ಪ್ರತಿ ವರ್ಷದಂತೆ ಕೇರಳದ ಕಡೆಯಿಂದ ನೈಋತ್ಯ ಮುಂಗಾರು ಮಳೆ ಜೂನ್ 1 ಮೊದಲ ವಾರದಲ್ಲಿ ಕರ್ನಾಟಕ ಪ್ರವೇಶಿಸಲಿದೆ ಎಂದು ಈ ಮುಂಚೆ ಅಂದಾಜಿಸಲಾಗಿತ್ತು. ಆದರೆ ಈ ಮಧ್ಯೆ ತೌತೆ ಮತ್ತು ತದನಂತರ ಯಾಸ್ ಚಂಡಮಾರುತಗಳ ದಾಳಿಯ ಪರಿಣಾಮ ನಾಲ್ಕು ದಿನ ಮುಂಚೆಯೇ, ಮೇ ತಿಂಗಳಾಂತ್ಯಕ್ಕೆ ಕರ್ನಾಟಕದಲ್ಲಿ ಮುಂಗಾರು ಪ್ರವೇಶ ಪಡೆಯಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ಈಗ ಹೇಳುತ್ತಿವೆ.
ಕೇರಳದಲ್ಲಿ ಜೂನ್ 1ಕ್ಕೆ ನೈಋತ್ಯ ಮುಂಗಾರು ಪ್ರವೇಶ ಪಡೆದರೆ ಜೂನ್ 3-4ರಂದು ಕರ್ನಾಟಕದಲ್ಲಿ ಮುಂಗಾರು ಮಳೆ ಸುರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (Karnataka State Natural Disaster Monitoring Centre -KSNDMC) ಹೇಳಿದೆ. ಇದೀಗ ಯಾಸ್ ಚಂಡ ಮಾರುತದಿಂದಾಗಿ ಮೇ 31ಕ್ಕೆ ಕರ್ನಾಟಕದಲ್ಲಿ ಮುಂಗಾರು ಮಳೆಯಾಗಲಿದೆ ಎನ್ನಲಾಗಿದೆ.
KSNDMC ಕೇಂದ್ರದ ಕಿರಿಯ ವಿಜ್ಞಾನಿ ಎಸ್ ಎಸ್ ಎಂ ಗವಾಸ್ಕರ್ ಅವರು ವಿಶ್ಲೇಷಿಸುವಂತೆ ಮುಂಗಾರು ಪ್ರವೇಶಿಸಿದ ಬಳಿಕವಷ್ಟೇ ಅದರ ಮೊದಲ ಹೊಡೆತ ನೋಡಿಕೊಂಡು ಮುಂದೆ ರಾಜ್ಯದಲ್ಲಿ ಮುಂಗಾರು ಯಾವ ಪ್ರಮಾಣದಲ್ಲಿ ಮಳೆ ಸುರಿಸಲಿದೆ ಎಂದು ಲೆಕ್ಕಾಚಾರ ಹಾಕಬಹುದು. ಅಲ್ಲಿಯವರೆಗೂ ನಿಖರವಾಗಿ ಏನೂ ಹೇಳಲಾಗದು. ಸಾಮಾನ್ಯವಾಗಿ ನೈಋತ್ಯ ಮುಂಗಾರು ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೂ ಮಳೆ ಸುರಿಸಲಿದೆ. ವಾಡಿಕೆಯಷ್ಟು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಈ ಬಾರಿ ಮುಂಗಾರು ಮಳೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಸಾಮಾನ್ಯವಾಗಿ ಮುಂಗಾರು ಕಾಲದಲ್ಲಿ ಗುಡುಗು, ಸಿಡಿಲಿನ ಆರ್ಭಟದ ಮಳೆಯಿರುವುದಿಲ್ಲ. ಆದರೆ ಈಗ ತೌತೆ ಮತ್ತು ತದನಂತರ ಯಾಸ್ ಚಂಡಮಾರುತಗಳ ಹಾವಳಿಯಿಂದ ಅಬ್ಬರದ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ (Director of Indian Meteorological Department) ತಿಳಿಸಿದ್ದಾರೆ.
(Cyclone Yaas may effect Southwest monsoon in Karnataka by may 31 four days earlier says Karnataka State Natural Disaster Monitoring Centre)
Cyclone Yaas: ಯಸ್ ಬಂದೇ ಬಿಡ್ತು ಯಾಸ್ ಚಂಡಮಾರುತ! ಏನಿದರ ಏರಿಳಿತಗಳು? ಯಾವಾಗ ಎಲ್ಲಿ ಸೈಕ್ಲೋನ್ ಮಳೆ ಸುರಿಯಲಿದೆ?
Published On - 10:45 am, Mon, 24 May 21