ಗ್ರೇಟರ್ಗೆ ಕ್ವಾರ್ಟರ್ ಎನ್ನುವ ವಿಪಕ್ಷ ನಾಯಕ ಅಶೋಕ ಬುದ್ಧಿವಂತರು ಅನ್ಕೊಂಡಿದ್ದೆ: ಲಕ್ಷ್ಮಿ ಹೆಬ್ಬಾಳ್ಕರ್
ಯಾವುದೇ ಸಾಧನೆ ಮಾಡದೆ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಶೆಟ್ಟರ್ ಸಾಹೇಬರು ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಮಂತ್ರಿಮಂಡಲದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದವರು, ಅವರೊಬ್ಬ ಅನುಭವಸ್ಥ ರಾಜಕಾರಣಿ, ಅವರ ಬಗ್ಗೆ ತಾನೇನು ಮಾತಾಡುವುದು ಸಾಧ್ಯ ಎಂದು ವ್ಯಂಗ್ಯವಾಗಿ ಹೇಳಿದರು.
ದಾವಣಗೆರೆ, ಮೇ 16: ವಿರೋಧ ಪಕ್ಷದ ನಾಯಕ ಆರ್ ಅಶೋಕ (Leader of Opposition R Ashoka) ಗ್ರೇಟರ್ ಬೆಂಗಳೂರನ್ನು ಕ್ವಾರ್ಟರ್ ಬೆಂಗಳೂರು ಅಂತ ಹೇಳಿದ್ದು ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಗ್ರೇಟರ್ ಎಂಬ ಪದವನ್ನು ಕ್ವಾರ್ಟರ್ ಅಂತ ಹೇಳುವ ಅಶೋಕಣ್ಣ ಅವರ ಬುದ್ಧಿಗೆ ಏನು ಹೇಳೋದು? ಅವರು ಬುದ್ಧಿವಂತರೆಂದು ಭಾವಿಸಿದ್ದೆ, ಅದರೆ ಕಾಮಾಲೆ ರೋಗದಿಂದ ಬಳಳುವವರಿಗೆ ಜಗವೆಲ್ಲ ಹಳದಿಯಾಗಿ ಕಾಣುತ್ತಂತೆ, ಅಶೋಕಣ್ಣನ ಮನಸ್ಥಿತಿಯೂ ಹಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ದೂರು ದಾಖಲಿಸಿದ್ದೇನೆ, ಅವರನ್ಯಾಕೆ ಬಂಧಿಸಿ ವಿಚಾರಣೆ ನಡೆಸಿಲ್ಲ? ಸಿಟಿ ರವಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

