ಮಂಗಳೂರು: ಲಾಡ್ಜ್​ ರೂಮ್​ನಲ್ಲಿ ಬೆಡ್​ಗೆ ಬೆಂಕಿ ತಗುಲಿ ವ್ಯಕ್ತಿ ಸಜೀವದಹನ!

| Updated By: ರಮೇಶ್ ಬಿ. ಜವಳಗೇರಾ

Updated on: Nov 23, 2023 | 11:35 AM

ಲಾಡ್ಜ್​ ರೂಮ್​ನಲ್ಲಿ ಬೆಡ್​ಗೆ ಬೆಂಕಿ ತಗುಲಿ ವ್ಯಕ್ತಿಯೋರ್ವ ಸಜೀವ ದಹನವಾಗಿರುವ ಘಟನೆ ಮಂಗಳೂರಿನ ಕಂಕನಾಡಿಯ ರೆಸಿಡೆನ್ಸಿ ಗೇಟ್ ಲಾಡ್ಜ್​ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೇ ತಾವೇ ಬೆಂಕಿಹಚ್ಚಿಕೊಂಡಿದ್ದಾರಾ? ಅಥವಾ ಸಿಗರೇಟ್​ನಿಂದ ಏನಾದರೂ ಬೆಡ್​ಗೆ ಬೆಂಕಿ ತಗುಲಿದ್ಯಾ? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ.

ಮಂಗಳೂರು: ಲಾಡ್ಜ್​ ರೂಮ್​ನಲ್ಲಿ ಬೆಡ್​ಗೆ ಬೆಂಕಿ ತಗುಲಿ ವ್ಯಕ್ತಿ ಸಜೀವದಹನ!
Follow us on

ಮಂಗಳೂರು, (ನವೆಂಬರ್, 23): ಲಾಡ್ಜ್​ (Lodge)ರೂಮ್​ನಲ್ಲಿ ಬೆಡ್​ಗೆ ಬೆಂಕಿ ತಗುಲಿ ವ್ಯಕ್ತಿಯೋರ್ವ ಸಜೀವ ದಹನವಾಗಿರುವ ಘಟನೆ ಮಂಗಳೂರಿನ (Mangaluru) ಕಂಕನಾಡಿಯ ರೆಸಿಡೆನ್ಸಿ ಗೇಟ್ ಲಾಡ್ಜ್​ನಲ್ಲಿ ನಡೆದಿದೆ. ಬೆಂದೂರವೆಲ್ ನಿವಾಸಿ ಯಶ್​ರಾಜ್ ಸುವರ್ಣ(43) ಎನ್ನುವರು ಸಜೀವ ದಹನವಾಗಿದ್ದಾರೆ. ನವೆಂಬರ್ 15ರಿಂದ ಹೋಟೆಲ್​ನಲ್ಲಿ ವಾಸವಿದ್ದ ಯಶ್​ರಾಜ್, ನಿನ್ನೆ(ನವೆಂಬರ್ 22) ರಾತ್ರಿ ಊಟ ಮುಗಿಸಿ ರೂಮ್​ಗೆ ಬಂದಿದ್ದ. ಬಳಿಕ ಮಧ್ಯರಾತ್ರಿ 12 ಗಂಟೆಗೆ ರೂಮ್​ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಯಶ್​ರಾಜ್ ಸುವರ್ಣ ಸಜೀವ ದಹನವಾಗಿದ್ದಾರೆ. ಆದ್ರೆ, ಬೆಂಕಿ ಹೇಗೆ ಹೊತ್ತಿಕೊಂಡಿದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ನಿನ್ನೆ ರಾತ್ರಿ ಊಟ ಮುಗಿಸಿ ರೂಮ್​ಗೆ ಬಂದಿದ್ದ. ಬಳಿಕ ಮಧ್ಯರಾತ್ರಿ 12 ಗಂಟೆಗೆ ರೂಮ್​ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ರೂಮ್​​ನಿಂದ ಹೊಗೆ ಬರುವುದನ್ನು ಕಂಡು ಲಾಡ್ಜ್​ ಸಿಬ್ಬಂದಿ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದ್ರೆ, ಅಷ್ಟೊತ್ತಿಗಾಗಲೇ ಯಶ್​ರಾಜ್ ಸುವರ್ಣ ಸುಟ್ಟು ಕರಕಲಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಯಶ್​ರಾಜ್ ಸುವರ್ಣ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೇ ತಾವೇ ಬೆಂಕಿಹಚ್ಚಿಕೊಂಡಿದ್ದಾರಾ? ಅಥವಾ ಸಿಗರೇಟ್​ನಿಂದ ಏನಾದರೂ ಬೆಡ್​ಗೆ ಬೆಂಕಿ ತಗುಲಿದ್ಯಾ? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

ಕೊಡಗು: ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದ ನಿವಾಸದಿಂದ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಮನೆಯ ಸಮೀಪದ ಕೀರೆಹೊಳೆಯಲ್ಲಿ ಬಾಚಮಾಡ ಸೌಮ್ಯ(37) ಮೃತದೇಹ ಸಿಕ್ಕಿದೆ. ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:24 am, Thu, 23 November 23