ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯನಗರ ಮೂಲದ ಯೋಧ ಸಾವು

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಯೋಧ ಚಿಕಿತ್ಸೆಗಾಗಿ ದಾವಣಗೆರೆ ಎಸ್ ಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಯೋಧ ಕೊನೆಯುಸಿರೆಳೆದಿದ್ದಾರೆ. ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಹೋದರರನ್ನು ವಸಂತ ಅಗಲಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯನಗರ ಮೂಲದ ಯೋಧ ಸಾವು
ಯೋಧ ವಸಂತ
Follow us
|

Updated on: May 24, 2021 | 8:27 AM

ದಾವಣಗೆರೆ: ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. 39 ವರ್ಷದ ಬಂಡೇರ್ ವಸಂತ್ ಸಾವನ್ನಪ್ಪಿದ ಯೋಧ. ಬಂಡೇರ್ ವಸಂತ್ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಸವನಹಳ್ಳಿ ಗ್ರಾಮದ ನಿವಾಸಿ. ಗಡಿ ಭದ್ರತಾ ಪಡೆಯಲ್ಲಿ ಸೇವೆಯಲ್ಲಿದ್ದ ವಸಂತ ರಜೆ ಪಡೆದು ಗ್ರಾಮಕ್ಕೆ ಬಂದಿದ್ದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಯೋಧ ಚಿಕಿತ್ಸೆಗಾಗಿ ದಾವಣಗೆರೆ ಎಸ್ ಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಯೋಧ ಕೊನೆಯುಸಿರೆಳೆದಿದ್ದಾರೆ. ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಹೋದರರನ್ನು ವಸಂತ ಅಗಲಿದ್ದಾರೆ. ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಅಗಲಿದ ಯೋಧನಿಗೆ ಪೊಲೀಸರು ಗೌರವ ವಂದನೆ ಸಲ್ಲಿಸಿದ್ದಾರೆ. ಕೊರೊನಾಗೆ 6 ತಿಂಗಳ ಗರ್ಭಿಣಿ ಬಲಿ ಮಂಡ್ಯ: ಹೆಣ್ಣು ಗರ್ಭಿಣಿಯಾಗುತ್ತಿದ್ದಂತೆ ಆಕೆ ಕನಸಿನ ಮೂಟೆಯನ್ನೆ ಹೊತ್ತು ಸಾಗುತ್ತಾಳೆ. 9 ತಿಂಗಳು ತುಂಬಿ ಯಾವಾಗಾ ಮಗುವಿಗೆ ಜನ್ಮ ನೀಡುತ್ತಾಳೆ ಎಂದು ಹಾತೊರೆಯುತ್ತಿರುತ್ತಾಳೆ. ಗರ್ಭದಲ್ಲಿ ಇರುವ ಮಗುವಿನ ಭವಿಷ್ಯದತ್ತ ಪ್ರತಿ ದಿನ ಯೋಚಿಸುತ್ತಿರುತ್ತಾಳೆ. ಹೀಗೆ ನೂರಾರು ಕನಸನ್ನು ಕಂಡ ಗರ್ಭಿಣಿಯನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ.

ಕೊರೊನಾ ಸೋಂಕು 6 ತಿಂಗಳ ಗರ್ಭಿಣಿಯನ್ನು ಬಲಿ ಪಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಯರಗನಹಳ್ಳಿಯ ನಿವಾಸಿ ರಂಜಿತಾ 6 ತಿಂಗಳ ಗರ್ಭಿಣಿಯಾಗಿದ್ದಳು. ಮೂರು ತಿಂಗಳಲ್ಲಿ ಮಗು ಮಡಿಲು ಸೇರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಳು. ಆದರೆ ನಿರೀಕ್ಷೆಯಲ್ಲಿದ್ದ 24 ವರ್ಷದ ರಂಜಿತಾ ಕೊರೊನಾ ಸೋಂಕಿಗೆ ತುತ್ತಾಗಿದ್ದಾಳೆ. ಕೊರೊನಾ ದೃಢವಾದ ಕಾರಣ ಮೂರ್ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಂಜಿತಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಇದನ್ನೂ ಓದಿ

ಹಲಸಿನ ಬೀಜದ ಉಪಯೋಗ ತಿಳಿದರೆ ಒಂದು ಬೀಜವನ್ನೂ ಹಾಳು ಮಾಡಲಾರಿರಿ; ಇಲ್ಲಿದೆ ವಿವರ

ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; ಬ್ಲ್ಯಾಕ್ ಫಂಗಸ್ ಸೋಂಕಿಗೆ ಎಲ್ಲಾ ಜಿಲ್ಲೆಯಲ್ಲಿ ಸಿಗುತ್ತೆ ಚಿಕಿತ್ಸೆ

(vijayanagar based warrior has died in hospital due to kidney failure)