ಮಂಗಳೂರು: ಸ್ವಾತಂತ್ರ್ಯ ರಥಕ್ಕೆ ಅಡ್ಡಿ ಪ್ರಕರಣಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ಕಬಕದಲ್ಲಿ ವೀರಸಾರ್ವಕರ್ ಫೋಟೋ ತೆಗೆಯಲು ಹೇಳಿ ದಾಂಧಲೆ ಮಾಡಿದ್ದಾರೆ. ಇಡೀ ದೇಶ ಸ್ವಾತಂತ್ರ್ಯ ದಿನ ಆಚರಿಸುವಂದು ಕೆಲವರು ದಾಂಧಲೆ ನಡೆಸಿದ್ದಾರೆ. ಈ ವಿಚಾರವನ್ನು ಗೃಹಮಂತ್ರಿಗಳು ಮತ್ತು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ. ಸ್ವಾತಂತ್ರೋತ್ಸವ ರಥಕ್ಕೆ ಅಡ್ಡಹಾಕುವ ತಾಲಿಬಾನಿ ಸಂಸ್ಕೃತಿಯನ್ನ ದ.ಕ ಜಿಲ್ಲೆಯಲ್ಲಿ ನಡೆಯಲು ಬಿಡಲ್ಲ. ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತದೆ. ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲು ಗೃಹಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಜಿಲ್ಲೆಯ ಪುತ್ತೂರಿನ ಕಬಕದಲ್ಲಿ ಸ್ವಾತಂತ್ರ್ಯ ರಥಕ್ಕೆ ಎಸ್ಡಿಪಿಐನಿಂದ ಅಡ್ಡಿ ವಿಚಾರವಾಗಿ ಸ್ಥಳಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ಕೊಟ್ಟಿದ್ದಾರೆ. ಕಬಕ ಭಾಗದ ಮತೀಯವಾದಿಗಳು ರಥಕ್ಕೆ ತಡೆ ಒಡ್ಡಿದ್ದಾರೆ. ಮತೀಯವಾದಿ ದೇಶದ್ರೋಹಿಗಳನ್ನ ಬಂಧಿಸಿ ಗಡಿಪಾರು ಮಾಡಬೇಕು. ಭಟ್ಕಳ, ಕಾಸರಗೋಡಿನ ಮತೀಯ ಸಂಘಟನೆಗಳ ಪಿತೂರಿ ಇದಾಗಿದೆ. ಸಮರ್ಪಕ ತನಿಖೆ ನಡೆಸಲು ಪ್ರಕರಣವನ್ನು ಎನ್ಐಎಗೆ ಕೊಡಬೇಕು. ಕಬಕ ಕಾಶ್ಮೀರ ಆಗೋದನ್ನ ಸಹಿಸುವುದಿಲ್ಲ ಎಂದು ಸಂಜೀವ ಮಠಂದೂರು ಹೇಳಿಕೆ ನೀಡಿದ್ದಾರೆ.
ಘಟನಾಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಬಳಿಕ ಪುತ್ತೂರು ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ಬಂಧನಕ್ಕೆ ಆಗ್ರಹ ವ್ಯಕ್ತಪಡಿಸಿದ್ದಾರೆ. ತಕ್ಷಣ ಕೇಸು ದಾಖಲಿಸಿ ಬಂಧಿಸದೇ ಇದ್ರೆ ಪ್ರತಿಭಟನೆ ನಡೆಸೋ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಸೂಚನೆ ಮೇರೆ ದೇಶಭಕ್ತರ ಫೋಟೋಗಳನ್ನು ಪಂಚಾಯತ್ ಅಳವಡಿಸಿತ್ತು. ಆದರೆ ಕಬಕ ಭಾಗದ ಮತೀಯವಾದಿ ಕಿಡಿಗೇಡಿಗಳು ರಥಕ್ಕೆ ತಡೆ ಒಡ್ಡಿದ್ದಾರೆ. ಈ ಮತೀಯವಾದಿ ದೇಶದ್ರೋಹಿಗಳನ್ನ ಬಂಧಿಸಿ ಗಡಿಪಾರು ಮಾಡಬೇಕು. ಯಾವುದೇ ಸಂಘಟನೆ ಆಗಿದ್ದರೂ ಅವರನ್ನು ಬಂಧಿಸಿ ಸಂಘಟನೆ ನಿಷೇಧಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪುತ್ತೂರು: ರಥದಲ್ಲಿ ಸಾವರ್ಕರ್ ಬದಲು ಟಿಪ್ಪು ಫೋಟೋ ಹಾಕಲು ಒತ್ತಡ; ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಎಸ್ಡಿಪಿಐ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ತಂದೆಯಿಂದ ಪುಲ್ವಾಮಾದಲ್ಲಿ ರಾಷ್ಟ್ರ ಧ್ವಜಾರೋಹಣ
Published On - 4:36 pm, Sun, 15 August 21