ಅಭಿನವ ವಾಲ್ಮೀಕಿ ಖ್ಯಾತಿಯ, ಯಕ್ಷಗಾನ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ನಿಧನ

Bottikere Purushottama Poonja: ಕಟೀಲು ಮೇಳದ ಹಿರಿಯ ಭಾಗವತರಾಗಿದ್ದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ (65) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ. ಪುರುಷೋತ್ತಮ ಪೂಂಜರು ಯಕ್ಷಗಾನ ವೇಷಧಾರಿ, ಪ್ರಸಂಗಕರ್ತ, ಹಿಮ್ಮೇಳ ವಾದಕ, ಸಮರ್ಥ ಭಾಗವತರಾಗಿ ಯಕ್ಷರಂಗದ ವಿವಿಧ ಮಜಲುಗಳಲ್ಲಿ ಅನುಭವ ಹೊಂದಿದ್ದರು.

ಅಭಿನವ ವಾಲ್ಮೀಕಿ ಖ್ಯಾತಿಯ, ಯಕ್ಷಗಾನ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ನಿಧನ
ಬೊಟ್ಟಿಕೆರೆ ಪುರುಷೋತ್ತಮ ಪೂಂಜ
TV9kannada Web Team

| Edited By: Skanda

Aug 15, 2021 | 9:35 AM

ಮಂಗಳೂರು: ಕಟೀಲು ಮೇಳದ ಹಿರಿಯ ಭಾಗವತರಾಗಿದ್ದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ (65) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ. ಪುರುಷೋತ್ತಮ ಪೂಂಜರು ಯಕ್ಷಗಾನ ವೇಷಧಾರಿ, ಪ್ರಸಂಗಕರ್ತ, ಹಿಮ್ಮೇಳ ವಾದಕ, ಸಮರ್ಥ ಭಾಗವತರಾಗಿ ಯಕ್ಷರಂಗದ ವಿವಿಧ ಮಜಲುಗಳಲ್ಲಿ ಅನುಭವ ಹೊಂದಿದ್ದರು. ಪೂಂಜರು ಕನ್ನಡ ಮತ್ತು ತುಳು ಭಾಷೆಯಲ್ಲಿ ಸುಮಾರು 32 ಪ್ರಸಂಗಗಳನ್ನು ರಚಿಸಿದ್ದಾರೆ. ಅವರ ‘ಮಾನಿಷಾದ’ ಎಂಬ ಯಕ್ಷಗಾನ ಪ್ರಸಂಗವು ಅಪಾರ ಜನಪ್ರಿಯತೆ ಗಳಿಸಿದೆ.

ಮಂಗಳೂರಿನ ಮಂಜನಾಡಿಯ ಬೊಟ್ಟಿಕೆರೆ ನಿವಾಸಿ ಆಗಿರುವ ಪುರುಷೋತ್ತಮ‌ ಪೂಂಜರು, 1953 ಜೂನ್ 21 ರಂದು ಜನಿಸಿದ್ದರು. ಯಕ್ಷಗಾನದಲ್ಲಿ ಹೊಸಹಿತ್ಲು ಮಹಾಲಿಂಗ ಭಟ್ಟ ಹಾಗೂ ಆನೆಗುಂಡಿ ಗಣಪತಿ ಭಟ್ಟರ ಮಾರ್ಗದರ್ಶನದಲ್ಲಿ ಸವ್ಯಸಾಚಿ ಎನಿಸಿಕೊಂಡಿದ್ದರು. ಅಕಾಡೆಮಿಕ್ಸ್‌ನಲ್ಲಿ ಬಿಎಸ್ಸಿ ಪದವಿಯನ್ನೂ ಗಳಿಸಿದ್ದರು.

ಪ್ರಧಾನ ಭಾಗವತರಾಗಿ ಅವರು ಸುಮಾರು 45 ವರ್ಷಗಳ ಅನುಭವ ಹೊಂದಿದ್ದಾರೆ. ಕೊನೆಯದಾಗಿ ಕಟೀಲು ಒಂದನೇ ಮೇಳದ ಪ್ರಧಾನ ಭಾಗವತರಾಗಿದ್ದರು. ಅಲ್ಲದೆ, ಉಪ್ಪಳ ಮೇಳ, ಮುಂಬೈನ ಗೀತಾಂಬಿಕಾ‌ ಮೇಳ, ಪುತ್ತೂರು ಮೇಳ, ಕರ್ನಾಟಕ ಮೇಳದಲ್ಲಿ ಭಾಗವತರಾಗಿದ್ದರು. ಸುಮಾರು 30 ವರ್ಷಗಳ ಕಾಲ ಕಟೀಲು ಮೇಳ ಒಂದರಲ್ಲೇ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು.

ಪುರುಷೋತ್ತಮ ಪೂಂಜರು, ಮಾನಿಷಾದ, ನಳಿನಾಕ್ಷಿ ನಂದಿನಿ, ಉಭಯಕುಲ ಬಿಲ್ಲೋಜ, ಮೇಘಮಯೂರಿ, ಸ್ವರ್ಣ ನೂಪುರ, ಕ್ಷಾತ್ರ ಮೇಧ, ಮಾತಂಗ ಕನ್ಯೆ, ಗಾಂಗೇಯ, ರಾಜಾ ದ್ರುಪದ, ಅಮೃತ ವರ್ಷಿಣಿ (ಕನ್ನಡ ಪ್ರಸಂಗಗಳು), ಕುಡಿಯನ ಕೊಂಬಿರೆಲ್, ದಳವಾಯಿ ಮುದ್ದಣೆ, ಗರುಡಕೇಂಜವೆ, ಪಟ್ಟದಕತ್ತಿ, ಕುಡಿಯನ ಕಣ್ಣ್ (ತುಳು ಪ್ರಸಂಗಗಳು) ಮುಂತಾದ ಪ್ರಸಂಗಗಳನ್ನು ರಚಿಸಿದ್ದಾರೆ. ಅವರ ಪ್ರಸಂಗಗಳನ್ನು ಯಕ್ಷಧ್ರುವ ಪಟ್ಲ‌ ಫೌಂಡೇಶನ್ ಟ್ರಸ್ಟ್ ‘ಅಂಬುರುಹ’ ಎಂಬ ಹೆಸರಿನಿಂದ ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ: Art and Entertainment : ಪುರುಷ ದೃಷ್ಟಿಕೋನದಿಂದಲೇ ಯಕ್ಷಗಾನದಲ್ಲಿ ಶೃಂಗಾರ ವ್ಯಕ್ತ

ಮೂಡಬಿದಿರೆಯಲ್ಲಿ ವೇದಿಕೆಯಲ್ಲಿ ಕುಣಿಯುವಾಗಲೇ ಕುಸಿದು ಬಿದ್ದ ಯಕ್ಷಗಾನ ಕಲಾವಿದ

(Yakshagana Bhagavatha Artist and Scholar Bottikere Purushottama Poonja Death)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada