Boat Tragedy: ಮೊರಾಕೊದ ಸಮುದ್ರದಲ್ಲಿ ದೋಣಿ ಮಗುಚಿ 40 ಪಾಕಿಸ್ತಾನಿಗಳು ಸೇರಿ 50 ಮಂದಿ ಸಾವು

ಮೊರಾಕೊದ ಸಮುದ್ರದಲ್ಲಿ ದೋಣಿ ಮಗುಚಿದ ಪರಿಣಾಮ 50 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ 40 ಮಂದಿ ಪಾಕಿಸ್ತಾನಿಗಳು ಎಂದು ತಿಳಿಸಿದ್ದಾರೆ. 50ಕ್ಕೂ ಹೆಚ್ಚು ವಲಸಿಗರು ಅಪಘಾತದಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ಇದೆ ಎಂದು ವಲಸೆ ಹಕ್ಕುಗಳ ಗುಂಪು 'ವಾಕಿಂಗ್ ಬಾರ್ಡರ್ಸ್' ಹೇಳಿದೆ. ಮೃತರ ಗುರುತುಗಳನ್ನು ದೃಢೀಕರಿಸಲು ಮತ್ತು ಬದುಕುಳಿದವರಿಗೆ ನೆರವು ನೀಡಲು ಪ್ರಯತ್ನಗಳು ನಡೆಯುತ್ತಿವೆ. ಈ ಭೀಕರ ಘಟನೆಯ ನಂತರ ಪರಿಸ್ಥಿತಿಯನ್ನು ನಿಭಾಯಿಸಲು ಮೊರಾಕೊ ಮತ್ತು ಪಾಕಿಸ್ತಾನ ಎರಡೂ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

Boat Tragedy: ಮೊರಾಕೊದ ಸಮುದ್ರದಲ್ಲಿ ದೋಣಿ ಮಗುಚಿ 40 ಪಾಕಿಸ್ತಾನಿಗಳು ಸೇರಿ 50 ಮಂದಿ ಸಾವು
Image Credit source: Hum News English
Follow us
ನಯನಾ ರಾಜೀವ್
|

Updated on: Jan 17, 2025 | 10:51 AM

80 ವಲಸಿಗರನ್ನು ಹೊತ್ತು ಅಕ್ರಮವಾಗಿ ಸ್ಪೇನ್​ಗೆ ತೆರಳಲು ಪ್ರಯತ್ನಿಸುತ್ತಿದ್ದ ದೋಣಿ ಮೊರಾಕೊದ ಸಮುದ್ರದಲ್ಲಿ ಮಗುಚಿದ ಪರಿಣಾಮ 40 ಪಾಕಿಸ್ತಾನಿಗಳು ಸೇರಿ ಒಟ್ಟು 50 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೊರೊಕನ್ ಅಧಿಕಾರಿಗಳು ದೋಣಿ ಮೂಲಕ 30 ಜನರನ್ನು ರಕ್ಷಿಸಿದರು. ಈ ದೋಣಿ ಜನವರಿ 2 ರಂದು ಮಾರಿಷಸ್‌ನಿಂದ ಹೊರಟಿತ್ತು.

50ಕ್ಕೂ ಹೆಚ್ಚು ವಲಸಿಗರು ಅಪಘಾತದಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ಇದೆ ಎಂದು ವಲಸೆ ಹಕ್ಕುಗಳ ಗುಂಪು ‘ವಾಕಿಂಗ್ ಬಾರ್ಡರ್ಸ್’ ಹೇಳಿದೆ. ಮೃತರ ಗುರುತುಗಳನ್ನು ದೃಢೀಕರಿಸಲು ಮತ್ತು ಬದುಕುಳಿದವರಿಗೆ ನೆರವು ನೀಡಲು ಪ್ರಯತ್ನಗಳು ನಡೆಯುತ್ತಿವೆ. ಈ ಭೀಕರ ಘಟನೆಯ ನಂತರ ಪರಿಸ್ಥಿತಿಯನ್ನು ನಿಭಾಯಿಸಲು ಮೊರಾಕೊ ಮತ್ತು ಪಾಕಿಸ್ತಾನ ಎರಡೂ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

ಘಟನೆ ಕುರಿತು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿಕೆ ನೀಡಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಲು ಮೊರಾಕೊದಲ್ಲಿರುವ ತನ್ನ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಪಾಕಿಸ್ತಾನ ಹೇಳಿದೆ. ಹೆಚ್ಚುವರಿಯಾಗಿ, ಪಾಕಿಸ್ತಾನಿ ಪ್ರಜೆಗಳಿಗೆ ಸಹಾಯ ಮಾಡಲು ಮತ್ತು ಅಗತ್ಯ ನೆರವು ನೀಡಲು ಮೊರಾಕೊದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯ ತಂಡವನ್ನು ದಖ್ಲಾಗೆ ಕಳುಹಿಸಲಾಗಿದೆ.

ಮತ್ತಷ್ಟು ಓದಿ:ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಹಡಗು ಮಗುಚಿ 13 ಜನ ಸಾವು, 101 ಮಂದಿಯ ರಕ್ಷಣೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿನ ಬಿಕ್ಕಟ್ಟು ನಿರ್ವಹಣಾ ಘಟಕವನ್ನು ಸಹ ಸಕ್ರಿಯಗೊಳಿಸಲಾಗಿದೆ. ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವರು ಸಂತ್ರಸ್ತ ಪಾಕಿಸ್ತಾನಿಗಳಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಸಂಬಂಧಿತ ಸರ್ಕಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ. ಮೌರಿಟಾನಿಯಾದಿಂದ ಹೊರಟಿದ್ದ ಹಲವಾರು ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ 80 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮೊರೊಕ್ಕನ್ ಬಂದರಿನ ದಖ್ಲಾದಲ್ಲಿ ಮಗುಚಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ
ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ
ಈ ಸೀಸನ್​ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳ ಮರು ಎಂಟ್ರಿ; ಜಗದೀಶ್​ ಕಥೆ ಏನು?
ಈ ಸೀಸನ್​ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳ ಮರು ಎಂಟ್ರಿ; ಜಗದೀಶ್​ ಕಥೆ ಏನು?
ತಪ್ಪಾದ ಬಸ್ ಹತ್ತಿ ಹೋದ 5 ವರ್ಷದ ಬಾಲಕ, ಮುಂದೇನಾಯ್ತು?
ತಪ್ಪಾದ ಬಸ್ ಹತ್ತಿ ಹೋದ 5 ವರ್ಷದ ಬಾಲಕ, ಮುಂದೇನಾಯ್ತು?
Daily Devotional: ಯಾವ ರಾಶಿಯವರು ಯಾವ ಉದ್ಯೋಗ ಮಾಡಿದರೆ ಉತ್ತಮ?
Daily Devotional: ಯಾವ ರಾಶಿಯವರು ಯಾವ ಉದ್ಯೋಗ ಮಾಡಿದರೆ ಉತ್ತಮ?
ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಬೀದರ್​: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ
ಬೀದರ್​: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ
ದರ್ಶನ್ ಭೇಟಿಗೆ ಬಂದರೆ ಒಪ್ಪುತ್ತೀರಾ? ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
ದರ್ಶನ್ ಭೇಟಿಗೆ ಬಂದರೆ ಒಪ್ಪುತ್ತೀರಾ? ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ
ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ
ಗೃಹ ಸಚಿವ ಸ್ಟ್ಯಾಂಡಿಂಗ್ ಇನ್ಸಸ್ಟ್ರಕ್ಷನ್​ಗಳ ಬಗ್ಗೆ ಮಾತ್ರ ಮಾತಾಡುತ್ತಾರೆ
ಗೃಹ ಸಚಿವ ಸ್ಟ್ಯಾಂಡಿಂಗ್ ಇನ್ಸಸ್ಟ್ರಕ್ಷನ್​ಗಳ ಬಗ್ಗೆ ಮಾತ್ರ ಮಾತಾಡುತ್ತಾರೆ
ತಮ್ಮ ಬದಲು ರಮೇಶ್ ಜಾರಕಿಹೊಳಿಯನ್ನು ಮಾತಾಡಲು ಬಿಟ್ಟರೇ ಯತ್ನಾಳ್?
ತಮ್ಮ ಬದಲು ರಮೇಶ್ ಜಾರಕಿಹೊಳಿಯನ್ನು ಮಾತಾಡಲು ಬಿಟ್ಟರೇ ಯತ್ನಾಳ್?