ಎಮ್ಮೆಕೆರೆ ಗ್ರಾಮಕ್ಕೆ ಹೆಮ್ಮೆ ತಂದ ಮೈದಾನದಲ್ಲಿ ಸ್ವಿಮ್ಮಿಂಗ್ ಪೂಲ್​, ಸಿಎಂ ಸಿದ್ದರಾಮಯ್ಯರಿಂದ ಮುಂದಿನ ವಾರ ಲೋಕಾರ್ಪಣೆ, ಆದರೆ ಸ್ಥಳೀಯ ಯುವಕರಿಂದ ವಿರೋಧ

| Updated By: ಸಾಧು ಶ್ರೀನಾಥ್​

Updated on: Nov 16, 2023 | 2:20 PM

ಉದ್ಘಾಟನೆಗೆ ಸಿದ್ದಗೊಂಡಿರೋ ಸ್ವಿಮ್ಮಿಂಗ್ ಪೂಲ್​ ಬಳಿ ಡ್ರೈನೇಜ್​, ದೈವಸ್ಥಾನದ ಸಂಪರ್ಕ ರಸ್ತೆ ಹೀಗೇ ಹಲವು ಕಾಮಗಾರಿ ಬಾಕಿ ಇದೆ. ಇದರ ಜೊತೆಗೆ ಸ್ಥಳಿಯರ ಬೇಡಿಕೆ ಮೈದಾನದ ಅಭಿವೃದ್ದಿ ಕೆಲಸ ಸಂಪೂರ್ಣ ಬಾಕಿ ಉಳಿದಿದೆ. ಹೀಗಾಗಿ ಎಲ್ಲವೂ ಪೂರ್ಣಗೊಂಡ ಬಳಿಕ ಉದ್ಘಾಟನೆ ಮಾಡಬೇಕು ಇಲ್ಲಾ 2 ಕೋಟಿ ಅನುದಾನ ನೀಡಿ ಅದೇ ದಿನ ಭೂಮಿ ಪೂಜೆ ಮಾಡಬೇಕು. ಇಲ್ಲಾಂದ್ರೆ ಸಿಎಂ ಅವರ ಕಾರ್ಯಕ್ರಮಕ್ಕೇ ಅಡ್ಡಿ ಪಡಿಸೋದಾಗಿ ಸ್ಥಳಿಯರು ಎಚ್ಚರಿಕೆ ನೀಡಿದ್ದಾರೆ.

ಎಮ್ಮೆಕೆರೆ ಗ್ರಾಮಕ್ಕೆ ಹೆಮ್ಮೆ ತಂದ ಮೈದಾನದಲ್ಲಿ ಸ್ವಿಮ್ಮಿಂಗ್ ಪೂಲ್​, ಸಿಎಂ ಸಿದ್ದರಾಮಯ್ಯರಿಂದ ಮುಂದಿನ ವಾರ ಲೋಕಾರ್ಪಣೆ, ಆದರೆ ಸ್ಥಳೀಯ ಯುವಕರಿಂದ ವಿರೋಧ
ಎಮ್ಮೆಕೆರೆ ಗ್ರಾಮಕ್ಕೆ ಹೆಮ್ಮೆ ತಂದ ಮೈದಾನದಲ್ಲಿ ಸ್ವಿಮ್ಮಿಂಗ್ ಪೂಲ್​, ಸಿಎಂ ಸಿದ್ದರಾಮಯ್ಯರಿಂದ ಮುಂದಿನ ವಾರ ಲೋಕಾರ್ಪಣೆ, ಆದರೆ ಸ್ಥಳೀಯ ಯುವಕರಿಂದ ವಿರೋಧ
Follow us on

ಗರುಡ ಗಮನ ವೃಷಭ ವಾಹನ…ಇದು ರಾಜ್​ ಬಿ ಶೆಟ್ಟಿ ಅವರ ಮರೆಯಲಾರದ ಮಂಗಳೂರು ಕ್ರೈಂ ಲೋಕದ ಚಿತ್ರ. ರಾಜ್​ ಬಿ ಶೆಟ್ಟಿ ಆ ಚಿತ್ರದಲ್ಲಿ ಕ್ರಿಕೆಟ್ ಆಡೋ ಸೀನ್​ ಹಾಗೂ ಅದರಲ್ಲಿನ ಅವರ ಡೈಲಾಗ್ಸ್​ ಜನರ ಬಾಯಲ್ಲಿ ಈಗಲೂ ಗುನುಗುತ್ತಿದೆ. ಸದ್ಯ ವಿಷಯ ಏನಪ್ಪಾ ಅಂದ್ರೆ ಆ ಕ್ರಿಕೆಟ್​ ಗ್ರೌಂಡ್​ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಅಲ್ಲಿನ ಯುವಕರು ಸರ್ಕಾರದ ವಿರುದ್ದವೇ ತಿರುಗಿ ಬಿದ್ದಿದ್ದಾರೆ. ರಾಜ್​ ಬಿ ಶೆಟ್ಟಿ ಅಭಿನಯದ ಗರುಡ ಗಮನ ವೃಷಭ ವಾಹನ ಸಿನೆಮಾ ಶೂಟಿಂಗ್​ನ ಈ ದೃಶ್ಯ ಯಾರೂ ಮರೆಯೋದಿಕ್ಕೆ ಸಾದ್ಯವಿಲ್ಲ. ಮಂಗಳೂರಿನ ಕ್ರೈಂ ಲೋಕದ ಇತಿಹಾಸದ ಪುಟದ ಒಂದು ಎಳೆಯನ್ನ ಇಟ್ಟುಕೊಂಡು ನಗರದ ಎಮ್ಮೆಕೆರೆ ಎಂಬಲ್ಲಿ ಈ ಚಿತ್ರ ಶೂಟಿಂಗ್ ಆಗಿದ್ದು ಅಲ್ಲದೆ ಭರ್ಜರಿ ಯಶಸ್ಸು ಕೂಡಾ ಕಂಡಿತ್ತು. ಆದ್ರೆ ಈ ಚಿತ್ರ ಶೂಟಿಂಗ್ ನಡೆದಿದ್ದ ಎಮ್ಮೆಕೆರೆ ಮೈದಾನದ ವಿಚಾರದಲ್ಲಿ ವಿವಾದ ಹುಟ್ಟಿಕೊಂಡಿದ್ದು, ಇಲ್ಲಿನ ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಮೈದಾನದಲ್ಲಿ ಸ್ಮಾರ್ಟ್​ ಸಿಟಿ ಯೋಜನೆಯಲ್ಲಿ ನಿರ್ಮಾಣ ಮಾಡಿರೋ ಅಂತರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಪೂಲ್​ ವಿವಾದದ ಕೇಂದ್ರ ಬಿಂದು. ಈ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡೋದಿಕ್ಕೆ ಆರಂಭದಲ್ಲೇ ಸ್ಥಳಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ರೆ ಆವಾಗ ಶಾಸಕ ವೇದವ್ಯಾಸ್ ಕಾಮತ್ ಕಟೀಲು ದೇವರ ಆಣೆ ಮಾಡಿ ಸ್ವಿಮ್ಮಿಂಗ್ ಪೂಲ್ ಜೊತೆಗೆ ಇಲ್ಲಿನ ಮೈದಾನವನ್ನೂ ಅಭಿವೃದ್ದಿ ಮಾಡೋದಾಗಿ ಮಾತು ಕೊಟ್ಟಿದ್ದಾರೆ. ಆದ್ರೆ ಇದೀಗ ನವೆಂಬರ್ 24 ರಂದು ಸ್ವಿಮ್ಮಿಂಗ್ ಪೂಲ್ ಉದ್ಘಾಟನೆಗೆ ದಿನ ನಿಗದಿ ಮಾಡಿ ಸಿಎಂ ಅವರಿಂದಲೇ ಉದ್ಘಾಟನೆ ಮಾಡಿಸಲಾಗುತ್ತಿದೆ. ಇದಕ್ಕೆ ಸ್ಥಳಿಯ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಅಸಲಿಗೆ ಎಮ್ಮೆಕೆರೆ ಮೈದಾನದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸೊ ಯೋಜನೆ ಆರಂಭ ಮಾಡಿದ್ದು ಅಂದಿನ ಶಾಸಕ ಜೆ.ಆರ್.ಲೋಬೋ ಅವರು. ಆದ್ರೆ ಅಲ್ಲಿನ ಜನರ ವಿರೋಧದ ಕಾರಣ ಸ್ವಿಮ್ಮಿಂಗ್ ಪೂಲ್​ನ್ನು ಶಕ್ತಿನಗರ ಎಂಬಲ್ಲಿಗೆ ಶಿಫ್ಟ್​ ಮಾಡುವ ಬಗ್ಗೆ ಚರ್ಚೆ ಕೂಡಾ ನಡೆದಿತ್ತು. ಆದ್ರೆ ಬಳಿಕ ಶಾಸಕರಾದ ವೇದವ್ಯಾಸ್ ಕಾಮತ್ ಎಮ್ಮೆಕರೆಯ ಎಲ್ಲಾ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲೇ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: ಮಂಗಳೂರಿನ ಎಮ್ಮೆಕೆರೆಯಲ್ಲಿ ಒಲಿಂಪಿಕ್ ದರ್ಜೆಯ ಸ್ವಿಮ್ಮಿಂಗ್ ಫೂಲ್: ನವೆಂಬರ್ 24ರಂದು ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ

ಆದ್ರೆ ಆ ವೇಳೆ ಎಮ್ಮೆಕೆರೆ ಹೋರಾಟ ಸಮಿತಿಯವರಿಗೆ ಆಟದ ಮೈದಾನಕ್ಕೆ ಪ್ಲೆಡ್​ ಲೈಟ್​ ವ್ಯವಸ್ಥೆ, ಹಿರಿಯ ನಾಗರಿಕರಿಗೆ ವಾಕಿಂಗ್ ಟ್ರ್ಯಾಕ್​, ಆಟ ವೀಕ್ಷಿಸಲು ಗ್ಯಾಲರಿ ಮಾಡಿಕೊಡೋ ವಾಗ್ದಾನ ಮಾಡಿದ್ರು. ಆದ್ರೆ ಸದ್ಯ ಸ್ವಿಮ್ಮಿಂಗ್ ಪೂಲ್​ ತಲೆ ಎತ್ತಿ ನಿಂತು ಉದ್ಘಾಟನೆಗೆ ಸಿದ್ದಗೊಂಡಿದೆಯಾದ್ರೂ ಮೈದಾನವನ್ನು ಕೇಳೋರಿಲ್ಲ ಅನ್ನೋ ಹಾಗಾಗಿದೆ. ಆದ್ರೆ ಶಾಸಕ ವೇದವ್ಯಾಸ್ ಕಾಮತ್ ಅವರು ಸರ್ಕಾರ ಬದಲಾದ ಕಾರಣ 2 ಕೋಟಿ ಅನುದಾನ ತಡೆ ಹಿಡಿದಿದ್ದೇ ಇದಕ್ಕೆ ಕಾರಣ ಅಂದಿದ್ದಾರೆ. ಇನ್ನು ಕಾಮಗಾರಿ ಪೂರ್ಣಗೊಳ್ಳದೆ ತರಾತುರಿಯಲ್ಲಿ ಉದ್ಘಾಟನೆ ಮಾಡಲು ಹೊರಟಿರೋದು ಕೂಡಾ ತಪ್ಪು ಎಂದು ಹೇಳಿದ್ದಾರೆ.

ಉದ್ಘಾಟನೆಗೆ ಸಿದ್ದಗೊಂಡಿರೋ ಸ್ವಿಮ್ಮಿಂಗ್ ಪೂಲ್​ ಬಳಿ ಡ್ರೈನೇಜ್​, ದೈವಸ್ಥಾನದ ಸಂಪರ್ಕ ರಸ್ತೆ ಹೀಗೇ ಹಲವು ಕಾಮಗಾರಿ ಬಾಕಿ ಇದೆ. ಇದರ ಜೊತೆಗೆ ಸ್ಥಳಿಯರ ಬೇಡಿಕೆ ಮೈದಾನದ ಅಭಿವೃದ್ದಿ ಕೆಲಸ ಸಂಪೂರ್ಣ ಬಾಕಿ ಉಳಿದಿದೆ. ಹೀಗಾಗಿ ಎಲ್ಲವೂ ಪೂರ್ಣಗೊಂಡ ಬಳಿಕ ಉದ್ಘಾಟನೆ ಮಾಡಬೇಕು ಇಲ್ಲಾ 2 ಕೋಟಿ ಅನುದಾನ ನೀಡಿ ಅದೇ ದಿನ ಭೂಮಿ ಪೂಜೆ ಮಾಡಬೇಕು. ಇಲ್ಲಾಂದ್ರೆ ಸಿಎಂ ಅವರ ಕಾರ್ಯಕ್ರಮಕ್ಕೇ ಅಡ್ಡಿ ಪಡಿಸೋದಾಗಿ ಸ್ಥಳಿಯರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ