ಶಿರಾಡಿ ಘಾಟ್ – ಪಶ್ಚಿಮ ಘಟ್ಟಗಳಲ್ಲಿ ಸುಂದರವಾದ ಒಂದು ಘಾಟ್ ಪ್ರದೇಶ. ಇಲ್ಲಿನ ಸೌಂದರ್ಯಕ್ಕೆ ಮಾರುಹೋಗದ ಪ್ರಯಾಣಿಕನಿಲ್ಲ. ಇದು ಎಷ್ಟು ರಮಣೀಯವೊ ಅಷ್ಟೆ, ರೌದ್ರ ಕೂಡ ಅನ್ನೊದು ಭೂಕುಸಿತವಾದ ಸಂದರ್ಭದಲ್ಲಿ ಅನುಭವಕ್ಕೆ ಬಂದೀತು. ಮಳೆಗಾಲ ಬಂತು ಅಂದ್ರೆ ಶಿರಾಡಿ ಘಾಟ್ (Shiradi Ghat) ನಲ್ಲಿ ರಸ್ತೆ ಕುಸಿತದ ಭೀತಿ ಎದುರಾಗುತ್ತೆ. ಆದ್ರೆ ಇದೇ ಶಿರಾಡಿ ಘಾಟ್ ನಲ್ಲಿ ಸುರಂಗಗಳನ್ನು ಮಾಡುವ ಚತುಷ್ಪತ ರಸ್ತೆ ಯೋಜನೆಗೆ (Mangaluru-Bengaluru Shiradi tunnel road project) ತಯಾರಿ ನಡೆಯುತ್ತಿದೆ. ಹಾಲಿನ ನೊರೆಯಂತೆ ಉಕ್ಕುವ ಜರಿಗಳು. ಹಸಿರು ಹೊದಿಕೆಯ ಮಧ್ಯೆ ಬಳುಕುತ್ತಾ ಸಾಗುವ ತೊರೆಗಳು. ಈ ಸೌಂದರ್ಯಕ್ಕೆ ಮಾರುಹೊಗದವರಿಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆ-ಹಾಸನ ಜಿಲ್ಲೆ ಗಡಿಯಲ್ಲಿರೊ ಶಿರಾಡಿ ಘಾಟ್. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಪ್ರಮುಖ ಘಾಟ್ ಸಕ್ಷನ್ ಗಳಲ್ಲಿ ಒಂದು ಈ ಶಿರಾಡಿ ಘಾಟ್. ಬೆಂಗಳೂರು-ಮಂಗಳೂರು ಸಂಪರ್ಕಿಸೊ ಮುಖ್ಯವಾದ ರಸ್ತೆ.
ಈ ಹಿಂದೆ ಇಲ್ಲಿ ಸುರಂಗ ಮಾರ್ಗ ಮಾಡುವುದಾಗಿ ಯೋಜನೆ ಮಾಡಲಾಗಿತ್ತು. ಆದ್ರೆ ಅದು ಸಾದ್ಯವಿಲ್ಲ ಅಂತಾ ಕೈಬಿಟ್ಟು ಈಗ ಇರೋ ಹೆದ್ದಾರಿಯನ್ನೇ ಚತುಷ್ಪತ ರಸ್ತೆಯನ್ನಾಗಿಸುವ ನಿರ್ಧಾರ ಮಾಡಲಾಗಿದೆ. ಇಲ್ಲಿ ಸುರಂಗ ಮತ್ತು ಸೇತುವೆಗಳನ್ನು ಮಾಡಿ ಚತುಷ್ಪತ ರಸ್ತೆಯನ್ನಾಗಿ ಮಾಡಲು ನಿರ್ಧಾರ ಮಾಡಲಿದೆ. ನೇರ ಸುರಂಗ ಮಾರ್ಗ ನಿರ್ಮಾಣಕ್ಕೆ, ಅರಣ್ಯ ಇಲಾಖೆ ಅನುಮತಿ ಕ್ಲಿಷ್ಟವಾಗಿದ್ದು, ಜತೆಗೆ 712 ಸಾವಿರ ಕೋಟಿ ರೂ ವೆಚ್ಚವಾಗುತ್ತದೆ. ಅದರ ಬದಲು ಈಗ ಇರುವ ಹೆದ್ದಾರಿಯನ್ನು ಚತುಷ್ಪಥವಾಗಿ ಪರಿವರ್ತಿಸುವಾಗ ಮೂರು ಸುರಂಗಗಳು ಒಳಗೊಂಡಿರುತ್ತವೆ. ಉಳಿದ ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಈ ಪರಿಷ್ಕೃತ ಯೋಜನೆಗೆ 2,500 ಕೋಟಿ ವೆಚ್ಚದ ಡಿಪಿಆರ್ ಸಿದ್ಧಪಡಿಸಲಾಗಿದೆ.
ಇನ್ನು ಈ ಯೋಜನೆಗೆ ಪರಿಸರವಾದಿಗಳ ವಿರೋಧ ಇದೆ. ಈ ಯೋಜನೆ ಮಾಡದಂತೆ ಹೈಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ಮೊದಲೆ ಮಳೆಗಾಲದಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಈಗಾಗಲೇ ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಶಿರಾಡಿ ಘಾಟ್ ಬಳಿ ಬರುವ ಗುಂಡ್ಯ-ಸಕಲೇಶಪುರ ನಡುವಿನ ಪಶ್ಚಿಮಘಟ್ಟ ಅರಣ್ಯದಲ್ಲಿ ಅರಣ್ಯಕ್ಕೆ ಹಾನಿಯುಂಟು ಮಾಡಲಾಗಿದೆ. ಇನ್ನು ಟನಲ್ ಮಾಡಿದ್ರೆ ಜೀವಜಲದ ಸರಪಳಿಗೆ ಏಟು ಬೀಳುತ್ತೆ. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಕೂಡ ಭೂಕುಸಿತವಾಗುವ ಸಾಧ್ಯತೆಗಳು ಹೆಚ್ಚಿದೆ. ಅರಣ್ಯದಲ್ಲಿ 30 ಕಿಲೋಮೀಟರ್ ವೇಗಮಿತಿ ಇರುತ್ತೆ. ಈಗ ಇರೋ ರಸ್ತೆಯಲ್ಲಿ ಅದೇ ವೇಗವಿದೆ. ಇಷ್ಟು ವೇಗಮಿತಿಗೆ ಚತುಷ್ಪತ ರಸ್ತೆ ಯಾಕೆ ಬೇಕು ಅನ್ನೊ ವಾದ ಪರಿಸರವಾದಿಗಳದ್ದು (Environmentalist).
ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:32 am, Mon, 3 July 23