ಪುತ್ತೂರಿನಲ್ಲಿ ಬಟ್ಟೆ ಅಂಗಡಿಗೆ ಆಕಸ್ಮಿಕ ಬೆಂಕಿ, ಇತರ ಅಂಗಡಿಗಳಿಗೂ ಹಾನಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 04, 2023 | 7:07 PM

ಬಟ್ಟೆ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

ಪುತ್ತೂರಿನಲ್ಲಿ ಬಟ್ಟೆ ಅಂಗಡಿಗೆ ಆಕಸ್ಮಿಕ ಬೆಂಕಿ, ಇತರ ಅಂಗಡಿಗಳಿಗೂ ಹಾನಿ
ಸಾಂದರ್ಭಿಕ ಚಿತ್ರ
Follow us on

ಮಂಗಳೂರು: ಬಟ್ಟೆ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ. ಈ ಬೆಂಕಿಯು ಅಕ್ಕ ಪಕ್ಕದಲೇ ಇದ್ದ ಇತರ ಬಟ್ಟೆ ಅಂಗಡಿಗೆ ಹಬ್ಬಿದ್ದು ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ. ಇದೀಗ ಸ್ಥಳಕ್ಕೆ  ಅಗ್ನಿ ಶಾಮಕ ದಳವು ಕೂಡ ದಾವಿಸಿದ್ದು, ಬೆಂಕಿ ಹಾರಿಸುವ ಕಾರ್ಯಚರಣೆಯನ್ನು ಮಾಡಿದೆ.

ಒಂದು ಅಂಗಡಿಗೆ ಬಿದ್ದ ಬೆಂಕಿಯು ಇತರ ಅಂಗಡಿಗಳಿಗೂ ತಗುಳಿದೆ, ಭಾರಿ ಪ್ರಮಾಣದ ಹೊಗೆಯೊಂದಿಗೆ ಇಡಿ ಕಟ್ಟಡ ಹೊತ್ತಿ ಉರಿದಿದೆ. ಘಟನೆ ನಡೆದ ಸ್ಥಳದಲ್ಲಿ ನೂರಾರು ಜನರು ಸೇರಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಾಯ ಮಾಡಿದ್ದಾರೆ. ಉಪ್ಪಿನಂಗಡಿ ಠಾಣೆ ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಯಾವುದೇ ಅಪಾಯ ಸಂಭವಿಸಿದಂತೆ ಕಟ್ಟೆಚರ ವಹಿಸಿದ್ದಾರೆ. ಬೆಂಕಿ ಅವಘಡದಿಂದ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಗೆ ಅವಘಡಕ್ಕೆ ಕಾರಣ ಏನು? ಎಂದು ಈವರೆಗೂ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

 

Published On - 7:07 pm, Tue, 4 April 23