ಸಿಕ್ಸರ್‌ ಹೊಡೆದಿದ್ದಕ್ಕೆ ಟಕ್ಕರ್​​! ಕ್ರಿಕೆಟ್ ಆಟಗಾರರನ್ನು ಅಟ್ಟಾಡಿಸಿಕೊಂಡು ಹೋದ ಜೇನುನೊಣಗಳ ಹಿಂಡು

| Updated By: ಸಾಧು ಶ್ರೀನಾಥ್​

Updated on: Feb 05, 2024 | 1:06 PM

Bee attack: ಡಿಸ್ಟರ್ಬ್ ಆದ ಜೇನುನೊಣಗಳಿಗೆ ಅದು ಹೇಗೆ ತಿಳಿಯಿತೋ ಮೈದಾನದೊಳಕ್ಕೆ ದಾಳಿಯಿಟ್ಟಿವೆ. ದಾಳಿಯಿಂದ ತಪ್ಪಿಸಿಕೊಳ್ಳಲು ಆಟಗಾರರು ದಿಕ್ಕಾಪಾಲಾಗಿ ಓಡಿದ್ದಾರೆ. ಕೊನೆಗೆ ಜೇನುನೊಣಗಳ ದಾಳಿಗೆ ಕ್ರಿಕೆಟ್ ಪಂದ್ಯಾಟವೇ ರದ್ದಾಗಿದೆ.

ಮಂಗಳೂರು, ಫೆಬ್ರವರಿ 5: ಕ್ರಿಕೆಟ್ ಆಟಗಾರರ ಮೇಲೆ ಜೇನುನೊಣಗಳ ಹಿಂಡು ದಾಳಿ (Bee attack) ಮಾಡಿದೆ. ದಕ್ಷಿಣ ಕನ್ನಡ ಜಲ್ಲೆಯ ಉಳ್ಳಾಲ ತಾಲೂಕಿನ ಒಂಬತ್ತುಕೆರೆ ಮೃದಾನದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಆಯೋಜನೆ ಮಾಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಲವು ತಂಡಗಳು ಭಾಗವಹಿಸಿದ್ದವು.

ಪಂದ್ಯಾಟದ ನಡುವೆ ಆಟಗಾರನೊಬ್ಬ ಸಿಕ್ಸರ್‌ ಹೊಡೆದುಬಿಟ್ಟ. ಬಾಲು ಸೀದಾ ಹೋಗಿ ಮೈದಾನದಿಂದ ಹೊರಗೆ ತೆಂಗಿನ ಮರಕ್ಕೆ ಬಿತ್ತು. ಆದರೆ ಆ ತಂಗಿನ ಮರದಲ್ಲಿ ಜೇನುಗೂಡು ಕಟ್ಟಿತ್ತು. ಸೀದಾ ಆ ಜೇನುಗೂಡಿಗೆ ಚೆಂಡು ಬಡಿದಿದೆ.

ಅಷ್ಟೇ… ಡಿಸ್ಟರ್ಬ್ ಆದ ಜೇನುನೊಣಗಳಿಗೆ ಅದು ಹೇಗೆ ತಿಳಿಯಿತೋ ಮೈದಾನದೊಳಕ್ಕೆ ದಾಳಿಯಿಟ್ಟಿವೆ. ದಾಳಿಯಿಂದ ತಪ್ಪಿಸಿಕೊಳ್ಳಲು ಆಟಗಾರರು ದಿಕ್ಕಾಪಾಲಾಗಿ ಓಡಿದ್ದಾರೆ. ಕೊನೆಗೆ ಜೇನುನೊಣಗಳ ದಾಳಿಗೆ ಕ್ರಿಕೆಟ್ ಪಂದ್ಯಾಟವೇ ರದ್ದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ