ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ದೂರು ದಾಖಲಿಸಿದ್ದೇನೆ, ಅವರನ್ಯಾಕೆ ಬಂಧಿಸಿ ವಿಚಾರಣೆ ನಡೆಸಿಲ್ಲ? ಸಿಟಿ ರವಿ
ತನ್ನ ವಿರುದ್ಧ ದಾಖಲಾಗಿರುವ ಕೇಸನ್ನು ವ್ಯಕ್ತಿಗತವಾಗಿ ಎದುರಿಸುತ್ತೇನೆಂದು ಹೇಳಿದ ರವಿ ತನಿಖೆ ತಾನು ರೆಡಿ ಎಂದು ಹೇಳಿದರು. ಕೆಪಿಎಸ್ಸಿ ಪರೀಕ್ಷೆಯಲ್ಲಿ ನಡೆದಿರುವ ಸೋರಿಕೆ ಬಗ್ಗೆ ಮಾತಾಡಿದ ಅವರು, ಸರ್ಕಾರ ನಡೆಸುವ ಎಲ್ಲ ಪರೀಕ್ಷೆಗಳಲ್ಲಿ ಸೋರಿಕೆ, ಒಂದು ಪರೀಕ್ಷೆಯನ್ನೂ ನೆಟ್ಟಗೆ ನಡೆಸುವ ಯೋಗ್ಯತೆ ಇಲ್ಲದ ಇವರು ಪಹಲ್ಗಾಮ್ ಉಗ್ರರ ದಾಳಿ ಭದ್ರತಾ ಲೋಪ ಎಂದು ಹೇಳುತ್ತಾರೆ ಎಂದರು.
ಬೆಂಗಳೂರು, ಮೇ 6: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಮೇಲ್ಮನೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಅವಾಚ್ಯ ಪದ ಬಳಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರರಣವು ಕೇವಲ ತನ್ನ ವಿರುದ್ಧ ನಡೆಯುತ್ತಿರುವ ಕೇಸಲ್ಲ, ಅದು ಶಾಸಕಾಂಗ ವರ್ಸಸ್ ಕಾರ್ಯಾಂಗ, ಶಾಸಕಾಂಗ ವರ್ಸಸ್ ನ್ಯಾಯಾಂಗ ಎಂದು ಹೇಳಿದರು. ಸಚಿವೆ ಅವರ ವಿರುದ್ಧ ತಾನೊಂದು ದೂರು ಕೊಟ್ಟಿರುವೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನೂ ಬಂಧಿಸಿ ವಿಚಾರಣೆ ನಡೆಸಲಿ. ತನ್ನ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ನ್ಯಾಯಯುತವಾಗಿ, ಪ್ರಮಾಣಿವಾಗಿ ಮತ್ತು ಪಾರದರ್ಶಕವಾಗಿ ನಡೆದುಕೊಂಡಿಲ್ಲ ಎಂದು ಹೇಳಿದ ರವಿ ಸದನದೊಳಗೆ ನಡೆಯುವ ಘಟನೆಗಳನ್ನು ಸಭಾಪತಿ ಮತ್ತು ಸ್ಪೀಕರ್ ಮಾತ್ರ ನೋಡಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಸಿಎಂಗೆ ಕಪ್ಪು ಬಟ್ಟೆ ತೋರಿಸಿದವರು ಅರೆಸ್ಟ್: ಸಿಟಿ ರವಿ ರೀತಿ ಠಾಣೆಯಿಂದ ಠಾಣೆಗೆ ಅಲೆದಾಡಿಸುತ್ತಿರುವ ಪೊಲೀಸ್ರು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

