ರಾಜ್ಯದಲ್ಲಿ ಮತ್ತೆ ಆಕ್ಸಿಜನ್ ಸಮಸ್ಯೆ, 2 ದಿನ ಆಕ್ಸಿಜನ್ ಉತ್ಪಾದನೆಯಾಗಲ್ಲ ಎಂದು ಸಂದೇಶ ರವಾನೆ
ಮಹಾಮಾರಿ ಕೊರೊನಾದಿಂದ ಆಕ್ಸಿಜನ್ ಇಲ್ಲದೆ ಜನ ಸಾಯುತ್ತಿದ್ದಾರೆ ಈ ನಡುವೆ ಈಗ ಮತ್ತೊಂದು ಆಘಾತ ಎದುರಾಗಿದೆ. ರಾಜ್ಯದ 2 ಕಂಪನಿಗಳಲ್ಲಿ 2 ದಿನ ಆಕ್ಸಿಜನ್ ಉತ್ಪಾದನೆಯಾಗಲ್ಲ ಈ ಬಗ್ಗೆ ಹೆಚ್ಚುವರಿ ಔಷಧ ನಿಯಂತ್ರಕ ಅಮರೇಶ್ ತುಂಬಗಿ ಎಲ್ಲಾ ಜಿಲ್ಲೆಗಳ ಉಪ ಔಷಧ ನಿಯಂತ್ರಕರಿಗೆ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಮತ್ತು ಕೊರನಾ ಸೋಂಕಿತರ ಚಿಕಿತ್ಸೆಗಾಗಿ ಎಲ್ಲ ವೈದ್ಯಕೀಯ ಪರಿಕರಗಳೂ/ ಸೇವೆಗಳೂ ಅಗತ್ಯ ಪ್ರಮಾಣದಲ್ಲಿ ಲಭ್ಯವಿದೆ. ಆತಂಕಕ್ಕೆ ಅವಕಾಶವಿಲ್ಲ ಎಂದು ನಿನ್ನೆಯಷ್ಟೇ ಡಾ ಸುಧಾಕರ್ ಹೇಳಿದ್ದರು ಆದರೆ ಈಗ ಎರಡು ದಿನ ಮತ್ತೆ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಲಿದೆ. ರಾಜ್ಯದಲ್ಲಿ ಇಂದು ಮತ್ತು ನಾಳೆ ಶೇಕಡಾ 20ರಷ್ಟು ಆಕ್ಸಿಜನ್ ಕೊರತೆ ಉಂಟಾಗಲಿದೆ. ಏಕೆಂದರೆ ರಾಜ್ಯದ 2 ಕಂಪನಿಗಳಲ್ಲಿ 2 ದಿನ ಆಕ್ಸಿಜನ್ ಉತ್ಪಾದನೆಯಾಗಲ್ಲ. ಹೀಗಾಗಿ ಇಂದು, ನಾಳೆ ಆಕ್ಸಿಜನ್ ಕೊರತೆ ಬಗ್ಗೆ ಹೆಚ್ಚುವರಿ ಔಷಧ ನಿಯಂತ್ರಕ ಅಮರೇಶ್ ತುಂಬಗಿ ಸಂದೇಶ ರವಾನಿಸಿದ್ದಾರೆ.
ಮಹಾಮಾರಿ ಕೊರೊನಾದಿಂದ ಆಕ್ಸಿಜನ್ ಇಲ್ಲದೆ ಜನ ಸಾಯುತ್ತಿದ್ದಾರೆ ಈ ನಡುವೆ ಈಗ ಮತ್ತೊಂದು ಆಘಾತ ಎದುರಾಗಿದೆ. ರಾಜ್ಯದ 2 ಕಂಪನಿಗಳಲ್ಲಿ 2 ದಿನ ಆಕ್ಸಿಜನ್ ಉತ್ಪಾದನೆಯಾಗಲ್ಲ ಈ ಬಗ್ಗೆ ಹೆಚ್ಚುವರಿ ಔಷಧ ನಿಯಂತ್ರಕ ಅಮರೇಶ್ ತುಂಬಗಿ ಎಲ್ಲಾ ಜಿಲ್ಲೆಗಳ ಉಪ ಔಷಧ ನಿಯಂತ್ರಕರಿಗೆ ಸಂದೇಶ ರವಾನಿಸಿದ್ದಾರೆ. ಆಮ್ಲಜನಕ ಪೂರೈಕೆ ನೋಡಲ್ ಅಧಿಕಾರಿ ಮನೀಶ್ ಮೌದ್ಗಿಲ್ ಎಲ್ಲ ಡಿಸಿಗಳಿಗೆ ಸಂದೇಶ ರವಾನಿಸಿದ್ದಾರೆ.
ಪ್ರಾಕ್ಸೈರ್ ಇಂಡಿಯಾ, ಏರ್ ವಾಟರ್ ಇಂಡಿಯಾ ಎಂಬ 2 ಕಂಪನಿಗಳಲ್ಲಿ 2 ದಿನ ಆಕ್ಸಿಜನ್ ಉತ್ಪಾದನೆಯಲ್ಲಿ ಸಮಸ್ಯೆ ಎದುರಾಗಿದೆ. ಇದರ ನಡುವೆ ದ್ರವೀಕೃತ ಆಮ್ಲಜನಕ ಉತ್ಪಾದನೆ ಯಲ್ಲೂ ಸಮಸ್ಯೆ ಇದೆ. ಹೀಗಾಗಿ ಎರಡು ದಿನ ರಾಜ್ಯಕ್ಕೆ ಶೇ 20ರಷ್ಟು ಆಮ್ಲಜನಕ ಪೂರೈಕೆ ಕೊರತೆ ಉಂಟಾಗಲಿದೆ.
ಜಿಂದಾಲ್ನ 1 ಆಕ್ಸಿಜನ್ ಪ್ಲಾಂಟ್ನಲ್ಲಿ ತಾಂತ್ರಿಕ ದೋಷ ಇನ್ನು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಬಳಿ ಇರುವ ಜಿಂದಾಲ್ ಕಂಪನಿಯಲ್ಲಿ ತಾಂತ್ರಿಕ ದೋಷದಿಂದಾಗಿ ಆಕ್ಸಿಜನ್ ಉತ್ಪಾದನೆ ಸ್ಥಗಿತಗೊಂಡಿದೆ. 4 ಆಕ್ಸಿಜನ್ ಪ್ಲಾಂಟ್ ಪೈಕಿ ಹೇರ್ ವಾಟರ್ ಪ್ಲಾಂಟ್ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು ಉಳಿದ ಮೂರು ಪ್ಲಾಂಟ್ಗಳಲ್ಲಿ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ.
ದೋಷ ಕಂಡು ಬಂದ ಆಕ್ಸಿಜನ್ ಪ್ಲಾಂಟ್ ದುರಸ್ತಿ ಕಾರ್ಯ ಶುರು ಮಾಡಲಾಗಿದೆ. ಪ್ಲಾಂಟ್ನಲ್ಲಿ ನಿತ್ಯ 90 ಟನ್ ಆಕ್ಸಿಜನ್ ಉತ್ಪಾದಿಸಲಾಗುತ್ತಿತ್ತು. ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿತ್ತು.
ಇದನ್ನೂ ಓದಿ: ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆಯಾಗಿದೆ: ಸಚಿವ ಡಾ.ಸುಧಾಕರ್