AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಫಾ ವಿಶ್ವಕಪ್​ಗೂ ಮುನ್ನ 30 ಲಕ್ಷ ಬೀದಿ ನಾಯಿಗಳ ಕ್ರೂರ ಹತ್ಯೆಗೆ ಮೊರಾಕೊ ನಿರ್ಧಾರ; ಏನಿದಕ್ಕೆ ಕಾರಣ?

ಮೊರಾಕೊ 3 ಮಿಲಿಯನ್ ಬೀದಿ ನಾಯಿಗಳನ್ನು ಸಾಧ್ಯವಾದಷ್ಟು ಕ್ರೂರ ರೀತಿಯಲ್ಲಿ ಕೊಲ್ಲಲು ಪ್ಲಾನ್ ಮಾಡುತ್ತಿದೆ. ಮೊರಾಕೊದಲ್ಲಿ ಫಿಫಾ ವಿಶ್ವಕಪ್ ಅಭಿಯಾನ ಆರಂಭವಾಗುವ ಮುನ್ನ ಲಕ್ಷಾಂತರ ಬೀದಿ ನಾಯಿಗಳನ್ನು ಸಾಮೂಹಿಕ ಹತ್ಯೆಗೆ ಗುರಿ ಮಾಡಲಾಗುತ್ತಿರುವುದಕ್ಕೆ ಕಾರಣವೇನು? ಎಂಬ ಕುರಿತು ಮಾಹಿತಿ ಇಲ್ಲಿದೆ. ಸ್ಪೇನ್ ಮತ್ತು ಪೋರ್ಚುಗಲ್ ಜೊತೆಗೆ 2030ರ ಫಿಫಾ ವಿಶ್ವಕಪ್​ನ ಆತಿಥ್ಯ ವಹಿಸಲಿರುವ ಮೊರಾಕೊ ಬೀದಿ ನಾಯಿಗಳನ್ನು ಕ್ರೂರವಾಗಿ ಕೊಲ್ಲಲು ನಿರ್ಧರಿಸಿರುವುದಕ್ಕೆ ಜಾಗತಿಕವಾಗಿ ಟೀಕೆ ಎದುರಿಸುತ್ತಿದೆ.

ಫಿಫಾ ವಿಶ್ವಕಪ್​ಗೂ ಮುನ್ನ 30 ಲಕ್ಷ ಬೀದಿ ನಾಯಿಗಳ ಕ್ರೂರ ಹತ್ಯೆಗೆ ಮೊರಾಕೊ ನಿರ್ಧಾರ; ಏನಿದಕ್ಕೆ ಕಾರಣ?
Dogs
ಸುಷ್ಮಾ ಚಕ್ರೆ
|

Updated on:Jan 17, 2025 | 3:22 PM

Share

ನವದೆಹಲಿ: 2030ರ ಫಿಫಾ ವಿಶ್ವಕಪ್ ಅನ್ನು ಆಯೋಜಿಸಲು ಮೊರಾಕೊ ಸಿದ್ಧವಾಗುತ್ತಿದ್ದಂತೆ ಸುಮಾರು 3 ಮಿಲಿಯನ್ ನಾಯಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ ಎಂಬ ವರದಿಗಳು ಜಗತ್ತಿನಾದ್ಯಂತ ಟೀಕೆಗೆ ಕಾರಣವಾಗಿದೆ. ಬೀದಿ ನಾಯಿಗಳಿಗೆ ಸ್ಟ್ರೈಕ್ನೈನ್ ಅನ್ನು ಚುಚ್ಚುಮದ್ದಿನ ಮೂಲಕ ಕೊಲ್ಲಲಾಗುತ್ತಿದೆ ಎಂದು ವರದಿಗಳು ಹೇಳುತ್ತವೆ. ಇದು ಅತ್ಯಂತ ವಿಷಕಾರಿ ರಾಸಾಯನಿಕವಾಗಿದೆ.

2030ರ ಫಿಫಾ ವಿಶ್ವಕಪ್‌ಗೆ ಮುಂಚಿತವಾಗಿ 30 ಲಕ್ಷ ಬೀದಿನಾಯಿಗಳನ್ನು ಕೊಲ್ಲಲು ಮೊರಾಕೊ ಪ್ಲಾನ್ ಮಾಡುತ್ತಿದೆ ಎಂದು ವರದಿಗಳು ಸೂಚಿಸುತ್ತವೆ. ಮೊರಾಕೊ, ಸ್ಪೇನ್ ಮತ್ತು ಪೋರ್ಚುಗಲ್ ಎಂಬ 3 ದೇಶಗಳಲ್ಲಿ ನಡೆಯಲಿರುವ ಮುಂದಿನ ಫುಟ್ಬಾಲ್ ವಿಶ್ವಕಪ್‌ಗಾಗಿ ಮೊರಾಕೊದ ನಗರಗಳಿಗೆ ಭೇಟಿ ನೀಡುವ ಫುಟ್‌ಬಾಲ್ ಅಭಿಮಾನಿಗಳಿಗೆ ಮೊರಾಕೊ ನಗರ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು ನಾಯಿಗಳ ಹತ್ಯೆಯ ಮೂಲಕ ಬೀದಿನಾಯಿ ಮುಕ್ತ ರಸ್ತೆಗಳನ್ನು ಸಿದ್ಧಪಡಿಸುವ ಕಾರ್ಯಕ್ಕೆ ಮೊರಾಕೊ ನಿರ್ಧರಿಸಿದೆ.

ಈ ಕಾರ್ಯ ಜಾಗತಿಕವಾಗಿ ಆಕ್ರೋಶವನ್ನು ಹುಟ್ಟುಹಾಕಿವೆ. ಏಕೆಂದರೆ, ಈ ವರದಿಗಳು ‘ಕ್ರೂರ’ ಮತ್ತು ‘ಆಘಾತಕಾರಿ’ ಎಂದು ಟೀಕೆಗೆ ಒಳಗಾಗಿವೆ. ಕೆಲವು ವರದಿಗಳು ಉತ್ತರ ಆಫ್ರಿಕಾದ ರಾಷ್ಟ್ರವು ನಾಯಿಗಳನ್ನು ಕೊಲ್ಲುವ ಮೂಲಕ ಬೀದಿಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದೆ ಎಂದು ಹೇಳುತ್ತವೆ. ಈಗಾಗಲೇ ದೇಶದ ಹಲವಾರು ಸ್ಥಳಗಳಲ್ಲಿ ನಾಯಿಗಳನ್ನು ಕೊಲ್ಲಲಾಗುತ್ತಿದೆ.

ಇದನ್ನೂ ಓದಿ: Boat Tragedy: ಮೊರಾಕೊದ ಸಮುದ್ರದಲ್ಲಿ ದೋಣಿ ಮಗುಚಿ 40 ಪಾಕಿಸ್ತಾನಿಗಳು ಸೇರಿ 50 ಮಂದಿ ಸಾವು

ಡೈಲಿ ಮೇಲ್ ವರದಿಯ ಪ್ರಕಾರ, ಪ್ರಸಿದ್ಧ ಪ್ರಾಣಿ ಹಕ್ಕುಗಳ ಪ್ರಚಾರಕಿ ಜೇನ್ ಗುಡಾಲ್, ಅಂತಾರಾಷ್ಟ್ರೀಯ ಫುಟ್ಬಾಲ್ ಅಸೋಸಿಯೇಷನ್ ​​ಜೊತೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಫುಟ್ಬಾಲ್ ಅಸೋಸಿಯೇಷನ್ ಈ ಬೆಳವಣಿಗೆಯ ಬಗ್ಗೆ ಕಣ್ಣು ಮುಚ್ಚಿಕೊಂಡಿದೆ ಎಂದು ಆರೋಪಿಸಿದ್ದಾರೆ ಮತ್ತು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

FIFA ವಿಶ್ವಕಪ್ ಪ್ರತಿ 4 ವರ್ಷಗಳಿಗೊಮ್ಮೆ ಬರುತ್ತದೆ. ಈ ಪಂದ್ಯವನ್ನು ವೀಕ್ಷಿಸಲು ಜಗತ್ತಿನಾದ್ಯಂತ ಪ್ರೇಕ್ಷಕರು ಬರುತ್ತಾರೆ. ಇದು ಪ್ರಪಂಚದಾದ್ಯಂತದ ಶತಕೋಟಿ ಅಭಿಮಾನಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಭಾರೀ ಗಮನವನ್ನು ಸೆಳೆಯುತ್ತದೆ. ಹೀಗಾಗಿ, ದೇಶಗಳು ಆತಿಥೇಯ ಹಕ್ಕುಗಳನ್ನು ಪಡೆದ ನಂತರ ತಮ್ಮ ಕೈಲಾದಷ್ಟು ಪ್ರೇಕ್ಷಕರ ಮನಸಿಗೆ ಇಷ್ಟವಾಗುವಂತೆ ತಯಾರಿಗಳನ್ನು ಮಾಡುತ್ತವೆ.

ಇದನ್ನೂ ಓದಿ: ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ

ಮೊರಾಕೊದ ಬೀದಿ ನಾಯಿಗಳನ್ನು ಕೀಟನಾಶಕವಾಗಿ ಬಳಸುವ ಅತ್ಯಂತ ವಿಷಕಾರಿ ರಾಸಾಯನಿಕವಾದ ಸ್ಟ್ರೈಕ್ನೈನ್ ಅನ್ನು ಇಂಜೆಕ್ಷನ್ ಮೂಲಕ ನೀಡಿ ಕೊಲ್ಲಲಾಗುತ್ತಿದೆ, ನಾಯಿಗಳನ್ನು ಬೀದಿಗಳಲ್ಲಿ ಗುಂಡು ಹಾರಿಸಲಾಗುತ್ತಿದೆ ಅಥವಾ ಸೆರೆಹಿಡಿದು ಕಸಾಯಿಖಾನೆಗಳಿಗೆ ಕಳುಹಿಸಲಾಗುತ್ತಿದೆ. ಇದಕ್ಕೂ ಮೊದಲು, ಮೊರಾಕೊದ ಅಧಿಕಾರಿಗಳು 2024ರಲ್ಲಿ ನಾಯಿಗಳ ಹತ್ಯೆ ನಿಲ್ಲಿಸಲಾಗಿದೆ ಎಂದು ಹೇಳಿದ್ದರು. ಆದರೆ, 2023ರಲ್ಲಿ ಉತ್ತರ ಆಫ್ರಿಕಾದ ಮೊರಾಕೊ ದೇಶಕ್ಕೆ ಆತಿಥ್ಯ ವಹಿಸುವ ಹಕ್ಕುಗಳನ್ನು ನೀಡುವ FIFA ಘೋಷಣೆಯ ನಂತರ ಆ ದೇಶದಲ್ಲಿ ನಾಯಿಗಳ ಹತ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ವರದಿಗಳು ಸುಳಿವು ನೀಡಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Fri, 17 January 25

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ