World Telecommunication Day: ವಿಶ್ವ ದೂರಸಂಪರ್ಕ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ತಿಳಿಯಿರಿ
ದೂರಸಂಪರ್ಕ ವ್ಯವಸ್ಥೆಯು ಒಗತ್ತನ್ನು ಒಗ್ಗೂಡಿಸಿದೆ. ಅದರಲ್ಲೂ ಇಂದು ಸ್ಮಾರ್ಟ್‌ಫೋನ್ ಮತ್ತು ಇಂಟರ್‌ನೆಟ್‌ನಂತಹ ತಂತ್ರಜ್ಞಾನಗಳ ಆಗಮನದಿಂದ ಜಗತ್ತು ಇನ್ನಷ್ಟು ಹತ್ತಿರವಾಗಿದೆ. ಈ ನಿಟ್ಟಿನಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಸಂವಹನ ತಂತ್ರಜ್ಞಾನಗಳ ನಿರ್ಣಾಯಕ ಪಾತ್ರ ಮತ್ತು ದೂರ ಸಂಪರ್ಕ ವ್ಯವಸ್ಥೆಗಳ ಬಗ್ಗೆ ಅರಿವನ್ನು ಮೂಡಿಸಲು ಪ್ರತಿವರ್ಷ ಮೇ 17 ರಂದು ವಿಶ್ವ ದೂರ ಸಂಪರ್ಕ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಹಿಂದೆಲ್ಲಾ ಜನ ದೂರದೂರಿನಲ್ಲಿರುವ ತಮ್ಮ ಸಂಬಂಧಿಕರು, ತಮ್ಮ ಮನೆಯವರೊಂದಿಗೆ ಕೇವಲ ಪತ್ರಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದರು. ಆದರೂ ಅದು ತಲುಪಲು ತಿಂಗಳಾನುಗಟ್ಟಲೆ ಹಿಡಿಯುತ್ತಿತ್ತು. ಆದರೆ ದೂರಸಂಪರ್ಕ ವ್ಯವಸ್ಥೆ ಬಂದ ನಂತರ ಜಗತ್ತು ತುಂಬಾನೇ ಹತ್ತಿರವಾಗಿದೆ ಅಂತಾನೇ ಹೇಳಬಹುದು. ಈ ವ್ಯವಸ್ಥೆಯ ಮೂಲಕ ಎಷ್ಟೇ ದೂರಲ್ಲಿದ್ದರೂ ನಮ್ಮವರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು. ಈ ದೂರಸಂಪರ್ಕ(Telecommunication) ವ್ಯವಸ್ಥೆ, ಮಾಹಿತಿ ತಂತ್ರಜ್ಞಾನಗಳು, ಇಂದಿನ ಇಂಟರ್‌ನೆಟ್, ಡಿಜಿಟಲ್ ಸಾಧನಗಳ ಬಗ್ಗೆ ಅರಿವು ಮೂಡಿಸಲು ಹಾಗೂ ನಮ್ಮ ದೈನಂದಿನ ಜೀವನವನ್ನು ರೂಪಿಸುವಲ್ಲಿ ಸಂವಹನ ತಂತ್ರಜ್ಞಾನಗಳ ನಿರ್ಣಾಯಕ ಪಾತ್ರಗಳ ಬಗ್ಗೆ ಹೇಳಲು ಪ್ರತಿವರ್ಷ ಮೇ 17 ರಂದು ವಿಶ್ವ ದೂರಸಂಪರ್ಕ (World Telecommunication Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ವಿಶ್ವ ದೂರಸಂಪರ್ಕ ದಿನದ ಇತಿಹಾಸ:
ಅಂತರಾಷ್ಟ್ರೀಯ ಟೆಲಿಗ್ರಾಫ್ ಒಕ್ಕೂಟ (ITU) ಸ್ಥಾಪನೆಯಾದ ಸ್ಮರಣಾರ್ಥವಾಗಿ 1969 ರ ಮೇ 17 ರಂದು ವಿಶ್ವ ದೂರಸಂಪರ್ಕ ದಿನದ ಆಚರಣೆಯನ್ನು ಸ್ಥಾಪಿಸಲಾಯಿತು. 1865 ರ ಮೇ 17 ರಂದು ಪ್ಯಾರಿಸ್‌ನಲ್ಲಿ ನಡೆದ ಸಮಾವೇಶದಲ್ಲಿ ಸಹಿ ಹಾಕುವ ಮೂಲಕ ಅಂತರಾಷ್ಟ್ರೀಯ ಟೆಲಿಗ್ರಾಫ್ ಒಕ್ಕೂಟವನ್ನು ರಚಿಸಲಾಯಿತು. ನಂತರ 1932 ರಲ್ಲಿ ಇದರ ಹೆಸರನ್ನು ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಎಂದು ಮರು ನಾಮಕರಣ ಮಾಡಲಾಯಿತು. ನಂತರ 1947 ರಲ್ಲಿ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಯಿತು.
ಇದರ ನಂತರ, 2005 ರಲ್ಲಿ , ವಿಶ್ವ ಶೃಂಗಸಭೆಯ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಪ್ರಸ್ತಾವನೆಯ ಮೇರೆಗೆ, ಮೇ 17 ಅನ್ನು ವಿಶ್ವ ಮಾಹಿತಿ ದಿನವೆಂದು ಘೋಷಿಸಲಾಯಿತು. 2006 ರ ನವೆಂಬರ್ ತಿಂಗಳಲ್ಲಿ ಟರ್ಕಿಯ ಅಂಟಲ್ಯದಲ್ಲಿ ನಡೆದ ITU ಪ್ಲೆನಿಪೊಟೆನ್ಷಿಯರಿ ಸಮ್ಮೇಳನದಲ್ಲಿ, ಮೇ 17 ಅನ್ನು ವಿಶ್ವ ದೂರಸಂಪರ್ಕ ದಿನ ಮತ್ತು ವಿಶ್ವ ಮಾಹಿತಿ ಸೊಸೈಟಿ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಈ 10 ಹುಲಿ ಮೀಸಲು ತಾಣಗಳಿವು, ಸಫಾರಿ, ಐಷಾರಾಮಿ ರೆಸಾರ್ಟ್‌ಗಳ ಮಾಹಿತಿ ಇಲ್ಲಿದೆ
ವಿಶ್ವ ದೂರಸಂಪರ್ಕ ದಿನದ ಮಹತ್ವ:
ಆರ್ಥಿಕತೆ, ಸಮಾಜ ಮತ್ತು ವೈಯಕ್ತಿಕ ಜೀವನವನ್ನು ರೂಪಿಸುವಲ್ಲಿ ಇಂಟರ್ನೆಟ್, ಮೊಬೈಲ್ ನೆಟ್‌ವರ್ಕ್ ಸೇರಿದಂತೆ ಇತದೆ ಡಿಜಿಟಲ್ ತಂತ್ರಜ್ಞಾನಗಳಂತಹ ಸಂವಹನ ಸಾಧನಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ವಿಶ್ವ ದೂರಸಂಪರ್ಕ ದಿನವನ್ನು ಆಚರಿಸುವ ಹಿಂದಿನ ಉದ್ದೇಶವೆಂದರೆ ದೂರಸಂಪರ್ಕದ ಬಗ್ಗೆ ಜನರಿಗೆ ಅರಿವು ಮೂಡಿಸುವುದು. ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಮತ್ತು ಇತರ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳನ್ನು ಬಳಸುವ ಸಾಧ್ಯತೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಇದರೊಂದಿಗೆ ಪರಸ್ಪರ ಸಂವಹನವನ್ನು ಕಾಪಾಡಿಕೊಳ್ಳಲು ತಂತ್ರಜ್ಞಾನದ ಬಳಕೆಗೆ ಇದು ಒತ್ತು ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








