ಮಂಗಳೂರು, (ಡಿಸೆಂಬರ್ 28): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Mangaluru Airport) ಹುಸಿ ಬಾಂಬ್ ಇ-ಮೇಲ್ ಸಂದೇಶಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಡಿಸೆಂಬರ್ 26ರಂದು ಮಂಗಳೂರು ಏರ್ಪೋರ್ಟ್ ನಲ್ಲಿ ಬಾಂಬ್ ಇಟ್ಟಿರುವುದಾಗಿ xonocikonoci10@beeble.com ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿತ್ತು. ಈ ಸಂಬಂಧ ಅದಾನಿ ಆಡಳಿತದ ಮಂಗಳೂರು ಏರ್ಪೋರ್ಟ್ ಸಂಸ್ಥೆ ಬಜಪೆ ಠಾಣೆಗೆ ದೂರು ನೀಡಿತ್ತು. ಇದೀಗ ನ್ಯಾಯಾಲಯದ ಅನುಮತಿ ಪಡೆದುಕೊಂಡು ಐಪಿಸಿ 507 ಅಡಿ ಪ್ರಕರಣ ದಾಖಲಾಗಿದೆ.
ಮಂಗಳೂರು ಏರ್ಪೋರ್ಟ್ ನಲ್ಲಿ ಬಾಂಬ್ ಇಟ್ಟಿರುವುದಾಗಿ xonocikonoci10@beeble.com ಮೇಲ್ ಐಡಿಯಿಂದ ಡಿಸೆಂಬರ್ 26ರಂದು ಬೆದರಿಕೆ ಸಂದೇಶ ಬಂದಿತ್ತು. ‘FUNING’ ಎಂಬ ಉಗ್ರಗಾಮಿ ಸಂಘಟನೆ ಎಂದು ಘೋಷಿಸಿಕೊಂಡು ಬೆದರಿಕೆ ಹಾಕಲಾಗಿತ್ತು. ಆದ್ರೆ, ಮಂಗಳೂರು ಏರ್ಪೋರ್ಟ್ ಆಡಳಿತ ಮಂಡಳಿ ಡಿಸೆಂಬರ್ .27ರಂದು ಇ-ಮೇಲ್ ಗಮನಿಸಿ ಅಲರ್ಟ್ ಆಗಿದ್ದು, ಭದ್ರತಾ ತಂಡ ಏರ್ಪೋರ್ಟ್ ನಲ್ಲಿ ತೀವ್ರ ತಪಾಸಣೆ ನಡೆಸಿತ್ತು. ಅಲ್ಲದೇ ಸಿಐಎಸ್ ಎಫ್ ಹಾಗೂ ಬಜಪೆ ಪೊಲೀಸರು ಸಹ ತೀವ್ರ ಶೋಧ ನಡೆಸಿದ್ದರು.
ಕೊನೆಗೆ ಇದರೊಂದು ಹುಸಿ ಬಾಂಬ್ ಕರೆ ಎಂದು ಖಾತ್ರಿಯಾಗಿತ್ತು. ಬಳಿಕ ಮಂಗಳೂರು ವಿಮಾನ ನಿಲ್ದಾಣ ಆಡಳಿ ಮಂಡಳಿ ಈ ಬಗ್ಗೆ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಇದೀಗ ನ್ಯಾಯಾಲಯದ ಅನುಮತಿಯಿಂದ ಐಪಿಸಿ 507 ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.
ಮಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:32 pm, Thu, 28 December 23