌಕ್ತೆ ಚಂಡಮಾರುತ ಯಾಕೆ ಭಿನ್ನ? ಮಳೆಗಾಲದ ಪೂರ್ವದಲ್ಲಿ (ಏಪ್ರಿಲ್ ನಿಂದ ಜೂನ್) ಸತತವಾಗಿ ಅರಬ್ಬಿ  ಸಮುದ್ರದಲ್ಲಿ ರೂಪುಗೊಂಡ ನಾಲ್ಕನೇ ಚಂಡಮಾರುತವಾಗಿದೆ ತೌಕ್ತೆ . 2018 ರಿಂದ ಈ ಎಲ್ಲಾ ಚಂಡಮಾರುತಗಳನ್ನು ‘ತೀವ್ರ ಚಂಡಮಾರುತ’ ಅಥವಾ ಅದಕ್ಕಿಂತ ಹೆಚ್ಚಿನದಾಗಿ ವರ್ಗೀಕರಿಸಲಾಗಿದೆ. ಒಮ್ಮೆ ತೌಕ್ತೆ ಬೀಸಿದರೆ ಗುಜರಾತ್ ಅಥವಾ ಮಹಾರಾಷ್ಟ್ರ ಕರಾವಳಿಯನ್ನು ಅಪ್ಪಳಿಸುತ್ತವೆ. 2018ರಲ್ಲಿ ಮೆಕನು ಚಂಡಮಾರುತ ಒಮಾನ್​ಗೆ ಅಪ್ಪಳಿಸಿದ ನಂತರ, 2019 ರಲ್ಲಿ ವಾಯು ಚಂಡಮಾರುತವು ಗುಜರಾತ್ ಅನ್ನು ಅಪ್ಪಳಿಸಿತ್ತು . 2020 ರಲ್ಲಿ ನಿಸರ್ಗ ಚಂಡಮಾರುತವು ಮಹಾರಾಷ್ಟ್ರವನ್ನು ಅಪ್ಪಳಿಸಿತು.

ತೌಕ್ತೆ ಬಹಳ ವೇಗವಾಗಿ ತೀವ್ರಗೊಳ್ಳುತ್ತಿದೆ. ಮೇ 14 ರ ಬೆಳಿಗ್ಗೆ ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ರೂಪುಗೊಂಡ ಒತ್ತಡದಿಂದ ಇದು ಮೇ 16 ರ ಮುಂಜಾನೆ ಅತಿ ತೀವ್ರವಾಗಿ ಬಲಗೊಂಡಿತು. 2 ದಿನಗಳಲ್ಲಿ ತೌಕ್ತೆ ಅಬ್ಬರವನ್ನು ಹೋಲಿಸಿದರೆ, ವಾಯು ಚಂಡಮಾರುತವು ಅತಿ ತೀವ್ರ ಚಂಡಮಾರುತ ಆಗಲು 36 ಗಂಟೆಗಳನ್ನು ತೆಗೆದುಕೊಂಡಿತ್ತು. ಮೆಕನು ಚಂಡಮಾರುತ (4 ದಿನಗಳು) ಮತ್ತು ನಿಸರ್ಗಾ ಚಂಡಮಾರುತ 5 ದಿನಗಳನ್ನು ತೆಗೆದುಕೊಂಡಿತ್ತು.

ಅದಲ್ಲದೆ, 2020 ಮತ್ತು 2021 ರಲ್ಲಿ ರೂಪುಗೊಂಡ ಮೊದಲ ಚಂಡಮಾರುತಗಳು ಮಾನ್ಸೂನ್ ಪೂರ್ವದಲ್ಲಿ ಅರಬ್ಬಿ ಸಮುದ್ರದಲ್ಲಿದ್ದು, ಎರಡೂ ಅತಿ ತೀರ ಚಂಡಮಾರುತದ ಪಟ್ಟಿಯಲ್ಲಿದೆ.

ಈ ರೀತಿಯ ತ್ವರಿತ ತೀವ್ರತೆಗೆ ಕಾರಣವೇನು? ಯಾವುದೇ ಉಷ್ಣವಲಯದ ಚಂಡಮಾರುತವು ಜೀವಂತವಾಗಿರಲು ಶಕ್ತಿಯ ಅಗತ್ಯವಿರುತ್ತದೆ. ಈ ಶಕ್ತಿಯನ್ನು ಸಾಮಾನ್ಯವಾಗಿ ಉಷ್ಣವಲಯದ ಸಮುದ್ರದ ಮೇಲೆ ಬೆಚ್ಚಗಿನ ನೀರು ಮತ್ತು ಆರ್ದ್ರ ಗಾಳಿಯಿಂದ ಪಡೆಯಲಾಗುತ್ತದೆ. ಪ್ರಸ್ತುತ, 50 ಮೀಟರ್ ಆಳದವರೆಗಿನ ಸಮುದ್ರದ ನೀರು ತುಂಬಾ ಬೆಚ್ಚಗಿರುತ್ತದೆ, ಇದು ತೌಕ್ತ ಚಂಡಮಾರುತದ ತೀವ್ರತೆಯನ್ನು ಶಕ್ತಗೊಳಿಸಲು ಸಾಕಷ್ಟು ಶಕ್ತಿಯನ್ನು ಪೂರೈಸುತ್ತದೆ.

ನೀರಿನ ಆವಿಯ ಘನೀಕರಣದ ಮೂಲಕ ಹೆಚ್ಚು ಶಾಖ ಬಿಡುಗಡೆಯಾಗುತ್ತದೆ .ಕಡಿದಾದ ಒತ್ತಡದಲ್ಲಿ ಇಳಿಯುತ್ತದೆ. ಕಡಿಮೆ-ಒತ್ತಡದ ವ್ಯವಸ್ಥೆಯು ಚಂಡಮಾರುತಗಳನ್ನು ರೂಪಿಸಲು ತೀವ್ರತೆಯ ಹಲವು ಹಂತಗಳಿಗೆ ಒಳಗಾಗುತ್ತದೆ.

ವಿಶೇಷವಾಗಿ ಉತ್ತರ ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರ) ಉಷ್ಣವಲಯದ ಚಂಡಮಾರುತಗಳು ಮಾನ್ಸೂನ್ ಪೂರ್ವ ಮತ್ತು ಮಾನ್ಸೂನ್ ನಂತರದ (ಅಕ್ಟೋಬರ್ ನಿಂದ ಡಿಸೆಂಬರ್) ಅವಧಿಯಲ್ಲಿ ರೂಪುಗೊಳ್ಳುತ್ತದೆ. ಮೇ-ಜೂನ್ ಮತ್ತು ಅಕ್ಟೋಬರ್-ನವೆಂಬರ್ ಭಾರತದ ಕರಾವಳಿಯ ಮೇಲೆ ಪರಿಣಾಮ ಬೀರುವ ಅತಿ ತೀವ್ರತೆಯ ಚಂಡಮಾರುತಗಳು ಉಂಟಾಗುವ ಸಮಯವಾಗಿದೆ.

ಅರಬ್ಬಿ ಸಮುದ್ರವು ಚಂಡಮಾರುತ-ಸ್ನೇಹಿಯಾಗುತ್ತಿದೆಯೇ? ವರ್ಷಕ್ಕೊಮ್ಮೆ ಬಂಗಾಳಕೊಲ್ಲಿಯಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಸರಾಸರಿ ಐದು ಚಂಡಮಾರುತಗಳು ಉಂಟಾಗುತ್ತವೆ. ಈ ಪೈಕಿ ನಾಲ್ಕು ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿದೆ. ಇದು ಅರಬ್ಬಿ ಸಮುದ್ರಕ್ಕಿಂತ ಬೆಚ್ಚಗಿರುತ್ತದೆ. ಅರಬ್ಬಿ ಸಮುದ್ರದಲ್ಲಿ, ಚಂಡಮಾರುತಗಳು ಸಾಮಾನ್ಯವಾಗಿ ಲಕ್ಷದ್ವೀಪ ಪ್ರದೇಶದ ಮೇಲೆ ರೂಪುಗೊಳ್ಳುತ್ತವೆಮತ್ತು ಹೆಚ್ಚಾಗಿ ಪಶ್ಚಿಮ ದಿಕ್ಕಿಗೆ ಅಥವಾ ಭಾರತದ ಪಶ್ಚಿಮ ಕರಾವಳಿಯಿಂದ ದೂರ ಹೋಗುತ್ತವೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ, ಅರೇಬಿಯನ್ ಸಮುದ್ರವೂ ಸಹ ಬೆಚ್ಚಗಾಗುತ್ತಿದೆ ಎಂದು ಹವಾಮಾನಶಾಸ್ತ್ರಜ್ಞರು ಗಮನಿಸಿದ್ದಾರೆ. ಇದು ಜಾಗತಿಕ ತಾಪಮಾನ ಏರಿಕೆಗೆ ಸಂಬಂಧಿಸಿದ ಒಂದು ವಿದ್ಯಮಾನವಾಗಿದೆ.

ಇದನ್ನೂ ಓದಿ: Cyclone Tauktae in Karnataka: ರಾಜ್ಯದಲ್ಲಿ ತೌಕ್ತೆ ಚಂಡಮಾರುತದ ಅಬ್ಬರ; ನಾಳೆಯೂ ಮುಂದುವರಿಯಲಿದೆ ಮಳೆ