ದಕ್ಷಿಣ ಕನ್ನಡದಲ್ಲಿ ಮಹಾ ಮಳೆ! ಗೃಹಪ್ರವೇಶಕ್ಕೆ ರೆಡಿ ಇದ್ದ ಮನೆ ನೆಲಸಮ

ಬಿರುಕು ಬಿಟ್ಟಿರುವ ಗೋಡೆ ರಿಪೇರಿ ಕೆಲಸ ಮಾಡಲಾಗಿತ್ತು. ಜು.18ರಂದು ಗೃಹಪ್ರವೇಶ ನೆರವೇರಿಸಲು ಎಲ್ಲ ತಯಾರಿ ನಡೆದಿತ್ತು. ಆದರೆ ಅಷ್ಟರಲ್ಲೇ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮವಾಗಿದೆ.

ದಕ್ಷಿಣ ಕನ್ನಡದಲ್ಲಿ ಮಹಾ ಮಳೆ! ಗೃಹಪ್ರವೇಶಕ್ಕೆ ರೆಡಿ ಇದ್ದ ಮನೆ ನೆಲಸಮ
ಹೊಸ ಮನೆ ಕುಸಿದಿದೆ
Edited By:

Updated on: Jul 13, 2022 | 10:40 AM

ಮಂಗಳೂರು: ರಾಜ್ಯದ ಹಲವೆಡೆ ಇಂದು (ಜುಲೈ 13) ಮಳೆ (Heavy Rain) ಮುಂದುವರಿದಿದ್ದು, ಆತಂಕ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಎಂಬಲ್ಲಿ ಗೃಹಪ್ರವೇಶಕ್ಕೆ (House Warming) ರೆಡಿ ಇದ್ದ ಮನೆ ಮಳೆಯಿಂದ ನೆಲಸಮ ಆಗಿರುವ ಘಟನೆ ನಡೆದು ಹೋಗಿದೆ. 3 ದಿನದ ಹಿಂದೆ ಮರ ಬಿದ್ದು ಮನೆ ಗೋಡೆಗಳಲ್ಲಿ ಬಿರುಕು ಬಿಟ್ಟಿತ್ತು. ಬಿರುಕು ಬಿಟ್ಟಿರುವ ಗೋಡೆ ರಿಪೇರಿ ಕೆಲಸ ಮಾಡಲಾಗಿತ್ತು. ಜು.18ರಂದು ಗೃಹಪ್ರವೇಶ ನೆರವೇರಿಸಲು ಎಲ್ಲ ತಯಾರಿ ನಡೆದಿತ್ತು. ಆದರೆ ಅಷ್ಟರಲ್ಲೇ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮವಾಗಿದೆ.

ತೇಜ್ ಕುಮಾರ್ ಮತ್ತು ತಾರಾಮತಿ ದಂಪತಿಯ ಮನೆ ಕುಸಿದು ಹೋಗಿದೆ. ಪ್ರಜ್ವಲ್ ಮತ್ತು ಉಜ್ವಲ್ ಎಂಬ ಸಹೋದರರು ಮನೆಯಲ್ಲಿದ್ದರು. ಹಾಲ್​ನಲ್ಲಿ‌ ಮಲಗಿ 6.30 ಕ್ಕೆ ಮನೆಯಿಂದ ಹೊರಬಂದಿದ್ದರು. ಈ ವೇಳೆ ಗುಡ್ಡ ಕುಸಿದು 3 ಬೆಡ್ ರೂಂ ತುಂಬ ಮಣ್ಣು ಆವರಿಸಿಕೊಂಡಿದೆ. ಇನ್ನು ಗುಡ್ಡ ಕುಸಿದ ಹಿನ್ನೆಲೆ ಮನೆ ಬಳಿಯಿದ್ದ 3 ಬೈಕ್​ಗಳು ಮಣ್ಣಲ್ಲಿ ಸಿಲುಕಿ ಹಾನಿಯಾಗಿವೆ.

ಇದನ್ನೂ ಓದಿ
Rashmika Mandanna: ಇನ್ನು 3 ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ಮನೆ ಏನಾಗಬಹುದು? ಈಗಲೇ ಭವಿಷ್ಯ ನುಡಿದ ನಟಿ
ಅಮೆರಿಕಾದಲ್ಲಿ 40 ವರ್ಷಗಳ ಹಿಂದೆ 5-ವರ್ಷದ ಮಗು ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಪ್ರಕರಣ ಈಗ ಇತ್ಯರ್ಥಗೊಂಡಿದೆ!
ಅಮೇರಿಕದ ಮಾಜಿ ಒಲಂಪಿಯನ್ ಕಿಮ್ ಗ್ಲಾಸ್ ಮೇಲೆ ಆಗಂತುಕನಿಂದ ಹಲ್ಲೆ, ಮುಖದಲ್ಲಿನ ಮೂಳೆ ಮುರಿದಿವೆ, ಕಣ್ಣು ಊದಿಕೊಂಡಿದೆ!
Karnataka Rain: ಕರಾವಳಿಯಲ್ಲಿ ಕಡಿಮೆಯಾಯ್ತು ಮಳೆ; ಪರಿಹಾರ ಕಾರ್ಯ ಚುರುಕು, ಇದು ತಾತ್ಕಾಲಿಕ ಎಂದ ಹವಾಮಾನ ಇಲಾಖೆ

ಇದನ್ನೂ ಓದಿ: Rashmika Mandanna: ಇನ್ನು 3 ವರ್ಷಗಳಲ್ಲಿ ರಶ್ಮಿಕಾ ಮಂದಣ್ಣ ಮನೆ ಏನಾಗಬಹುದು? ಈಗಲೇ ಭವಿಷ್ಯ ನುಡಿದ ನಟಿ

ಅಲುಗಾಡುವ ಕಾಲ್ಸೇತುವೆ ಮೇಲೆ ನಡೆಯಬೇಕು:
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಾಳಗೋಡು ಗ್ರಾಮದ ಉಪ್ಪುಕಳ ಜನರು ಮಳೆಗಾಲದಲ್ಲಿ ತೀರಾ ತೊಂದರೆಗಳನ್ನ ಅನುಭವಿಸುತ್ತಾರೆ. ದಿನ ನಿತ್ಯದ ವಸ್ತುಗಳು ಸಿಗದೆ ಪರದಾಡುತ್ತಿದ್ದಾರೆ. ಮಕ್ಕಳು ಅಲುಗಾಡುವ ಕಾಲ್ಸೇತುವೆ ಹಾದು ಹೋಗಬೇಕಿದೆ. ಈ ಗ್ರಾಮದ ಜನರು ನಗರಕ್ಕೆ ಹೋಗಬೇಕಾದರೆ ಹಳ್ಳ ದಾಟಬೇಕು. ಹಳ್ಳ ವರ್ಷದ 365 ದಿನ ಕೂಡ ತುಂಬಿ ಹರಿಯುತ್ತೆ. ಮಳೆಗಾಲದಲ್ಲಿ ನೀರು ರಭಸವಾಗಿ ಹರಿಯುತ್ತೆ.

ಈ ಬಗ್ಗೆ ಮಾತನಾಡಿದ ಬಾಲಕ ತನ್ವಿತ್, ಶಾಲೆಗೆ ಹೋಗೋದಕ್ಕೆ ಸಮಸ್ಯೆ ಆಗುತ್ತಿದೆ. ಸಾಮಾನ್ಯವಾಗಿ ನೀರಿದ್ದಾಗ ಹೇಗೋ ಹೋಗುತ್ತೇವೆ. ಸಮಸ್ಯೆ ಆಗೋದಿಲ್ಲ, ಅಭ್ಯಾಸ ಆಗಿದೆ. ಹೆಚ್ಚು ನೀರು ಬಂದಾಗ ತಲೆ ಸುತ್ತು ಬರುತ್ತದೆ. ಹೆಚ್ಚು ನೀರು ಬಂದಾಗ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತೇವೆ ಎಂದು ತಿಳಿಸಿದ.

Published On - 8:25 am, Wed, 13 July 22