ಮಂಗಳೂರು: ನಗರದಲ್ಲಿ ಮಳೆ ಮುಂದುವರೆದಿದ್ದು, ಭಾರೀ ಗಾಳಿ ಮಳೆಗೆ (Heavy Rain) ಖಾಸಗಿ ಹೊಟೇಲ್ನ ಕಬ್ಬಿಣದ ಛಾವಣಿ ಕುಸಿದಿರುವಂತಹ ಘಟನೆ ನಗರದ ಕೆಎಸ್ರಾವ್ ರಸ್ತೆಯಲ್ಲಿ ನಡೆದಿದೆ. ಮಂಗಳೂರಿನ ಪ್ರಸಿದ್ದ ಗಣೇಶ್ ಮಹಲ್ ಹೊಟೇಲ್ನ ಪಾರ್ಕಿಂಗ್ ಜಾಗದ ಛಾವಣಿ ಕುಸಿದಿದೆ. ಮಳೆ ಹಾಗೂ ಬಿಸಿಲಿನ ರಕ್ಷಣೆಗೆ ಛಾವಣಿ ನಿರ್ಮಿಸಲಾಗಿದ್ದು, ಕುಸಿತಗೊಂಡ ಛಾವಣಿ ಕೆಳಗೆ ವಾಹನಗಳು ಸಿಲುಕಿವೆ. ಏಳಕ್ಕೂ ಅಧಿಕ ಐಶಾರಾಮಿ ಕಾರುಗಳು ಛಾವಣಿ ಕುಸಿತಕ್ಕೆ ಜಖಂ ಆಗಿವೆ. ಮಧ್ಯಾಹ್ನದ ಊಟಕ್ಕೆ ಆಗಮಿಸಿದ್ದ ಗ್ರಾಹಕರ ಕಾರುಗಳು, ಕೆಲವೇ ನಿಮಿಷಗಳ ಕಾಲ ಗಾಳಿಯ ಸಹಿತ ಮಳೆ ಸುರಿದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ.
ಇದನ್ನೂ ಓದಿ: ನಿರಂತರ ಮಳೆಯಿಂದಾಗಿ ಶಿರಾಡಿಘಾಟ್ನಲ್ಲಿ ಮತ್ತೆ ಭೂಕುಸಿತ: ಭಾರೀ ವಾಹನಗಳ ಸಂಚಾರ ನಿರ್ಬಂಧ
ಭತ್ತದ ಗದ್ದೆಯಲ್ಲಿ ನಾಡ ದೋಣಿ ಸಂಚಾರ:
ಮಳೆ ನಿಂತರೂ ಮನೆ ಸೇರಲು ಈ ಗ್ರಾಮಕ್ಕೆ ದೋಣಿಯೇ ಆಸರೆಯಾಗಿದ್ದು, ಭತ್ತದ ಗದ್ದೆ ಮುಳುಗಿ ಮನೆ ಸೇರಲು ದೋಣಿಯಲ್ಲೇ ಸಾಗಬೇಕಾದ ಅನಿವಾರ್ಯತೆ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪಂಜ ಗ್ರಾಮದಲ್ಲಿ ಅಕ್ಷರಶಃ ನರಕವಾಗಿದೆ. ನಂದಿನಿ ನದಿ ಉಕ್ಕಿ ಹರಿದ ಪರಿಣಾಮ ಭತ್ತದ ಗದ್ದೆಗಳು ನದಿಯಂತಾಗಿದೆ. ಮಳೆ ನಿಂತರೂ ನೆರೆ ಇಳಿಯದೇ ದೋಣಿಯಲ್ಲೇ ಸಂಚಾರ ಮಾಡುವ ಪರಿಸ್ಥತಿ ಉಂಟಾಗಿದೆ. ಎಕರೆಗಟ್ಟಲೇ ಭತ್ತದ ಗದ್ದೆಯಲ್ಲಿ ನೀರು ತುಂಬಿ ಲಕ್ಷಾಂತರ ಮೌಲ್ಯದ ಕೃಷಿ ನಾಶವಾಗಿದ್ದು, ನಂದಿನಿಗೆ ತಡೆಗೋಡೆ ಕಟ್ಟದ ಕಾರಣ ಊರಿನಲ್ಲಿ ನೆರೆ ಬಂದಿದೆ. ಇಡೀ ಗ್ರಾಮದ ಎಕರೆಗಟ್ಟಲೇ ಕೃಷಿ ಭೂಮಿ ನಾಶವಾಗಿದೆ. ಸದ್ಯ ದ್ವೀಪದಂತಾಗಿರೋ ಊರಲ್ಲಿ ಮನೆ ಸೇರಲು ದೋಣಿಯೇ ಆಸರೆಯಾಗಿದೆ. ಕೃಷಿ ಭೂಮಿಯಲ್ಲಿ ನೀರು ತುಂಬಿಕೊಂಡು ದೋಣಿಯಲ್ಲಿ ಸಾಗುತ್ತಿದ್ದೇವೆ. ತಕ್ಷಣ ಸರ್ಕಾರ ನಮ್ಮ ಬೆಳೆ ನಷ್ಟಕ್ಕೆ ಪರಿಹಾರ ಕೊಡಲಿ. ಗರಿಷ್ಟ ಪ್ರಮಾಣದ ಪರಿಹಾರ ಕೊಡಲಿ ದಯವಿಟ್ಟು ಸ್ಪಂದಿಸಿ ಎಂದು ಗ್ರಾಮಸ್ಥರು ಹೇಳಿದರು.
ಇದನ್ನೂ ಓದಿ: ತುಂಗಭದ್ರಾ ಜಲಾಶಯ ಭರ್ತಿ: ನದಿ ಪಾತ್ರದ ಗ್ರಾಮಗಳ ಜನರಿಗೆ ಆತಂಕ, ಬಾಗಿನ ಅರ್ಪಣೆ
ರೇಣುಕಾಚಾರ್ಯಗೆ ಶಾಪ ಹಾಕಿದ ನದಿಪಾತ್ರದ ಜನರು
ಮಳೆಯಿಂದ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಹೊನ್ನಾಳಿ ಮತ್ತು ಹರಿಹರ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಹೊನ್ನಾಳಿಯ ಬಾಲರಾಜ್ ಘಾಟ್ಗೆ ನೀರು ನುಗ್ಗುವ ಭೀತಿ ಎದುರಾಗಿದ್ದು, ರೇಣುಕಾಚಾರ್ಯಗೆ ನದಿಪಾತ್ರದ ಜನರು ಹಿಡಿಶಾಪ ಹಾಕಿದ್ದಾರೆ. ಪ್ರವಾಹ ಬಂದಾಗೊಮ್ಮೆ ಭೇಟಿ ಬಿಟ್ಟರೇ ಏನೂ ಮಾಡಿಲ್ಲ. ನಿವಾಸಿಗಳನ್ನು ಸ್ಥಳಾಂತರ ಮಾಡಿದರೆ ಸೈಟ್, ಮನೆ ಕೊಡಬೇಕು. ಮನೆ ಕೊಟ್ಟಿದ್ದೇವೆ ಅಂತಾ ಸುಳ್ಳು ಹೇಳುತ್ತಿದ್ದಾರೆಂದು ಶಾಸಕ ರೇಣುಕಾಚಾರ್ಯ ವಿರುದ್ಧ ಗ್ರಾಮಸ್ಥರು ಆರೋಪಿಸಿದರು.