ಅಮೇರಿಕದ ಮಾಜಿ ಒಲಂಪಿಯನ್ ಕಿಮ್ ಗ್ಲಾಸ್ ಮೇಲೆ ಆಗಂತುಕನಿಂದ ಹಲ್ಲೆ, ಮುಖದಲ್ಲಿನ ಮೂಳೆ ಮುರಿದಿವೆ, ಕಣ್ಣು ಊದಿಕೊಂಡಿದೆ!

ಆಕಸ್ಮಿಕ ಹಲ್ಲೆಯಿಂದ ತಮ್ಮ ಮುಖದ ಮೇಲೆ ಹಲವಾರು ಫ್ರ್ಯಾಕ್ಚರ್​ಗಳಾಗಿವೆ. ಒಂದು ಕಣ್ಣು ಊದಿಕೊಂಡಿದೆ ಮತ್ತು ಹಲವು ಗಾಯಗಳಿಗೆ ಹೊಲಿಗೆ ಹಾಕಲಾಗಿದೆ ಎಂದು ಕಿಮ್ ಹೇಳಿದ್ದಾರೆ. ಹಲ್ಲೆಕೋರ ಎಸೆದ ವಸ್ತು ಪೈಪ್ ಥರ ಕಾಣುತಿತ್ತು ಎಂದು ಅವರು ಹೇಳಿದ್ದಾರೆ.

ಅಮೇರಿಕದ ಮಾಜಿ ಒಲಂಪಿಯನ್ ಕಿಮ್ ಗ್ಲಾಸ್ ಮೇಲೆ ಆಗಂತುಕನಿಂದ ಹಲ್ಲೆ, ಮುಖದಲ್ಲಿನ ಮೂಳೆ ಮುರಿದಿವೆ, ಕಣ್ಣು ಊದಿಕೊಂಡಿದೆ!
ಯುಎಸ್​ ಮಾಜಿ ಒಲಂಪಿಯನ್ ಕಿಮ್​ ಗ್ಲಾಸ್​
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jul 13, 2022 | 4:23 PM

ಬೀಜಿಂಗ್ ಒಲಂಪಿಕ್ಸ್ 2008ರಲ್ಲಿ ಯುಎಸ್ ಮಹಿಳಾ ವಾಲಿವಾಲ್ ತಂಡವನ್ನು ಪ್ರತಿನಿಧಿಸಿದ್ದ ಕಿಮ್ ಗ್ಲಾಸ್ (Kim Glass) ಅವರು ಲಾಸ್ ಏಂಜೆಲ್ಸ್ (Los Angeles) ನಗರದಲ್ಲಿ ತನ್ನ ಮೇಲೆ ಹಲ್ಲೆ ನಡೆದಿದ್ದರಿಂದ ಮುಖದ ಮೂಳೆಗಳು ಮುರಿದಿವೆ ಮತ್ತು ಕಣ್ಣು ಊದಿಕೊಂಡಿದೆ (swollen) ಎಂದು ಹೇಳಿದ್ದಾರೆ. ರಸ್ತೆಯಲ್ಲಿದ್ದ ನಿರ್ಗತಿಕನೊಬ್ಬ ತನ್ನ ಮುಖದತ್ತ ಲೋಹದ ವಸ್ತುವೊಂದನ್ನು ಎಸೆದಾಗ ಗಂಭೀರವಾಗಿ ಗಾಯಗೊಂಡಿರುವುದಾಗಿ ಕಿಮ್ ಹೇಳಿಕೊಂಡಿದ್ದಾರೆ. ಹಲ್ಲೆಕೋರ ನಿರ್ಗತಿಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೀಜಿಂಗ್ ಒಲಂಪಿಕ್ಸ್ ನಲ್ಲಿ ಕಿಮ್ ಅವರನ್ನೊಳಗೊಂಡ ಅಮೇರಿಕಾದ ವಾಲಿಬಾಲ್ ತಂಡ ಬೆಳ್ಳಿ ಪದಕ ಗೆದ್ದಿತ್ತು. ಅಸೋಸಿಯೇಟೆಡ್ ಪ್ರೆಸ್ ವರದಿ ಪ್ರಕಾರ ಕಿಮ್ ತಮ್ಮ ಸ್ನೇಹಿತನೊಬ್ಬನೊಂದಿಗೆ ಮಧ್ಯಾಹ್ನದ ಊಟಕ್ಕೆ ಹೋಗುತ್ತಿದ್ದಾಗ, ಒಬ್ಬ ವ್ಯಕ್ತಿ ಕೈಯಲ್ಲೊಂದು ವಸ್ತು ಹಿಡಿದುಕೊಂಡು ತಮ್ಮತ್ತ ಧಾವಿಸುವುದನ್ನು ಗಮನಿಸಿದರು. ಸದರಿ ಘಟನೆಯು ಶುಕ್ರವಾರ ನಡೆದಿದೆ.

‘ಅವನು ನನ್ನತ್ತ ತೀವ್ರ ಮತ್ಸರಭರಿತ ಮತ್ತು ದ್ವೇಷಕಾರುವ ದೃಷ್ಟಿಯಿಂದ ನೋಡುತ್ತಿದ್ದ ಹಾಗೂ ಇದೆಲ್ಲ ಕ್ಷಣಾರ್ಧದಲ್ಲಿ ನಡೆದು ಹೋಯಿತು. ಆ ಜನನಿಬಿಡ ರಸ್ತೆಯಲ್ಲಿ ಅವನು ನನ್ನ ಮುಖದತ್ತ ಆ ವಸ್ತುವನ್ನು ಎಸೆದ. ಹಾಗೆ ನೋಡಿದರೆ ಅವನು ತೀರ ನನ್ನ ಹತ್ತಿರಕ್ಕೇನೂ ಬಂದಿರಲಿಲ್ಲ,’ ಎಂದು ಕಿಮ್ ಹೇಳಿದ್ದಾರೆ. ಅವನು ಲೋಹದಂಥ ವಸ್ತುವನ್ನು ಕಿಮ್ ಅವರತ್ತ ಎಸೆದ ಬಳಿಕ ಹತ್ತಿರದಲ್ಲಿದ್ದ ಜನ ಅವನನ್ನು ಹಿಡಿದು ಪೊಲೀಸರಿಗೆ ಫೋನ್ ಮಾಡಿದರು.

ಆಕಸ್ಮಿಕ ಹಲ್ಲೆಯಿಂದ ತಮ್ಮ ಮುಖದ ಮೇಲೆ ಹಲವಾರು ಫ್ರ್ಯಾಕ್ಚರ್​ಗಳಾಗಿವೆ. ಒಂದು ಕಣ್ಣು ಊದಿಕೊಂಡಿದೆ ಮತ್ತು ಹಲವು ಗಾಯಗಳಿಗೆ ಹೊಲಿಗೆ ಹಾಕಲಾಗಿದೆ ಎಂದು ಕಿಮ್ ಹೇಳಿದ್ದಾರೆ. ಹಲ್ಲೆಕೋರ ಎಸೆದ ವಸ್ತು ಪೈಪ್ ಥರ ಕಾಣುತಿತ್ತು ಎಂದು ಅವರು ಹೇಳಿದ್ದಾರೆ.

ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದರೂ ತಾನು ಶೀಘ್ರವಾಗಿ ಗುಣಮುಖಳಾಗುವುದಾಗಿ ಕಿಮ್ ತಮ್ಮ ಅಭಿಮಾನಿಗಳಿಗೆ ಆಶ್ವಾಸನೆ ನೀಡಿದ್ದಾರೆ. ಸದಕ್ಕಂತೂ ನನ್ನ ದೃಷ್ಟಿ ಚೆನ್ನಾಗಿಯೇ ಇದೆ. ವೈದ್ಯರು ಬಹಳ ಎಚ್ಚರಿಕೆಯಿಂದ ಮುಖ ಮತ್ತು ಕಣ್ಣಿನ ಭಾಗದಲ್ಲಿ ಹೊಲಿಗೆಗಳನ್ನು ಹಾಕಿದ್ದಾರೆ, ಎಂದು ಕಿಮ್ ಹೇಳಿದ್ದಾರೆ.

ಲಾಸ್ ಏಂಜೆಲ್ಸ್ ಪೊಲೀಸ್ ಇಲಾಖೆ ಬಾತ್ಮೀದಾರ ಹೇಳಿಕೆಯೊಂದನ್ನು ನೀಡಿ, ಕಿಮ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿ 51-ವರ್ಷ ವಯಸ್ಸಿನವನಾಗಿದ್ದು ಅವನ ಹೆಸರು ಸಿಮಯೋನ್ ತೆಸ್ಫಾಮರಿಯಮ್ ಆಗಿದೆ ಎಂದಿದ್ದಾರೆ. ಅವನ ವಿರುದ್ಧ ಅಪಾಯಕಾರಿ ಅಸ್ತ್ರವೊಂದರಿಂದ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಕಿಮ್ ಮೇಲೆ ನಡೆದ ಹಲ್ಲೆ ಯುಎಸ್ಎ ವಾಲಿಬಾಲ್ ಸಂಸ್ಥೆಯನ್ನು ಭೀತಿಗೊಳಪಡಿಸಿದೆ ಎಂದು ಅದರ ಅಧ್ಯಕ್ಷ ಮತ್ತು ಸಿಈಓ ಜೇಮಿ ಡೇವಿಸ್ ಹೇಳಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

‘ಸಂಸ್ಥೆಯು ಕಿಮ್ ಬಗ್ಗೆ ಯೋಚನೆ ಮಾಡುತ್ತಿದೆ ಮತ್ತು ಆಕೆ ಶೀಘ್ರವಾಗಿ ಗುಣಮುಖಳಾಗಲಿ ಎಂದು ಹಾರೈಸುತ್ತದೆ,’ ಎಂದು ಡೇವಿಸ್ ಹೇಳಿದ್ದಾರೆ.

ಇದನ್ನೂ ಓದಿ:  Vladimir Putin Health: ದೃಷ್ಟಿ ಕಳೆದುಕೊಳ್ಳುತ್ತಿರುವ ರಷ್ಯಾ ಅಧ್ಯಕ್ಷ ಪುಟಿನ್, ಮೂರೇ ವರ್ಷ ಆಯಸ್ಸು ಎಂದ ಗೂಢಚಾರಿ

Published On - 8:00 am, Wed, 13 July 22