AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾಗೆ ಬಲಿಯಾದ ಯಾದಗಿರಿ ವ್ಯಕ್ತಿ; ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ

ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ವ್ಯಕ್ತಿಯೊರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ನಾಲ್ಕೈದು ಜನ ಮಾತ್ರ ಸೇರಬೇಕಿತ್ತು. ಆದರೆ ಗ್ರಾಮದ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಜನ ಭಾಗಿಯಾಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

sandhya thejappa
|

Updated on: May 24, 2021 | 10:03 AM

Share

ಯಾದಗಿರಿ: ಕೊರೊನಾ.. ಕೊರೊನಾ.. ಕೊರೊನಾ.. ರಾಜ್ಯದ ಮೂಲೆ ಮೂಲೆಗಳಲ್ಲೂ ಕೊರೊನಾದ್ದೆ ಹಾವಳಿ. ಅದರದ್ದೆ ಸುದ್ದಿ. ಈ ಮಹಾಮಾರಿಯನ್ನು ನಿಯಂತ್ರಿಸಲು ಸರ್ಕಾರ ಒಂದಲ್ಲ ಒಂದು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ರಾಜ್ಯದಲ್ಲಿ ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿ ಅವುಗಳನ್ನು ಪಾಲಿಸಬೇಕೆಂದು ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಕೊರೊನಾ ನಿಯಂತ್ರಿಸಲು ಕಠಿಣ ನಿಯಮಗಳ ಪಾಲನೆ ಅನಿವಾರ್ಯವೂ ಆಗಿದೆ. ಆದರೆ ಜನರು ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಅಂತ್ಯಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶ ನೀಡಿದ್ದರೂ, ನೂರಾರು ಜನ ಸೇರಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ವ್ಯಕ್ತಿಯೊರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ನಾಲ್ಕೈದು ಜನ ಮಾತ್ರ ಸೇರಬೇಕಿತ್ತು. ಆದರೆ ಗ್ರಾಮದ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಜನ ಭಾಗಿಯಾಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈಗಾಗಲೇ ಹತ್ತಿಕುಣಿ ಗ್ರಾಮ ಡೇಂಜರ್ ಜೋನ್​ನಲ್ಲಿದೆ. ಹೀಗಿದ್ದರೂ ಗ್ರಾಮಸ್ಥರಿಂದ ಕೊವಿಡ್ ನಿಯಮ ಉಲ್ಲಂಘನೆಯಾಗಿದೆ.

ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಕೆಲ ಮಹಿಳೆಯರು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಕೊನೆ ಬಾರಿ ಮೃತ ಸೋಂಕಿತ ವ್ಯಕ್ತಿಯ ಮುಖ ನೋಡಲು ಬಂದಿದ್ದ ಜನ ಪಿಪಿಇ ಕಿಟ್ ಧರಿಸಿರಲಿಲ್ಲ. ಕೇವಲ ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರ ಪಿಪಿಇ ಕಿಟ್ ಧರಿಸಿದ್ದರು.

ಇಂದಿನಿಂದ ಲಾಕ್​ಡೌನ್​ ಯಾದಗಿರಿ ಜಿಲ್ಲೆಯಾದ್ಯಂತ ಇಂದಿನಿಂದ ಮೂರು ದಿನ ಲಾಕ್​ಡೌನ್​ ಜಾರಿಯಾದ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಯಾದಗಿರಿ ನಗರದಲ್ಲಿ ತರಕಾರಿ ಮಾರುಕಟ್ಟೆ ಸಂಪೂರ್ಣ ಖಾಲಿ ಖಾಲಿಯಾಗಿದೆ. ನಿನ್ನೆ ಸಾವಿರಾರು ಜನರಿಂದ ಕೂಡಿದ್ದ ಮಾರುಕಟ್ಟೆ ಇವತ್ತು ಖಾಲಿಯಾಗಿದೆ. ಮನೆಯಿಂದ ಹೊರ ಬಂದ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಅನಗತ್ಯವಾಗಿ ಹೊರ ಬಂದ ವಾಹನಗಳನ್ನು ಪೊಲೀಸರು ಸೀಜ್ ಕೂಡಾ ಮಾಡುತ್ತಿದ್ದಾರೆ.

ಇದನ್ನೂ ಓದಿ

ಬಳ್ಳಾರಿ: ನಾರ್ಮಲ್ ಡೆಲಿವರಿ ಸಾಧ್ಯವಿದ್ದರೂ ದುಡ್ಡಿನ ಬೇಡಿಕೆಯಿಟ್ಟು ಸಿಜೇರಿಯನ್ ಮಾಡುತ್ತಾರೆ; ಸರ್ಕಾರಿ ಆಸ್ಪತ್ರೆ ಹೆರಿಗೆ ತಜ್ಞ ವಿರುದ್ಧ ಗಂಭೀರ ಆರೋಪ

ಭಿಕ್ಷುಕರಿಗೆ ಕೊವಿಡ್​ ಕೇರ್​ ಸೆಂಟರ್; ಕೊರೊನಾ ಕಾಲದಲ್ಲಿ ಮಾನವೀಯತೆ ಮೆರೆದ ಉಡುಪಿಯ ಅನ್ಸಾರ್ ಅಹಮದ್

(Hundreds of people were involved in funeral of man who died of corona infection at yadgir)