ಈಜಿಪ್ಟ್‌ನ ಸಕ್ಕಾರದಲ್ಲಿ ಮಮ್ಮಿಗಳೊಂದಿಗೆ 250 ಶವಪೆಟ್ಟಿಗೆಯನ್ನು ಹೊರತೆಗೆದ ಪುರಾತತ್ತ್ವ ಶಾಸ್ತ್ರಜ್ಞರು

ಈಜಿಪ್ಟ್‌ನ ಪ್ರವಾಸೋದ್ಯಮ ಮತ್ತು ಪ್ರಾಚ್ಯವಸ್ತುಗಳ ಸಚಿವಾಲಯವು 250 ಶವಪೆಟ್ಟಿಗೆಗಳು, 150 ಕಂಚಿನ ಪ್ರತಿಮೆಗಳು ಮತ್ತು ಇತರ ವಸ್ತುಗಳು ಸಿಕ್ಕಿದ್ದು ಇವು ಕ್ರಿಸ್ತಪೂರ್ವ 500 ಹಿಂದಿನ ಕಾಲದ್ದಾಗಿದೆ...

ಈಜಿಪ್ಟ್‌ನ ಸಕ್ಕಾರದಲ್ಲಿ ಮಮ್ಮಿಗಳೊಂದಿಗೆ 250 ಶವಪೆಟ್ಟಿಗೆಯನ್ನು ಹೊರತೆಗೆದ ಪುರಾತತ್ತ್ವ ಶಾಸ್ತ್ರಜ್ಞರು
ಈಜಿಪ್ಟ್ ನಲ್ಲಿ ಪತ್ತೆಯಾದ ಮಮ್ಮಿಗಳುImage Credit source: AP
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: May 31, 2022 | 7:23 PM

ಪುರಾತತ್ವ ಶಾಸ್ತ್ರಜ್ಞರು (Archaeologists) ಪ್ರಾಚೀನ ಈಜಿಪ್ಟಿನ (Egypt) ನಿಧಿ ನಿಕ್ಷೇಪವನ್ನು ಪತ್ತೆ ಹಚ್ಚಿದ್ದಾರೆ. ಇಲ್ಲಿ ಸಿಕ್ಕಿರುವ ಪ್ರಾಕ್ತನಕೃತಿ ಕನಿಷ್ಠ 2,500 ವರ್ಷಗಳಷ್ಟು ಹಿಂದಿನವು. ಇವು ಕೈರೋ ಬಳಿಯ ಸಕ್ಕಾರಾದ(Saqqara) ಪ್ರಸಿದ್ಧ ನೆಕ್ರೋಪೊಲಿಸ್‌ನಲ್ಲಿ ಪತ್ತೆಯಾಗಿವೆ. ಪ್ರಾಕ್ತನಕೃತಿಗಳಲ್ಲಿ ಅನುಬಿಸ್, ಅಮುನ್, ಮಿನ್, ಒಸಿರಿಸ್, ಐಸಿಸ್, ನೆಫೆರ್ಟಮ್, ಬ್ಯಾಸ್ಟೆಟ್ ಮತ್ತು ಹಾಥೋರ್ ದೇವರುಗಳ ಪ್ರತಿಮೆಗಳು ಮತ್ತು ಸಕ್ಕಾರಾ ಪಿರಮಿಡ್ ಅನ್ನು ನಿರ್ಮಿಸಿದ ವಾಸ್ತುಶಿಲ್ಪಿ ಇಮ್ಹೋಟೆಪ್​​ನ ತಲೆಯಿಲ್ಲದ ಪ್ರತಿಮೆಗಳು ಸೇರಿವೆ. ಈಜಿಪ್ಟ್‌ನ ಪ್ರವಾಸೋದ್ಯಮ ಮತ್ತು ಪ್ರಾಚ್ಯವಸ್ತುಗಳ ಸಚಿವಾಲಯವು 250 ಶವಪೆಟ್ಟಿಗೆಗಳು, 150 ಕಂಚಿನ ಪ್ರತಿಮೆಗಳು ಮತ್ತು ಇತರ ವಸ್ತುಗಳು ಸಿಕ್ಕಿದ್ದು ಇವು ಕ್ರಿಸ್ತಪೂರ್ವ 500 ಹಿಂದಿನ ಕಾಲದ್ದಾಗಿದೆ ಎಂದು ಹೇಳಿದೆ. ಪ್ರಾಚೀನ ಈಜಿಪ್ಟಿನ ಪುರಾಣಗಳಲ್ಲಿ ಫಲವತ್ತತೆಯ ದೇವತೆಯಾದ ಐಸಿಸ್‌ನ ಆಚರಣೆಗಳಲ್ಲಿ ಬಳಸಲಾಗುವ ಪ್ರಾಚೀನ ದೇವತೆಗಳ ಕಂಚಿನ ಪ್ರತಿಮೆಗಳು ಮತ್ತು ಕಂಚಿನ ಪಾತ್ರೆಗಳನ್ನು ಸಹ ಸಿಕ್ಕಿವೆ ಎಂದು ಪುರಾತನ ವಸ್ತುಗಳ ಸುಪ್ರೀಂ ಕೌನ್ಸಿಲ್ ಮುಖ್ಯಸ್ಥ ಮೊಸ್ತಫಾ ವಜಿರಿ ಹೇಳಿದ್ದಾರೆ.

ಕ್ರಿಸ್ತಪೂರ್ವ 2630  ಮತ್ತು 261 ನಡುವೆ ಪ್ರಾಚೀನ ಈಜಿಪ್ಟ್ ಅನ್ನು ಆಳಿದ ಫರೋ ಡಿಜೋಸರ್ನ ಮುಖ್ಯ ವಾಸ್ತುಶಿಲ್ಪಿ ಇಮ್ಹೋಟೆಪ್​​ನ ತಲೆಯಿಲ್ಲದ ಕಂಚಿನ ಪ್ರತಿಮೆ ಅನ್ನು ಸಹ ಪ್ರದರ್ಶಿಸಲಾಯಿತು. ಪೇಂಟ್ ಮಾಡಿದ ಮರದ ಶವಪೆಟ್ಟಿಗೆಗಳು ಸಮಾಧಿ ಶಾಫ್ಟ್‌ಗಳಲ್ಲಿ ಹಾಗೇ ಕಂಡುಬಂದಿವೆ. ಇವುಗಳು ಮಮ್ಮಿಗಳು, ತಾಯತಗಳು ಮತ್ತು ಮರದ ಪೆಟ್ಟಿಗೆಗಳನ್ನು ಒಳಗೊಂಡಿವೆ. ಹಿಂದಿನ ಅವಧಿಯ ನೆಫ್ತಿಸ್ ಮತ್ತು ಐಸಿಸ್‌ನ ಮರದ ಪ್ರತಿಮೆಗಳು ಸಹ ಕಂಡುಬಂದಿವೆ. ಎರಡೂ ಚಿನ್ನದ ಬಣ್ಣದ ಲೇಪನದ ಮುಖ ಹೊಂದಿದೆ.

ಒಂದು ಶವಪೆಟ್ಟಿಗೆಯಲ್ಲಿ ಚಿತ್ರಲಿಪಿಗಳಲ್ಲಿ ಬರೆಯಲಾದ ಚೆನ್ನಾಗಿ ಸಂರಕ್ಷಿಸಲ್ಪಟ್ಟ ಪಪೈರಸ್ ಇದೆ, ಬಹುಶಃ ಬುಕ್ ಆಫ್ ದಿ ಡೆಡ್​​ನ ಸಾಲುಗಳು ಇದಾಗಿರಬಹುದು. ಈ ಬಗ್ಗೆ ಅಧ್ಯಯನಕ್ಕಾಗಿ ಅದನ್ನು ಕೈರೋದಲ್ಲಿರುವ ಈಜಿಪ್ಟ್ ವಸ್ತುಸಂಗ್ರಹಾಲಯದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮೊಸ್ತಫಾ ವಜಿರಿ ಹೇಳಿದ್ದಾರೆ. ಕೋಲ್ ಕಂಟೈನರ್‌ಗಳು, ಹಾಗೆಯೇ ಕಡಗಗಳು ಮತ್ತು ಕಿವಿಯೋಲೆಗಳು ಸೇರಿದಂತೆ ಸೌಂದರ್ಯವರ್ಧಕಗಳ ಸಂಗ್ರಹವು ಕಂಡುಬಂದಿದೆ.

ಸಕ್ಕಾರಾ ತಾಣವು ಈಜಿಪ್ಟ್‌ನ ಪ್ರಾಚೀನ ರಾಜಧಾನಿ ಮೆಂಫಿಸ್‌ನಲ್ಲಿರುವ ವಿಸ್ತಾರವಾದ ನೆಕ್ರೋಪೊಲಿಸ್‌ನ ಭಾಗವಾಗಿದೆ. ಇದರಲ್ಲಿ ಗಿಝಾ ಪಿರಮಿಡ್‌ಗಳು ಮತ್ತು ಅಬು ಸಿರ್, ದಶೂರ್ ಮತ್ತು ಅಬು ರುವಾಯ್ಶ್‌ನಲ್ಲಿರುವ ಸಣ್ಣ ಪಿರಮಿಡ್‌ಗಳು ಸೇರಿವೆ. ಮೆಂಫಿಸ್‌ನ ಅವಶೇಷಗಳನ್ನು 1970 ರ ದಶಕದಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗೊತ್ತುಪಡಿಸಲಾಯಿತು.

ವಿದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು