AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

45,946 ವೆಂಟಿಲೇಟರ್​​ಗಳನ್ನು ವಿತರಿಸಿದ ಕೇಂದ್ರ ಸರ್ಕಾರ; ಮಹಾರಾಷ್ಟ್ರಕ್ಕೆ ಅತ್ಯಂತ ಹೆಚ್ಚು ಪೂರೈಕೆ

ಸುಮಾರು 2000 ಕೋಟಿ ರೂಪಾಯಿ ವೆಚ್ಚದಲ್ಲಿ ಪಿಎಂ ಕೇರ್ಸ್​ ವೆಂಟಿಲೇಟರ್​​ಗಳನ್ನು ಖರೀದಿಸಿ, ಅಗತ್ಯ ಇರುವ ಕಡೆಗೆ ಹಂಚಿದೆ ಎಂದೂ ಬಿಜೆಪಿ ಮಾಹಿತಿ ನೀಡಿದೆ.

45,946 ವೆಂಟಿಲೇಟರ್​​ಗಳನ್ನು ವಿತರಿಸಿದ ಕೇಂದ್ರ ಸರ್ಕಾರ; ಮಹಾರಾಷ್ಟ್ರಕ್ಕೆ ಅತ್ಯಂತ ಹೆಚ್ಚು ಪೂರೈಕೆ
ವೆಂಟಿಲೇಟರ್​ ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: May 17, 2021 | 4:39 PM

Share

ದೆಹಲಿ: ಪಿಎಂ-ಕೇರ್ಸ್​​ ಫಂಡ್​ನಡಿ ದೇಶಾದ್ಯಂತ ಸುಮಾರು 45,946 ವೆಂಟಿಲೇಟರ್​​ಗಳನ್ನು ವಿತರಿಸಲಾಗಿದೆ. ಕೊವಿಡ್ 19 ಉಲ್ಬಣಗೊಂಡಿರುವ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವ ಅನಿವಾರ್ಯತೆಯೂ ಉಂಟಾಗಿದೆ. ಅದರ ಒಂದು ಭಾಗವಾಗಿ ದೇಶಾದ್ಯಂತ ಹಲವು ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಬಿಜೆಪಿ ಟ್ವೀಟ್​ ಮಾಡಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ಕೊವಿಡ್​ 19 ಎರಡನೇ ಅಲೆ ವಿರುದ್ಧ ಧೈರ್ಯದಿಂದ ಹೋರಾಡುತ್ತಿದೆ. ಇವೆಲ್​ ಭಾರತದಲ್ಲಿಯೇ ತಯಾರಾದ ವೆಂಟಿಲೇಟರ್​​ಗಳಾಗಿವೆ. ಸುಮಾರು 2000 ಕೋಟಿ ರೂಪಾಯಿ ವೆಚ್ಚದಲ್ಲಿ ಪಿಎಂ ಕೇರ್ಸ್​ ಇದನ್ನು ಖರೀದಿಸಿ, ಅಗತ್ಯ ಇರುವ ಕಡೆಗೆ ಹಂಚಿದೆ ಎಂದೂ ಬಿಜೆಪಿ ಮಾಹಿತಿ ನೀಡಿದೆ. ಒಟ್ಟು 45,946 ವೆಂಟಿಲೇಟರ್​ಗಳ ಪೈಕಿ ಅತ್ಯಂತ ಹೆಚ್ಚು ಅಂದರೆ 5555 ವೆಂಟಿಲೇಟರ್​ಗಳನ್ನು, ಕೊರೊನಾ ಸೋಂಕಿನ ತೀವ್ರತೆ ಅತ್ಯಂತ ಹೆಚ್ಚಾಗಿರುವ ಮಹಾರಾಷ್ಟ್ರಕ್ಕೆ ವಿತರಿಸಲಾಗಿದೆ. ಹಾಗೇ ರಾಷ್ಟ್ರ ರಾಜಧಾನಿ ದೆಹಲಿಗೆ ಅತ್ಯಂತ ಕಡಿಮೆ ಸಂಖ್ಯೆ ಅಂದರೆ ಕೇವಲ 763 ವೆಂಟಿಲೇಟರ್​ ನೀಡಿದ್ದಾಗಿ ಕೇಂದ್ರಸರ್ಕಾರ ಮಾಹಿತಿ ನೀಡಿದೆ.

ಇನ್ನುಳಿದಂತೆ ಪಂಜಾಬ್​ಗೆ 810, ಉತ್ತರಪ್ರದೇಶಕ್ಕೆ 5316, ಪಶ್ಚಿಮ ಬಂಗಾಳಕ್ಕೆ 1245, ತಮಿಳುನಾಡಿಗೆ 1450 ಮತ್ತು 3569 ವೆಂಟಿಲೇಟರ್​​ಗಳನ್ನು ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ ಕಳಿಸಲಾಗಿದೆ. ಹಾಗೇ, ಇನ್ನೂ ಜೂನ್​ ಅಂತ್ಯದೊಳಗೆ 14,000ವೆಂಟಿಲೇಟರ್​​ಗಳನ್ನು ವಿತರಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.

ಇದನ್ನೂ ಓದಿ:ಮಳೆಗಾಲ ಆರಂಭಕ್ಕೂ ಮುನ್ನ ಅಪಾಯಕಾರಿ ಸ್ಥಳಗಳ ಗುರುತಿಸುವ ಪ್ರಕ್ರಿಯೆ ನಡೆದಿದೆ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್

Oxygen Shortage: ಮುತ್ತನಲ್ಲೂರು ಕೆರೆಯಲ್ಲಿ ನೂರಾರು ಮೀನುಗಳ ಸಾವು, ಮಾಲಿನ್ಯವೇ ಇದಕ್ಕೆ ಕಾರಣವೆಂದ ಸ್ಥಳೀಯರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!