Vladimir Putin Health: ದೃಷ್ಟಿ ಕಳೆದುಕೊಳ್ಳುತ್ತಿರುವ ರಷ್ಯಾ ಅಧ್ಯಕ್ಷ ಪುಟಿನ್, ಮೂರೇ ವರ್ಷ ಆಯಸ್ಸು ಎಂದ ಗೂಢಚಾರಿ

ಇನ್ನು ಮೂರು ವರ್ಷಗಳಲ್ಲಿ ಅವರು ಸಾಯಬಹುದು ಎಂದು ರಷ್ಯಾದ ಗುಪ್ತಚರ ಮತ್ತು ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ವರದಿ ಮಾಡಿವೆ.

Vladimir Putin Health: ದೃಷ್ಟಿ ಕಳೆದುಕೊಳ್ಳುತ್ತಿರುವ ರಷ್ಯಾ ಅಧ್ಯಕ್ಷ ಪುಟಿನ್, ಮೂರೇ ವರ್ಷ ಆಯಸ್ಸು ಎಂದ ಗೂಢಚಾರಿ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 31, 2022 | 10:03 AM

ಲಂಡನ್: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ರ ಆರೋಗ್ಯ (Vladimir Putin) ಕ್ಷೀಣಿಸುತ್ತಿದೆ. ಅವರ ದೃಷ್ಟಿ ಕಡಿಮೆಯಾಗುತ್ತಿದ್ದು, ಕ್ಯಾನ್ಸರ್ ಅವರ ದೇಹದಲ್ಲಿ ವೇಗವಾಗಿ ವ್ಯಾಪಿಸುತ್ತಿದೆ. ಇನ್ನು ಮೂರು ವರ್ಷಗಳಲ್ಲಿ ಅವರು ಸಾಯಬಹುದು ಎಂದು ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ವರದಿ ಮಾಡಿವೆ. ರಷ್ಯಾದ ಕೇಂದ್ರೀಯ ಭದ್ರತಾ ಸಂಸ್ಥೆಯಲ್ಲಿ (Russian Federal Security Service – FSB) ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಈ ಕುರಿತು ‘ಇಂಡಿಪೆಂಡೆಂಟ್’ ಜಾಲತಾಣಕ್ಕೆ ಮಾಹಿತಿ ನೀಡಿದ್ದಾರೆ. ಇದೀಗ 69ರ ಹರೆಯಲ್ಲಿರುವ ಪುಟಿನ್ ಅವರ ಆರೋಗ್ಯ ಹದಗೆಡುತ್ತಿದೆ ಎಂದು ಹೇಳಿರುವ ಅವರು, ಹಲವು ವಿವರಗಳನ್ನೂ ಒದಗಿಸಿದ್ದಾರೆ.

ಆದರೆ ರಷ್ಯಾ ಸರ್ಕಾರ ವ್ಲಾದಿಮಿರ್ ಪುಟಿನ್ ಅವರ ಬಗ್ಗೆ ಬಹಿರಂಗವಾಗಿ, ಅಧಿಕೃತವಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಪುಟಿನ್ ಆರೋಗ್ಯ ಕುರಿತು ಪ್ರತಿಕ್ರಿಯಿಸಿದ್ದ ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸರ್​ಗೆ ಲ್ಯಾವ್​ರೊವ್, ‘ಅಧ್ಯಕ್ಷರ ಆರೋಗ್ಯ ಚೆನ್ನಾಗಿದೆ. ಅವರ ಮುಖಭಾವ ಅಥವಾ ದೇಹಲಕ್ಷಣದಲ್ಲಿ ನೋವಿನ ಸೆಲೆ ಏನೇನೂ ಇಲ್ಲ’ ಎಂದು ಹೇಳಿದರು. ರಷ್ಯಾದ ಗುಪ್ತಚರನಾಗಿ ಈ ಮೊದಲು ಕೆಲಸ ಮಾಡುತ್ತಿದ್ದ ಬೊರಿಸ್ ಕಾರ್​ಪಿಚ್​ಕೊವ್ ಇದೀಗ ಬ್ರಿಟನ್​ನಲ್ಲಿದ್ದಾರೆ. ಅವರೊಂದಿಗೆ ಎಫ್​ಎಸ್​ಬಿ ಅಧಿಕಾರಿ ಮಾತನಾಡುವಾಗ ಹಲವು ವಿವರಗಳು ಬಹಿರಂಗವಾಗಿವೆ ಎಂದು ಹೇಳಲಾಗಿದೆ.

‘ವ್ಲಾದಿಮಿರ್ ಪುಟಿನ್ ಅವರನ್ನು ತಲೆನೋವು ತೀವ್ರವಾಗಿ ಬಾಧಿಸುತ್ತಿದೆ. ಟಿವಿಯಲ್ಲಿ ಮಾತನಾಡಲು ಬರುವಾಗ ಅವರು ಏನು ಮಾತನಾಡಬೇಕು ಎನ್ನುವುದನ್ನು ಸಂಪೂರ್ಣವಾಗಿ ಬರೆದುಕೊಡಬೇಕಾಗುತ್ತದೆ. ಈ ಹಾಳೆಗಳಲ್ಲಿ ಒಂದು ಅಥವಾ ಎರಡು ವಾಕ್ಯಗಳಷ್ಟೇ ಇರುತ್ತವೆ. ಕಣ್ಣಿನ ಸಮಸ್ಯೆಯು ಅವರ ಕಾರ್ಯನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ’ ಎಂದು ಆಸ್ಟ್ರೇಲಿಯಾದ news.com.au ಜಾಲಾತಣವು ಬಿಡುಗಡೆ ಮಾಡಿರುವ ಸಂಭಾಷಣೆಯಲ್ಲಿದೆ.

ಪುಟಿನ್ ಅವರ ಪಕ್ಕೆಲುಬುಗಳು ನಿಯಂತ್ರಣಕ್ಕೆ ಸಿಗದಂತೆ ಅದುರುತ್ತಿವೆ. ಹೊಟ್ಟೆಯಲ್ಲಿ ಸೇರಿದ್ದ ಅನಗತ್ಯ ದ್ರವವನ್ನು ತೆಗೆಸಿಕೊಳ್ಳಲು ಪುಟಿನ್ ಈ ತಿಂಗಳ ಆರಂಭದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು. ಈ ಮಾಹಿತಿಯು ರಷ್ಯಾದ ಗುಪ್ತಚರ ಇಲಾಖೆ ಬಳಸುವ ಟೆಲಿಗ್ರಾಂ ಚಾನೆಲ್​ನಲ್ಲಿ ಹಂಚಿಕೆಯಾಗಿತ್ತು ಎಂದೂ ಮಾಧ್ಯಮಗಳು ವರದಿ ಮಾಡಿವೆ. ‘ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ ಇದೇ ಅಕ್ಟೋಬರ್​ಗೆ 70 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಆರೋಗ್ಯ ಚೆನ್ನಾಗಿದೆ. ಯಾರೋ ಕೆಲ ಕೆಟ್ಟ ಜನರಿಗೆ ಮಾತ್ರ ಅವರ ಆರೋಗ್ಯ ಏರುಪೇರಾಗಿರುವುದು ಕಾಣಿಸುತ್ತಿದೆ. ಪುಟಿನ್ ಹಲವು ಬಾರಿ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೇ, ಟಿವಿಯಲ್ಲಿಯೂ ನಿಯಮಿತವಾಗಿ ಮಾತನಾಡುತ್ತಿದ್ದಾರೆ. ಅವರ ಆರೋಗ್ಯ ಚೆನ್ನಾಗಿಯೇ ಇದೆ’ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಲ್ಯಾವ್​ರೊವ್ ಪುಟಿನ್ ಆರೋಗ್ಯ ಕುರಿತ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.

ಕಳೆದ ಫೆಬ್ರುವರಿ 24ರಂದು ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ ಸೇನೆಯು ಜಾಗತಿಕ ಅಲ್ಲೋಲಕಲ್ಲೋಲ ಉಂಟುಮಾಡಿದೆ. ಯುದ್ಧದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದು, ಲಕ್ಷಾಂತರ ಮಂದಿ ನಿರ್ವಹಿತರಾಗಿ ವಿವಿಧ ದೇಶಗಳನ್ನು ಅಲೆಯುತ್ತಿದ್ದಾರೆ. 2ನೇ ಮಹಾಯುದ್ಧದ ನಂತರ ಇದು ವಿಶ್ವದಲ್ಲಿ ಅತಿದೊಡ್ಡ ನಿರಾಶ್ರಿತರ ಸಮಸ್ಯೆಯನ್ನು ಉಂಟು ಮಾಡಿದೆ. ಹಲವು ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಿವೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada