ಐರೋಪ್ಯ ರಾಷ್ಟ್ರಗಳ ನಿಷೇಧದ ಹಿನ್ನೆಲೆಯಲ್ಲಿ ರಷ್ಯಾ ಕಚ್ಚಾ ತೈಲವನ್ನು ಭಾರತ ಮತ್ತು ಚೀನಾಗೆ ಮಾರಲು ಬಯಸುತ್ತಿದೆ

ಆದರೆ ಭಾರತ ಮತ್ತು ಚೀನಾನಲ್ಲಿ ಯುರಲ್ ಸಂಸ್ಕರಣೆ ಮಾಡುವ ರಿಫೈನರಿಗಳಿರುವುದರಿಂದ ಅವು ಇನ್ನೂ ಹೆಚ್ಚಿನ ಬ್ಯಾರೆಲ್ ಗಳನ್ನು ಖರೀದಿಸುವ ಕ್ಷಮತೆ ಹೊಂದಿವೆ.

ಐರೋಪ್ಯ ರಾಷ್ಟ್ರಗಳ ನಿಷೇಧದ ಹಿನ್ನೆಲೆಯಲ್ಲಿ ರಷ್ಯಾ ಕಚ್ಚಾ ತೈಲವನ್ನು ಭಾರತ ಮತ್ತು ಚೀನಾಗೆ ಮಾರಲು ಬಯಸುತ್ತಿದೆ
ವ್ಲಾದಿಮಿರ್ ಪುಟಿನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 01, 2022 | 8:25 AM

ರಷ್ಯಾದ ಕಚ್ಚಾ ತೈಲದ ಮೇಲೆ ಯುರೋಪಿಯನ್ ರಾಷ್ಟ್ರಗಳು (European Countries) ಸಂಪೂರ್ಣವಾಗಿ ನಿಷೇಧ ಹೇರಿದರೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರು ಅದನ್ನು ಮಾರಲು ಭಾರತ, ಚೀನಾ ಮತ್ತು ಐರೋಪ್ಯ ರಾಷ್ಟ್ರಗಳ ಹಾಗೆ ಕಚ್ಚಾ ತೈಲವನ್ನು (crude oil) ಖರೀದಿಸಿ ಸಂಸ್ಕರಣ ಮಾಡುವುದನ್ನು ಗೊತ್ತಿರುವ ಕೆಲ ದೇಶಗಳ ಮೊರೆ ಹೋಗಬೇಕಾಗುತ್ತದೆ. ಹಡಗಿನ ಮೂಲಕ ರಫ್ತಾಗುವ ರಷ್ಯಾದ ಕಚ್ಚಾ ತೈಲವನ್ನು ನಿಷೇಧಿಸಲು ಯುರೋಪಿಯನ್ ಯೂನಿಯನ್ ನಾಯಕರು ಸಮ್ಮತಿಸಿದ್ದು, ಇದರಿಂದ ರಷ್ಯಾಗೆ ತನ್ನ ರಫ್ತುಗಳ ಮೇಲೆ 10 ಬಿಲಿಯನ್ ಡಾಲರ್ಗಳಷ್ಟು ನಷ್ಟವಾಗಲಿದೆ.

ಅಂತಿಮವಾಗಿ ಇದು ರಷ್ಯಾದ ಪ್ರಮುಖ ಯುರಲ್ಸ್ ಕಚ್ಚಾ-ಯುರೋಪ್ನಲ್ಲಿ ಜನಪ್ರಿಯವಾಗಿರುವ ತೈಲ ಬ್ರಾಂಡ್ ಮೇಲೆ ಹೊಡೆತ ಬೀಳುವಂತೆ ಮಾಡಲಿದ್ದು ಪುಟಿನ್, ವ್ಯಾಪಾರಕ್ಕೆ ಹೊಸ ದೇಶಗಳನ್ನು ಹುಡುಕುವ ಅವಶ್ಯಕತೆಯಿದೆ. ಆದರೆ ಏಷ್ಯಾದಲ್ಲಿ ಖರೀದಿದಾರ ದೇಶಗಳ ಸಂಖ್ಯೆ ಕಡಿಮೆ. ಏಕೆಂದರೆ ಹೆಚ್ಚಿನ ಸಲ್ಫ್ಯೂರಿಕ್ ತೈಲವನ್ನು ನಿರ್ವಹಿಸಲು ಅತ್ಯಾಧುನಿಕ ಸಂಸ್ಕರಣೆ ಮತ್ತು ಮಿಶ್ರಣ ಸಾಮರ್ಥ್ಯಗಳನ್ನು ಹೊಂದಿರದ ಶ್ರೀಲಂಕಾ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ಗ್ರೇಡ್ ಅನ್ನು ದೊಡ್ಡ ಪ್ರಮಾಣದಲ್ಲಿ ಸುಲಭವಾಗಿ ಸಂಸ್ಕರಿಸಲಾಗುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಆದರೆ ಭಾರತ ಮತ್ತು ಚೀನಾನಲ್ಲಿ ಯುರಲ್ ಸಂಸ್ಕರಣೆ ಮಾಡುವ ರಿಫೈನರಿಗಳಿರುವುದರಿಂದ ಅವು ಇನ್ನೂ ಹೆಚ್ಚಿನ ಬ್ಯಾರೆಲ್ ಗಳನ್ನು ಖರೀದಿಸುವ ಕ್ಷಮತೆ ಹೊಂದಿವೆ. ಕಳೆದ ಕೆಲ ತಿಂಗಳುಗಳಿಂದ ಲಾಕ್ ಡೌನ್ ಗೆ ಒಳಗಾಗಿದ್ದ ಶಾಂಘೈ ನಗರದ ಸರ್ಕಾರೀ ಮತ್ತು ಖಾಸಗಿ ರಿಫೈನರಿಗಳಲ್ಲಿ ತೈಲ ಕೊಳ್ಳುವ ಬಗ್ಗೆ ಇಂಗದ ದಾಹ ಸೃಷ್ಟಿಯಾಗಿದೆ. ಹಾಗಾಗಿ, ಹೆಚ್ಚಿನ ಪ್ರಮಾಣದ ಕಚ್ಚಾ ತೈಲಕ್ಕಾಗಿ ಚೀನಾದ ರಿಫೈನರಿಗಳು ರಷ್ಯಾದತ್ತ ಮುಖ ಮಾಡಿದ್ದರೆ ಆಶ್ಚರ್ಯವಿಲ್ಲ.

ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ, ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ ಐರೋಪ್ಯ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದ ಮೇಲೆ ಭಾರತ ಮತ್ತು ಚೀನಾ ಅಲ್ಲಿಗೆ ಹೋಗುತ್ತಿದ್ದ ತೈಲಲನ್ನು ಖರೀದಿಸಲಾರಂಭಿಸಿದ್ದರಿಂದ ಈ ಎರಡು ದೇಶಗಳು ಹೊಸ ಸ್ಟಾಕ್ ಖರೀದಿಸಲು ಮುಂದಾದರೂ ಒಂದು ಸೀಮಿತ ಪ್ರಮಾಣದಲ್ಲಿ ಮಾತ್ರ ಖರೀದಿಸಲು ಶಕ್ಯವಾಗುತ್ತವೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ