ಮಂಗಳೂರು: ಬಿಲ್ಲವ (Billava community) ಈಡಿಗ, ನಾಮಧಾರಿ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಲಬುರ್ಗಿ ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆಗೆ ಇಂದು(ಜ.6) ಚಾಲನೆ ನೀಡಲಾಗಿದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ರಥಕ್ಕೆ ಬಾವುಟ ನೀಡಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಮಂಗಳೂರಿನಿಂದ ಹೊರಟು 41 ದಿನಗಳ ಕಾಲ 658 ಕಿ.ಮೀ ಸಾಗಲಿರುವ ಪಾದಯಾತ್ರೆ ಉಡುಪಿ, ಶಿವಮೊಗ್ಗ ಮೂಲಕ ಬೆಂಗಳೂರಿಗೆ ಪಾದಯಾತ್ರೆ ಆಗಮಿಸಲಿದೆ. ಈಡಿಗ, ಬಿಲ್ಲವ, ನಾಮಧಾರಿ ಸಮುದಾಯದ ಹಲವು ಜಿಲ್ಲೆಯ ಪ್ರಮುಖರು, ಜನಾರ್ದನ ಪೂಜಾರಿ, ಚಿತ್ರನಟರಾದ ಸುಮನ್ ತಲ್ವಾರ್, ರಾಜಶೇಖರ ಕೋಟ್ಯಾನ್, ತೆಲಂಗಾಣ ಸರ್ಕಾರದ ಸಚಿವ ಶ್ರೀನಿವಾಸ್, ಎಂಎಲ್ಸಿ ಹರೀಶ್ ಕುಮಾರ್ ಸೇರಿ ಹಲವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಈಡಿಗ-ಬಿಲ್ಲವ ಮೀಸಲಾತಿ ಹಕ್ಕೊತ್ತಾಯ: ಬಿಜೆಪಿ ರಾಜ್ಯಾಧ್ಯಕ್ಷರ ತವರಲ್ಲೇ ಬಿಲ್ಲವ ಸಮಾಜದ ಆಕ್ರೋಶ ಸ್ಫೋಟ
ಡಾ. ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಈ ಪಾದಯಾತ್ರೆ ನಮ್ಮ ಸಮುದಾಯದ ಹಿತಕ್ಕಾಗಿ. ನಮ್ಮ ಬೇಡಿಕೆಗಳಲ್ಲಿ ಯಾವುದೇ ಒಂದನ್ನ ಸರ್ಕಾರ ಪರಿಗಣಿಸದೆ ಹೋದರೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ಹಿಂದೆ ಇದೇ ಸರ್ಕಾರ ನಮ್ಮ ಸಮುದಾಯಕ್ಕೆ ಮೋಸ ಮಾಡಿದೆ. ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ ಸಮಸ್ತ ಸಮುದಾಯದ ಹಿತಾಸಕ್ತಿಯ ವಿರುದ್ಧವಾಗಿ ಸರ್ಕಾರದ ನಿಗಮ ಕಾರ್ಯ ನಿರ್ವಹಿಸಿದರೆ ಆ ನಿಗಮವನ್ನು ಬಂದ್ ಮಾಡಲು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುಮುಖ ಬೇಡಿಕೆಗಳು ಹೀಗಿವೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:30 pm, Fri, 6 January 23