ಕಲಾಯಿ ಅಶ್ರಫ್ ಹತ್ಯೆಗೆ ಪ್ರತೀಕಾರದ ಪೋಸ್ಟ್​​: 16 ಇನ್ಸ್ಟಾಗ್ರಾಮ್ ಖಾತೆ ವಿರುದ್ಧ FIR

ಕಲಾಯಿ ಅಶ್ರಫ್ ಹತ್ಯೆಗೆ ಪ್ರತೀಕಾರದ ಸಂದೇಶಗಳು ಇನ್ಸ್ಟಾಗ್ರಾಮ್​​ನಲ್ಲಿ ಹರಿದಾಡುತ್ತಿವೆ. ಆರೋಪಿ ಭರತ್ ಕುಮ್ಡೇಲ್​ಗೆ ಬೆದರಿಕೆ ಹಾಕಿರುವ 16 ಇನ್ಸ್ಟಾಗ್ರಾಮಮ್​​ ಖಾತೆಗಳ ವಿರುದ್ಧ ಮಂಗಳೂರು ಪೊಲೀಸರು FIR ದಾಖಲಿಸಿದ್ದಾರೆ. ಇಂತಹ ಪ್ರಚೋದನಕಾರಿ ಪೋಸ್ಟ್‌ಗಳ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕಲಾಯಿ ಅಶ್ರಫ್ ಹತ್ಯೆಗೆ ಪ್ರತೀಕಾರದ ಪೋಸ್ಟ್​​: 16 ಇನ್ಸ್ಟಾಗ್ರಾಮ್ ಖಾತೆ ವಿರುದ್ಧ FIR
ಇನ್ಸ್ಟಾಗ್ರಾಮ್ ಪೋಸ್ಟ್​​ಗಳು
Updated By: ಪ್ರಸನ್ನ ಹೆಗಡೆ

Updated on: Dec 09, 2025 | 4:13 PM

ಮಂಗಳೂರು, ಡಿಸೆಂಬರ್​ 09: ಸಾಮಾಜಿಕ ಜಾಲತಾಣದಲ್ಲಿ ಕಲಾಯಿ ಅಶ್ರಫ್ ಹತ್ಯೆಗೆ ಪ್ರತೀಕಾರದ ಬಗ್ಗೆ ಸಂದೇಶಗಳು ಓಡಾಡುತ್ತಿದ್ದು, Target 900, Team Target Boys, Immu Bai ಇನ್ಸ್ಟಾಗ್ರಾಮ್ ಪೇಜ್​​ಗಳಲ್ಲಿ ಭಯ ಹುಟ್ಟಿಸುತ್ತಿರುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿದೆ. 2017ರಲ್ಲಿ ನಡೆದ ಎಸ್​ಡಿಪಿಐ ಮುಖಂಡ ಕಲಾಯಿ ಅಶ್ರಫ್ ಹತ್ಯೆ ಪ್ರಮುಖ ಆರೋಪಿ, ಹಿಂದೂ ಸಂಘಟನೆಯ ಮುಖಂಡ ಭರತ್ ಕುಮ್ಡೇಲ್​​​ಗೆ ಈ ಮೂಲಕ ಎಚ್ಚರಿಕೆ ನೀಡಲಾಗಿದೆ.

16 ಇನ್ಸ್ಟಾಗ್ರಾಮ್​​ ಖಾತೆಗಳ ಮೇಲೆ ಎಫ್​ಐಆರ್​

Revange Is Loading , Target Set One By One ಎಂಬ ಸಂದೇಶ ಇರುವ ಪೋಸ್ಟ್​​ ಮಾಡಲಾಗಿದ್ದು, ಕೈಯಲ್ಲಿ ತಲವಾರು ಮತ್ತು ಪಿಸ್ತೂಲ್ ಹಿಡಿದು ಮುಖ ಮರೆಮಾಚಿ ಮಾಡಿರುವ ರೀಲ್ಸ್ ಕೂಡ ಪೋಸ್ಟ್​​ ಮಾಡಲಾಗಿದೆ. ಇತ್ತೀಚೆಗೆ ಕೇರಳದಲ್ಲಿ ಹತ್ಯೆಯಾದ ರೌಡಿಶೀಟರ್ ನೌಫಾಲ್ ಸಾವಿಗೂ ಪ್ರತೀಕಾರದ‌ ಎಚ್ಚರಿಕೆ ನೀಡಲಾಗಿದೆ. ಭರತ್ ಕುಮ್ಡೇಲ್ ಸದ್ಯ ಮಂಗಳೂರು ಜೈಲಿನಲ್ಲಿದ್ದು, ಪ್ರಚೋದನಾಕಾರಿ ಇನ್ಸ್ಟಾಗ್ರಾಮ್​​ ಪೋಸ್ಟ್​ಗಳ ಮೇಲೆ ಮಂಗಳೂರು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಸುಮೋಟೊ ಕೇಸ್​​ ದಾಖಲಿಸಿರುವ ಖಾಕಿ, 16 ಇನ್ಸ್ಟಾಗ್ರಾಮ್​​ ಖಾತೆಗಳ ವಿರುದ್ಧ ಎಫ್​ಐಆರ್​ ಮಾಡಿದೆ. ಜೊತೆಗೆ ಆಯಕಟ್ಡಿನ ಜಾಗಗಳ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ನಟೋರಿಯಸ್ ಗ್ಯಾಂಗ್​​ಗಳ ಚಲನವಲನಗಳನ್ನೂ ಗಮನಿಸಲಾಗುತ್ತಿದೆ.

ಇದನ್ನೂ ಓದಿ: ಅಶ್ರಫ್ ಕಲಾಯಿ, ಅಬ್ದುಲ್ ರಹಿಮಾನ್ ಕೊಲೆ ಕೇಸ್ ಆರೋಪಿ ಭರತ್ ಕುಮ್ಡೇಲು ಶರಣಾಗತಿ

ಈ ಹಿಂದೆಯೂ ಭರತ್ ಕುಮ್ಡೇಲ್​​ಗೆ ಸಾಮಾಜಿಕ ತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿತ್ತು. BEARY_ROYAL_NAWAB, ಬ್ಯಾರಿ ಟ್ರೋಲರ್, ಮಂಗಳೂರು ಕಿಂಗ್ ಎಂಬ ಹೆಸರಿನ ಪೇಜ್​ಗಳ ಮುಖಾಂತರ ಎಚ್ಚರಿಕೆಯ ಸಂದೇಶ ಬಂದಿತ್ತು. ಭರತ್‌ ಕುಮ್ಡೇಲ್​​​ ರಕ್ತ ಈ ಭೂಮಿಗೆ ಹರಿಸದೆ ನಮಗೆ ಸಮಾಧಾನವಿಲ್ಲ. ನಮ್ಮ ಸಹೋದರ ಶಾಹಿದ್ ಅಶ್ರಫ್ ಕಲಾಯಿಯನ್ನು ಮರೆತಿಲ್ಲ, ಪ್ರತಿರೋಧ ಅಪರಾಧವಲ್ಲ ಎಂದು ಪೋಸ್ಟ್​​ ಮಾಡಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.