ಬಳ್ಳಾರಿ: ನಾರ್ಮಲ್ ಡೆಲಿವರಿ ಸಾಧ್ಯವಿದ್ದರೂ ದುಡ್ಡಿನ ಬೇಡಿಕೆಯಿಟ್ಟು ಸಿಜೇರಿಯನ್ ಮಾಡುತ್ತಾರೆ; ಸರ್ಕಾರಿ ಆಸ್ಪತ್ರೆ ಹೆರಿಗೆ ತಜ್ಞ ವಿರುದ್ಧ ಗಂಭೀರ ಆರೋಪ
ಹೊಸಪೇಟೆ, ಕೊಪ್ಪಳ ಆಸ್ಪತ್ರೆಗೆ ಹೋದರೆ ನಿಮ್ಮ ಆಸ್ಪತ್ರೆ ಸತ್ತು ಹೋಗಿದ್ಯಾ ಎಂದು ಕೇಳುತ್ತಾರೆ. ಕಾಟಾಚಾರಕ್ಕೆ ಕೇವಲ 2-3 ಮಾತ್ರೆಗಳನ್ನು ಮಾತ್ರ ನೀಡುತ್ತಾರೆ. ಕೊರೊನಾ ಸಂಕಷ್ಟವಿದ್ದರೂ ಹಣಕ್ಕಾಗಿ ವೈದ್ಯ ಪೀಡಿಸುತ್ತಾರೆ.
ಬಳ್ಳಾರಿ: ನಾರ್ಮಲ್ ಡೆಲಿವರಿ ಸಾಧ್ಯವಿದ್ದರೂ ಸಿಜೇರಿಯನ್ ಮಾಡುತ್ತಾರೆ ಎಂದು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಆಸ್ಪತ್ರೆಯ ಹೆರಿಗೆ ತಜ್ಞ ಡಾ.ರಾಜೇಶ್ ನಾಯ್ಕ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ರೈತ ಹೋರಾಟಗಾರ್ತಿ ಸಂಶದ್ ಬೇಗಂ ಗಂಭೀರ ಆರೋಪ ಮಾಡುತ್ತಿದ್ದಾರೆ. ಸಿಜೇರಿಯನ್ ಮಾಡುವುದಕ್ಕೆ 10ರಿಂದ 20ಸಾವಿರಕ್ಕೆ ಬೇಡಿಕೆ ಇಡುತ್ತಾರೆ. ಹಣ ನೀಡದಿದ್ದರೆ ಬೇರೆ ಕಡೆ ಹೋಗುವುದಕ್ಕೂ ಸೂಚಿಸುತ್ತಾರೆ. ಹೊಸಪೇಟೆ, ಕೊಪ್ಪಳ ಆಸ್ಪತ್ರೆಗೆ ಹೋಗಲು ರೆಫರ್ ಮಾಡುತ್ತಾರೆ ಅಂತಾ ಹೆರಿಗೆ ತಜ್ಞ ವಿರುದ್ಧ ಆರೋಪಿಸುತ್ತಿದ್ದಾರೆ.
ಹೊಸಪೇಟೆ, ಕೊಪ್ಪಳ ಆಸ್ಪತ್ರೆಗೆ ಹೋದರೆ ನಿಮ್ಮ ಆಸ್ಪತ್ರೆ ಸತ್ತು ಹೋಗಿದ್ಯಾ ಎಂದು ಕೇಳುತ್ತಾರೆ. ಕಾಟಾಚಾರಕ್ಕೆ ಕೇವಲ 2-3 ಮಾತ್ರೆಗಳನ್ನು ಮಾತ್ರ ನೀಡುತ್ತಾರೆ. ಕೊರೊನಾ ಸಂಕಷ್ಟವಿದ್ದರೂ ಹಣಕ್ಕಾಗಿ ವೈದ್ಯ ಪೀಡಿಸುತ್ತಾರೆ. ಡಾ.ರಾಜೇಶ್ ನಾಯ್ಕ್ ಪ್ರತಿನಿತ್ಯ 2-3 ಲಕ್ಷ ರೂ. ಪೀಕುತ್ತಾರೆ. ಹೆರಿಗಾಗಿ ಆಸ್ಪತ್ರೆಗೆ ಬಂದವರಿಗೆ ಹಣಕ್ಕಾಗಿ ಪೀಡಿಸುತ್ತಾರೆ ಎಂದು ರೈತ ಹೋರಾಟಗಾರ್ತಿ ಮತ್ತು ಹಗರಿಬೊಮ್ಮನಹಳ್ಳಿ ನಿವಾಸಿ ಸಂಶದ್ ಬೇಗಂ ಹೇಳುತ್ತಿದ್ದಾರೆ.
ಈ ಬಗ್ಗೆ ತಾಲೂಕು ಆಡಳಿತಾಧಿಕಾರಿ ಮತ್ತು ಟಿಎಚ್ಓಗೂ ದೂರು ನೀಡಿದ್ದೀವಿ. ಹಗರಿಬೊಮ್ಮನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹತ್ತು ಮಾತ್ರೆಗಳನ್ನು ಬರೆದು ಕೊಟ್ಟರೆ. ಆಸ್ಪತ್ರೆ ಸಿಬ್ಬಂದಿಗಳು ಎರಡ್ಮೂರು ಮಾತ್ರೆಗಳನ್ನು ಮಾತ್ರ ಕೊಡುತ್ತಾರೆ. ಪ್ರತಿದಿನ ರಾಜೇಶ್ ನಾಯ್ಕ್ ಎರಡ್ಮೂರು ಲಕ್ಷ ಹಣ ತೆಗೆದುಕೊಂಡು ಹೋಗುತ್ತಾರೆ. ಈ ಬಗ್ಗೆ ಆರೋಗ್ಯ ಸಚಿವರಲ್ಲಿ ಮನವಿ ಮಾಡುತ್ತೀವಿ. ಡಾ.ರಾಜೇಶ್ ನಾಯ್ಕ್ ವಿರುದ್ಧ ಸೂಕ್ತ ಕ್ರಮವಹಿಸಬೇಕು. ಸರ್ಕಾರಿ ಆಸ್ಪತ್ರೆ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ ಅಂತ ಬಂದರೆ ಇಲ್ಲಿ ಬಡವರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಸಂಶದ್ ಬೇಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಅಕ್ಕನ ಮಗಳನ್ನು ಅಡ್ಮಿಟ್ ಮಾಡಿದ್ದೆವು. ಎಂಟು ಸಾವಿರ ರುಪಾಯಿ ಕೇಳಿದ್ದರು. ನಾವು ಬಡವರು ಆಗಲ್ಲ ಅಂದರೆ ಎಂಟು ಸಾವಿರ ಕೊಟ್ಟರೆ ಮಾತ್ರ ಇಲ್ಲಿರಿ. ಇಲ್ಲ ಎಂದರೆ ಬೇರೆ ಕಡೆ ಹೋಗಿ ಅಂದರು. ಕೊವಿಡ್ ಸಂದರ್ಭದಲ್ಲಿ ಜನರ ಬಳಿ ಹಣ ಪಡೆಯುತ್ತಿದ್ದಾರೆ. ಮಕ್ಕಳು ಸತ್ತು ಹೋಗುತ್ತಾರೆ ಅಂತ ಭಯಕ್ಕೆ ಜನ ಹಣ ಕೊಡುತ್ತಿದ್ದಾರೆ ಎಂದು ಹೇಳಿದ ಸಂಶದ್ ಬೇಗಂ ಸಾಕಷ್ಟು ಬಾರಿ ರಾಜೇಶ್ ನಾಯ್ಕ್ ಅಕ್ರಮದ ಬಗ್ಗೆ ದೂರು ಕೊಟ್ಟಿದ್ದೀವಿ ಎಂದು ತಿಳಿಸಿದರು.
ತಾಳಿ ಮಾರಿದ ಉದಾಹರಣೆ ಇದೆ ಕೊವಿಡ್ ಸಂದರ್ಭದಲ್ಲಿ ಜನರಿಗೆ ತಿನ್ನಲು ಹಣವಿಲ್ಲ. ತಾಳಿ ಮಾರಿ ಹಣ ಕೊಟ್ಟಿರುವ ಉದಾಹರಣೆ ಇದೆ. ನಮ್ಮ ಅಳಿಯ ತನ್ನ ಹೆಂಡತಿಯನ್ನು ಹೆರಿಗೆಗೆ ಕರೆದುಕೊಂಡು ಬಂದರೆ ಅವನ ಬಳಿ ಎಂಟು ಸಾವಿರ ರುಪಾಯಿ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಹದಿನೈದು ಸಾವಿರ ಬೇಡಿಕೆ ಇಟ್ಟಿದ್ದಾರೆ. ಹುಡುಗಿ ಕುಳ್ಳಗೆ ಇದ್ದಾಳೆ ನಾರ್ಮಲ್ ಹೆರಿಗೆ ಆಗುವುದಿಲ್ಲ. ಸಿಜೇರಿಯನ್ ಮಾಡಬೇಕು ಅಂತ ಹೇಳಿ ಒಂಬತ್ತು ಸಾವಿರ ಪಡೆದುಕೊಂಡಿದ್ದಾರೆ.
ನಾರ್ಮಲ್ ಡಿಲಿವರಿ ಮಾಡೋದೆ ಇಲ್ಲ. ನಾರ್ಮಲ್ ಮಾಡಿದರೆ ಹಣ ಸಿಗೋದಿಲ್ಲ ಅಂತ ಸಿಜೇರಿಯನ್ ಮಾಡಿ ಹಣ ಪಡೆಯುತ್ತಾರೆ. ರಾತ್ರಿ ಸಮಯದಲ್ಲಿ ಹಗರಿಬೊಮ್ಮನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿರೋದಿಲ್ಲ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಉಪಾಧ್ಯಕ್ಷ ಮಾರುತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯನಗರ ಮೂಲದ ಯೋಧ ಸಾವು
ಹಲಸಿನ ಬೀಜದ ಉಪಯೋಗ ತಿಳಿದರೆ ಒಂದು ಬೀಜವನ್ನೂ ಹಾಳು ಮಾಡಲಾರಿರಿ; ಇಲ್ಲಿದೆ ವಿವರ
(Farmer fighter Samshad Begum is Accusing the bellary Government Hospital Maternity Specialist)
Published On - 8:58 am, Mon, 24 May 21