Karnataka Rain: ಕರಾವಳಿಯಲ್ಲಿ ಕಡಿಮೆಯಾಯ್ತು ಮಳೆ; ಪರಿಹಾರ ಕಾರ್ಯ ಚುರುಕು, ಇದು ತಾತ್ಕಾಲಿಕ ಎಂದ ಹವಾಮಾನ ಇಲಾಖೆ

ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 127 ಕೋಟಿ ನಷ್ಟವಾಗಿದ್ದು, 1068ಮಿ.ಮೀ ವಾಡಿಕೆ ಮಳೆಯಾಗಿದೆ. ಜಿಲ್ಲೆಯಲ್ಲಿ 1186 ಮಿಲಿ ಮೀಟರ್ ಮಳೆ ಸುರಿದಿದ್ದು, ಶೇ .11ಮಿ.ಮಿ ಮಳೆ ಹೆಚ್ಚಾಗಿದೆ.

Karnataka Rain: ಕರಾವಳಿಯಲ್ಲಿ ಕಡಿಮೆಯಾಯ್ತು ಮಳೆ; ಪರಿಹಾರ ಕಾರ್ಯ ಚುರುಕು, ಇದು ತಾತ್ಕಾಲಿಕ ಎಂದ ಹವಾಮಾನ ಇಲಾಖೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2022 | 7:28 AM

ಉಡುಪಿ: ಕಳೆದೊಂದು ವಾರದಿಂದ ಸುರಿಯುತ್ತಿರುವ ವಿಪರೀತ ಮಳೆ (Heavy Rain) ಯೂ ಮಂಗಳವಾರ ಕೊಂಚ ವಿರಾಮ ನೀಡಿದ್ದು, ಬಿಸಿಲು ಕಾಣಿಸಿಕೊಂಡಿತು. ಆದರೇ ಹವಾಮಾನ ಇಲಾಖೆ ಇನ್ನೂ ಕೆಲದಿನ ಮಳೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಮಂಗಳವಾರ ಮಧ್ಯಾಹ್ನದ ನಂತರ ಒಂದೆರಡು ಬಾರಿ ಸಣ್ಣ ಪ್ರಮಾಣದ ಮಳೆಯಾಗಿದೆ. ಸೋಮವಾರ ಧಾರಾಕಾರ ಮಳೆಯಾಗಿದ್ದರೂ, ರಾತ್ರಿಯ ಮಳೆ ಕಡಿಮೆಯಾಗಿತ್ತು. ಜಿಲ್ಲೆಯಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಒಂದು ವಾರ ಕಾಲ ರಜೆ ನೀಡಲಾಗಿದ್ದು, ಮಂಗಳವಾರ ಮತ್ತೇ ಶಾಲೆಗಳು ಆರಂಭವಾಗಿವೆ. ಸೋಮವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ 4 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಒಟ್ಟು 31 ಮನೆಗಳಿಗೆ 25,27,000 ರೂ ನಷ್ಟ ಅಂದಾಜಿಸಲಾಗಿದೆ. ಕುಂದಾಪುರ ತಾಲೂಕಿನಲ್ಲಿ 14 ಮನೆಗಳಿಗೆ 10.02 ಲಕ್ಷ ರೂ, ಕಾರ್ಕಳ ತಾಲೂಕಿನ 3 ಮನೆಗಳಿಗೆ 8.30 ಲಕ್ಷ ರೂ. ಬೈಂದೂರು 6 ಮನೆಗಳಿಗೆ 3 ಲಕ್ಷ ರೂ. ಉಡುಪಿ 5 ಮನೆಗಳಿಗೆ 2.75 ಲಕ್ಷ ರೂ. ಮತ್ತು ಬ್ರಹ್ಮಾವರದ 3 ಮನೆಗಳಿಗೆ 1 ಲಕ್ಷ ರೂ. ನಷ್ಟ ಉಂಟಾಗಿದೆ.

ಇದನ್ನೂ ಓದಿ: Karnataka Dams Water Level: ಕೆಆರ್​ಎಸ್ ಶೇ.94ರಷ್ಟು ಭರ್ತಿ, ರಾಜ್ಯದ ಉಳಿದ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿದೆ

ನಿಟ್ಟೆ ಗ್ರಾಮದ ವಾರಿಜ ಪೂಜಾರಿ ಅವರ ಮನೆ ಗೋಡೆಗಾಳಿ ಮಳೆಗೆ ಕುಸಿದು 5,00,000 ರೂ. ಕುಂದಾಪುರ ತಾಲೂಕಿನ ಬೆಳ್ಳಾಳ ಗ್ರಾಮದ ಜಾನಕಿ ಆಚಾರಿ ಅವರ ಮನೆಗೆ ಸಂಪೂರ್ಣ ಹಾನಿಯಾಗಿ 5,00,000 ರೂ. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಜಗದೀಶ್ ಶಿವರಾಮ ಶೆಟ್ಟಿ ಮನೆಯ ಗೋಡೆಗಳು ಸಂಪೂರ್ಣ ಕುಸಿದಿದ್ದು 3,00,000 ರೂ. ಮತ್ತು ಉಡುಪಿ ತಾಲೂಕಿನ ಬೊಮ್ಮಾರಬೆಟ್ಟು ಗ್ರಾಮದ ವಿಶ್ವನಾಥ ದೇವಾಡಿಗ ಅವರ ಮನೆಗೆ ಗಾಳಿಮಳೆಯಿಂದ ಸಂಪೂರ್ಣ ಹಾನಿಯಾಗಿ 1,00,000 ರೂ. ನಷ್ಟ ಉಂಟಾಗಿದೆ. ಕುಂದಾಪುರ ತಾಲೂಕಿನ ಬೆಳ್ಳಾಳ ಗ್ರಾಮದ ಮಂಜುನಾಥ ಬಳೆಗಾರ ಎಂಬವರ ತೋಟಕ್ಕೆ ಭಾಗಶ: ಹಾನಿಯಾಗಿದ್ದು 25,000 ರೂ. ನಷ್ಟವಾಗಿದೆ.

ಇದನ್ನೂ ಓದಿ: ಆಂಜನೇಯ ಜನ್ಮಸ್ಥಳ ವಿವಾದದ ನಡುವೆ ಮತ್ತೊಂದು ವಿವಾದ ಉದ್ಭವ; ಪಂಪಾ ಸರೋವರ ಕುರಿತು ಗುಜರಾತ್ ಪ್ರವಾಸೋದ್ಯಮ ವಿವಾದಾತ್ಮಕ ಟ್ವೀಟ್

ಸೋಮವಾರ ಮುಂಜಾನೆಯಿಂದ ಮಂಗಳವಾರ ಮುಂಜಾನವರೆಗೆ ಜಿಲ್ಲೆಯಲ್ಲಿ ಸರಾಸರಿ 69 ಮಿ.ಮೀಟರ್ ಮಳೆ ದಾಖಲಾಗಿದೆ. ತಾಲೂಕುವಾರು ಉಡುಪಿ 65.90, ಬ್ರಹ್ಮಾವರ 46.30, ಕಾಪು 25, ಕುಂದಾಪುರ 61.90, ಬೈಂದೂರು 121.60, ಕಾರ್ಕಳ 60.90, ಹೆಬ್ರಿ 72.10 ಮಿ.ಮೀ. ಮಳೆಯಾಗಿದೆ. ರಾಜ್ಯದಲ್ಲಿಯೇ ಗರಿಷ್ಟ ಮಳೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿ ಹೊಳೆ ಗ್ರಾಮದಲ್ಲಿ 180.50 ಮಿ.ಮೀ. ದಾಖಲಾಗಿದೆ. ದಕ್ಷೀಣ ಕನ್ನಡದಲ್ಲಿ 20161 ಒಟ್ಟಾರೆ ಮಳೆಯ ಪ್ರಮಾಣವಾಗಿದ್ದು, 1646 ಮೀ.ಮಿ ವಾಡಿಕೆ ಮಳೆಯಾಗಿದೆ. 5 ಜೀವ ಹಾನಿ ಸಂಭವಿಸಿದೆ.

ಕಾರವಾರ: ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 127 ಕೋಟಿ ನಷ್ಟವಾಗಿದ್ದು, 1068ಮಿ.ಮೀ ವಾಡಿಕೆ ಮಳೆಯಾಗಿದೆ. ಜಿಲ್ಲೆಯಲ್ಲಿ 1186 ಮಿಲಿ ಮೀಟರ್ ಮಳೆ ಸುರಿದಿದ್ದು, ಶೇ .11ಮಿ.ಮಿ ಮಳೆ ಹೆಚ್ಚಾಗಿದೆ. ಇನ್ನೂ ಮಳೆ ಹಾನಿಯಿಂದ 13 ಗ್ರಾಮಗಳು ಬಾಧಿತವಾಗಿವೆ. ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ, ಜೋಯಿಡಾ ಮಳೆಯಿಂದ ಬಾಧಿತ ತಾಲೂಕುಗಳಾಗಿವೆ. ಮಳೆಯಿಂದ 698 ಜನ ಬಾದಿತಗೊಂಡಿದ್ದು, ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರ ಸಂಖ್ಯೆ- 209. ತೆರೆದ ಕಾಳಜಿ ಕೇಂದ್ರ- 7. ಜಿಲ್ಲೆಯಲ್ಲಿ ಜೀವ ಹಾನಿ- 3(ಪರಿಹಾರ ವಿತರಿಸಿದೆ) ಜಾನುವಾರು ಸಾವು- 2( ಪರಿಹಾರ ನೀಡಿದೆ).

ಮನೆ ಹಾನಿ ವಿವರ: ಜಿಲ್ಲೆಯಲ್ಲಿ ಒಟ್ಟು ಹಾನಿಯಾದ ಮನೆಗಳ ಸಂಖ್ಯೆ- 273 ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕುಸಿದ ಮನೆ-12 ಜಿಲ್ಲೆಯಲ್ಲಿ ತೀವ್ರ ಹಾನಿ ಯಾದ ಮನೆ-26 ಜಿಲ್ಲೆಯಲ್ಲಿ ಭಾಗಶ: ಹಾನಿಯಾದ ಮನೆಗಳು- 235 (ಎಲ್ಲ ಮನೆಗಳಿಗೆ ಪರಿಹಾರ ನೀಡಲಾಗಿದೆ.)

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಹಾನಿ ವಿವರ: ಶಾಲೆ ಹಾನಿ- 124 – ಮೊತ್ತ- 426.0₹ ಅಂಗನವಾಟಿ-147- ಮೊತ್ತ- 302.2₹ ಇತರ ಕಟ್ಟಡಗಳು- 20 ಮೊತ್ತ-92.5₹

ಜಿಲ್ಲೆಯ ಒಟ್ಟು 499.51km ರಸ್ತೆಗಳು ಹಾನಿಯಾಗಿದ್ದು, 71 ಸೇತುವೆ ಹಾನಿಯಾಗಿದೆ. ಗ್ರಾಮೀಣ ರಸ್ತೆ- 265.5 km -ಮೊತ್ತ -2733.8₹ ರಾಜ್ಯ ಹೆದ್ದಾರಿ-76.96 km ಮೊತ್ತ -1497.4₹ PWD ಮುಖ್ಯ ರಸ್ತೆಗಳು- 157.15km ಮೊತ್ತ- 2528.95 ಸೇತುವೆಗಳು- 71 ಮೊತ್ತ- 2684.5₹

ಜಿಲ್ಲೆಯಲ್ಲಿ ಹೆಸ್ಕಾಂ ಹಾನಿ ವಿವರ: ಲೈನ್ ಕಂಬಗಳು- 1779 ಮೊತ್ತ- 202.96, ಲೈನುಗಳು- 18.51 ಮೊತ್ತ- 8.42₹, ಟ್ರಾನ್ಫಾರ್ಮಗಳು – 77 ಮೊತ್ತ -46.8₹, ಬೆಳೆಹಾನಿ – 0.42 ಹೆ(ತೋಟಗಾರಿಕೆ ಬೆಳೆ), ಕೃಷಿ – ಯಾವುದೇ ಹಾನಿಯಾಗಿಲ್ಲ.

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ